ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ ತುಂಬಲು ಮುಂದಾದ ಆಪ್ತ ಮಿತ್ರ ! ಇಲ್ಲಿದೆ ಡೀಟೇಲ್ಸ್ !

ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ ತುಂಬಲು ಮುಂದಾದ ಆಪ್ತ ಮಿತ್ರ ! ಇಲ್ಲಿದೆ ಡೀಟೇಲ್ಸ್ !

ನಮಸ್ಕಾರ ಸ್ನೇಹಿತರೇ, ಭಾರತದ ಆಪ್ತಮಿತ್ರ ಇಸ್ರೇಲ್ ದೇಶವು ಇದೀಗ ಮತ್ತೊಮ್ಮೆ ಭಾರತದ ಅಭಿಯಾನಕ್ಕೆ ಕೈ ಜೋಡಿಸಲು ಮುಂದಾಗಿದೆ. ಭಾರತ ದೇಶದ ಯಾವುದೇ ಅಂತಾರಾಷ್ಟ್ರೀಯ ನಡೆಯಲ್ಲಾಗಲಿ, ಅಥವಾ ದೇಶೀ ಯೋಜನೆಗಳಲ್ಲಾಗಲಿ ಸದಾ ಭಾರತದ ಜೊತೆ ಹೆಜ್ಜೆ ಹಾಕುತ್ತದೆ ಇಸ್ರೇಲ್. ಕೇವಲ ಯುದ್ಧ, ಮಿಲಿಟರಿ ಅಷ್ಟೇ ಅಲ್ಲಾ, ಇಸ್ರೋದ ಚಂದ್ರಯಾನ ಸೇರಿದಂತೆ ಹಲವಾರು ಯೋಜನೆಗಳಲ್ಲಿ ಭಾರತದ ಜೊತೆ ಕೈ ಜೋಡಿಸಲು ಕೈ ಚಾಚುತ್ತದೆ. ಚಂದ್ರಯಾನದ ಸ್ಯಾಟೆಲೈಟ್ ನಮ್ಮ ಸಂಪರ್ಕ ಕಳೆದು ಕೊಂಡಾಗ ಇಸ್ರೇಲ್ ದೇಶವು ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿ ತಮ್ಮಲ್ಲಿನ ಹಲವಾರು ಮಾಹಿತಿಗಳನ್ನು ತನ್ನ ದೇಶದ ಭದ್ರತೆಯ ಕುರಿತಾದ ಸೂಕ್ಷ್ಮ ಮಾಹಿತಿಗಳನ್ನು ಕೂಡ ಕಿಂಚಿತ್ತೂ ಆಲೋಚನೆ ಮಾಡದೇ ಹಂಚಿಕೊಳ್ಳುವ ಮೂಲಕ ಯಾಕೆ ನಾವು ಆಪ್ತಮಿತ್ರ ಎನ್ನುತ್ತೇವೆ ಎಂಬುದನ್ನು ಸಾಬೀತು ಪಡಿಸಿತ್ತು.

ಇದೀಗ ಇದೇ ಆಪ್ತಮಿತ್ರ ದೇಶದ ಎಲ್ಲೆಡೆ ಬಾರಿ ಅಭಿಯಾನಗಳ ಮೂಲಕ ಹಾಗೂ ಜನರ ಬೆಂಬಲದ ಮೂಲಕ ಸದ್ದು ಮಾಡುತ್ತಿರುವ ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಬಲ ತುಂಬಲು ಮುಂದಾಗಿದೆ. ಹೌದು ಸ್ನೇಹಿತರೇ, ಭಾರತದಲ್ಲಿ ಮಿಲಿಟರಿ ಉತ್ಪನ್ನಗಳ ತಯಾರಿಕೆ ಭಾರತದ ಅತಿ ದೊಡ್ಡ ಕನಸು, ಅದರಲ್ಲಿಯೂ ಸಣ್ಣ ಶಸ್ತ್ರಾಸ್ತ್ರ ಗಳನ್ನು ಭಾರತದಲ್ಲಿ ಉತ್ಪಾದನೆ ಮಾಡುವುದರಿಂದ ಸ್ವದೇಶೀ ಭಾರತವಷ್ಟೇ ಅಲ್ಲಾ, ಸಾವಿರಾರು ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತವೆ. ಇದೇ ಕಾರಣಕ್ಕೆ ಇದೀಗ ಇಸ್ರೇಲ್ ದೇಶದ ವಿಶ್ವದಲ್ಲಿಯೇ ಬಲಾಢ್ಯ ರೈಫಲ್ ಗಳ ಸಾಲಿನಲ್ಲಿ ಕಂಡು ಬರುವ ಆರಾಡ್ ಮತ್ತು ಕಾರ್ಮೆಲ್ ರೈಫಲ್ ಗಳನ್ನು ಭಾರತದಲ್ಲಿ ತಯಾರಿ ಮಾಡಲು ಇಸ್ರೇಲ್ ದೇಶದ ಕಂಪನಿ ಭಾರತದ ಜೊತೆ ಕೈ ಜೋಡಿಸಿದೆ.

ಕಳೆದ 2017 ರಲ್ಲಿ ಸ್ಥಾಪಿಸಿದ ಇಸ್ರೇಲ್ ವೆಪನ್ಸ್ ಸಿಸ್ಟಮ್ (ಜಂಟಿ ಉದ್ಯಮ PLR ಸಿಸ್ಟಮ್) ಸ್ಥಾವರದಲ್ಲಿ ಇದೀಗ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ತಯಾರಿಸಲು ಮುಂದಾಗಿದೆ. ಇವುಗಳನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸರಬರಾಜು ಮಾಡುವ ಗುರಿ ಹೊಂದಿದ್ದು ಮುಂದಿನ ದಿನಗಳಲ್ಲಿ ಸೇನಾ, ನೌಕಾಪಡೆ ಮತ್ತು ವಾಯುಪಡೆಯ ವಿಶೇಷ ಪಡೆಗಳ ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ರಾಜ್ಯ ಪೊಲೀಸರಿಂದ ಒಪ್ಪಂದಗಳನ್ನು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಸಣ್ಣ ಶಸ್ತ್ರಾಸ್ತ್ರ ಗಳು ಈ ಹಿಂದೆ ತಯಾರು ಮಾಡಲಾಗುತಿತ್ತು. ಆದರೆ ಆರಾಡ್ ಮತ್ತು ಕಾರ್ಮೆಲ್ ರೈಫಲ್ ಗಳನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ತಯಾರು ಮಾಡಲಾಗುತ್ತದೆ.