ಆತ್ಮ ನಿರ್ಭರ್ ಭಾರತಕ್ಕೆ ಆನೆಬಲ ! ಅಭಿಯಾನಕ್ಕೆ ಕಳೆದ 4 ದಿನಗಳಲ್ಲಿ ದಿಗ್ಗಜ ಕಂಪನಿಗಳು ಘೋಷಣೆ ಮಾಡಿದ್ದೇನು ಗೊತ್ತಾ?

ಆತ್ಮ ನಿರ್ಭರ್ ಭಾರತಕ್ಕೆ ಆನೆಬಲ ! ಅಭಿಯಾನಕ್ಕೆ ಕಳೆದ 4 ದಿನಗಳಲ್ಲಿ ದಿಗ್ಗಜ ಕಂಪನಿಗಳು ಘೋಷಣೆ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ದೇಶವು ಸ್ವದೇಶೀ ಭಾರತ ಎಂಬ ಮಹಾ ಉದ್ದೇಶದೊಂದಿಗೆ ಸಾಧ್ಯವಾದಷ್ಟು ವಸ್ತುಗಳನ್ನು ಭಾರತದಲ್ಲಿ ತಯಾರಿಸುವ ಮೂಲಕ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ಬಲಿಷ್ಠ ಭಾರತವನ್ನು ಮತ್ತಷ್ಟು ಬಲಿಷ್ಠ ಮಾಡುವುದರ ಕುರಿತು ಗಮನ ಹರಿಸುತ್ತಿದೆ. ಆತ್ಮ ನಿರ್ಭರ್ ಯೋಜನೆ ಎಂಬ ಹೆಸರಿನೊಂದಿಗೆ ವಿಶ್ವದ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಭಾರತದಲ್ಲಿಯೇ ತಯಾರು ಮಾಡುವ ಸಂಕಲ್ಪ ಮಾಡಲಾಗಿದೆ.ಈ ಯೋಜನೆಗೆ ಬಲ ತುಂಬಲು ದಿಗ್ಗಜ ಕಂಪನಿಗಳು ಕೂಡ ಕೈ ಜೋಡಿಸಿವೆ. ನಮ್ಮ ಭಾರತೀಯ ಮೂಲದ ಹಲವಾರು ಕಂಪನಿಗಳು, ನಾವು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳನ್ನು ಇಲ್ಲಿಯೇ ತಯಾರು ಮಾಡಿಕೊಳ್ಳುತ್ತೇವೆ ಹಾಗೂ ಇತರ ದೇಶಗಳಲ್ಲಿನ ನಮ್ಮ ಉತ್ಪಾದನಾ ಘಟಕಗಳನ್ನು ಭಾರತಕ್ಕೆ ಸ್ಥಳಾಂತರ ಮಾಡುತ್ತೇವೆ ಎಂದಿವೆ.

ಇನ್ನು ಕೆಲವು ಕಂಪನಿಗಳು ಭಾರತದಲ್ಲಿ ನಾವು ಹೊಸ ಹೊಸ ರೀತಿಯ ವಸ್ತುಗಳ ತಯಾರಿಕೆಯನ್ನು ಆರಂಭಿಸುತ್ತೇವೆ ಖಂಡಿತ ಅಂತಾರಾಷ್ಟ್ರೀಯವಾಗಿ ಭಾರತದ ವಸ್ತುಗಳ ಮಾರುಕಟ್ಟೆಯನ್ನು ವಿಸ್ತಾರ ಮಾಡಿಯೇ ತೀರುತ್ತೇವೆ ಎನ್ನುತ್ತಿವೆ. ಇದೀಗ ಈ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಇತರ ದೇಶಗಳ ದಿಗ್ಗಜ ಕಂಪನಿಗಳು ಕೂಡ ಕೈ ಜೋಡಿಸಲು ಮುಂದಾಗಿವೆ. ಇದರಿಂದ ಭಾರತೀಯರ ಅಭಿಯಾನಕ್ಕೆ ದಿನೇ ದಿನೇ ಬೆಂಬಲ ಹೆಚ್ಚಾಗುತ್ತಿದ್ದು, ಕೇವಲ ಕಳೆದ ನಾಲ್ಕೈದು ದಿನಗಳಲ್ಲಿ ಪ್ರಮುಖವಾಗಿ ಬರೋಬ್ಬರಿ 4 ದಿಗ್ಗಜ ಕಂಪನಿಗಳು ಸಾವಿರಾರು ಕೋಟಿಯಷ್ಟು ಬಂಡವಾಳ ಹೂಡಿಕೆಗೆ ಮುಂದಾಗಿವೆ. ಇದರಿಂದ ಭಾರತದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಮತ್ತಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ.

ಇದೀಗ ಪ್ರಮುಖವಾಗಿ ಹೂಡಿಕೆ ಘೋಷಿಸಿದ ಕಂಪನಿಗಳ ಡೀಟೇಲ್ಸ್ ಇಂತಿವೆ. ಮೊದಲನೆಯದಾಗಿ ಕೆಲವೇ ಕೆಲವು ಗಂಟೆಗಳ ಹಿಂದೆ ಗೂಗಲ್ ಕಂಪನಿಯು ಮುಂದಿನ 5 ರಿಂದ 7 ವರ್ಷಗಳಲ್ಲಿ ಬರೋಬ್ಬರಿ 75,000 ಕೋಟಿ ಹೂಡಿಕೆಯನ್ನು ಭಾರತದಲ್ಲಿ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಆದೇಶ ಹೊರಡಿಸಿದೆ. ಇನ್ನು ಎರಡು ದಿನಗಳ ಹಿಂದೆ 7,500 ಕೋಟಿ ಹಣವನ್ನು ನಾವು ಭಾರತದಲ್ಲಿ ಹೂಡಿಕೆ ಮಾಡುವುದಾಗಿ ತೈವಾನ್ ದೇಶದ ಆಪಲ್ ಮೊಬೈಲ್ ಉತ್ಪನ್ನದ ಘಟಕವಾದ ಫಾಸ್ಕಾಂನ್ ಕಂಪನಿ ಹೇಳಿತ್ತು. ಇನ್ನು ಮತ್ತೊಂದು ದಿಗ್ಗಜ ಕಂಪನಿಯಾದ ಥಾಮ್ಸನ್ ಕಂಪನಿಯು 1000 ಕೋಟಿ ಹಣವನ್ನು ಮುಂದಿನ 5 ವರ್ಷಗಳಲ್ಲಿ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಕೊನೆಯದಾಗಿ ಸ್ಯಾಮ್ಸ್ಯಾಂಗ್ ಕಂಪನಿಯು ಇನ್ನು ಮುಂದೆ ವಿಶ್ವಕ್ಕೆ ಸರಬರಾಜು ಮಾಡುವ ಸ್ಮಾರ್ಟ್ ವಾಚ್ ಗಳನ್ನು ಭಾರತದಲ್ಲಿ ತಯಾರು ಮಾಡುತ್ತೇವೆ ಎಂಬುವ ಘೋಷಣೆ ಮಾಡಿದೆ. ಒಟ್ಟಿನಲ್ಲಿ ದಿನಕ್ಕೊಂದು ಘೋಷಣೆಗಳು ಕೇಳಿ ಬರುತಿದ್ದು ಯೋಜನೆ ಯಶಸ್ವಿಯಾಗುವ ಪುಟ್ಟ ಪುಟ್ಟ ಸೂಚನೆಗಳು ಕಂಡುಬರುತ್ತಿವೆ.