ಚಾಣಕ್ಯ ನೀತಿ: ನೀವು ಹಣ ಸಂಪಾದನೆ ಮಾಡುತ್ತಿರುವಾಗ ಈ 4 ಕೆಲಸಗಳನ್ನು ಮಾಡಲೇಬೇಡಿ ! ಲಕ್ಷ್ಮಿ ಕೈಯಲ್ಲಿ ನಿಲ್ಲುವುದಿಲ್ಲ

ಚಾಣಕ್ಯ ನೀತಿ: ನೀವು ಹಣ ಸಂಪಾದನೆ ಮಾಡುತ್ತಿರುವಾಗ ಈ 4 ಕೆಲಸಗಳನ್ನು ಮಾಡಲೇಬೇಡಿ ! ಲಕ್ಷ್ಮಿ ಕೈಯಲ್ಲಿ ನಿಲ್ಲುವುದಿಲ್ಲ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇಂದಿನ ಆಧುನಿಕ ಯುಗವು ಅಂದಾಜು ಮಾಡದಂತಹ ಅಪ್ರತಿಮ ಅರ್ಥಶಾಸ್ತ್ರಜ್ಞ ಚಾಣಕ್ಯ ರವರು ತಾವು ಬರೆದ ಪುಸ್ತಗಳಲ್ಲಿ ಅನೇಕ ಮಾಹಿತಿಗಳನ್ನು ನೀಡುದ್ದಾರೆ. ಇವರೊಬ್ಬರು ನುರಿತ ಜ್ಞಾನಿ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಪ್ರತಿಯೊಬ್ಬರ ಜೀವನವನ್ನು ಯಶಸ್ವಿಗೊಳಿಸಲು ಅಗತ್ಯವಿರುವಂತಹ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಹಣವನ್ನು ಉಳಿಸುವುದು, ಹೂಡಿಕೆ ಮಾಡುವುದು ಹೇಗೆ ಹಾಗೂ ಖರ್ಚಿನ ಬಗ್ಗೆ ತಮ್ಮ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. ಅದೇ ಪುಸ್ತಕದಲ್ಲಿ ನೀವು ಹಣ ಗಳಿಸುತ್ತಿರುವ ಸಂದರ್ಭದಲ್ಲಿ, ಈ 4 ಕಾರ್ಯಗಳನ್ನು ಎಂದಿಗೂ ಮಾಡಬಾರದು, ಒಂದು ವೇಳೆ ಮಾಡಿದರೇ ಖಂಡಿತಾ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ, ನಷ್ಟ ಅನುಭವಿಸುತ್ತಾರೆ. ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ ಎಂದು ಬರೆದಿದ್ದಾರೆ.

ಮೊದಲನೇಯದಾಗಿ ನೀವು ದುಡ್ಡಿಯುತ್ತಿರುವ ಹಣದ ಕುರಿತು ಹೆಚ್ಚು ಮಾತನಾಡಬಾರದು, ಅಗತ್ಯ ಬಂದಾಗ ಉಪಯೋಗಿಸಿ. ಆದರೆ ಅದರ ಕುರಿತು ಹೆಚ್ಚಿನ ಉಲ್ಲೇಖಗಳು ಬೇಡ. ಹಣಗಳಿಸಿದ ನಂತರ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಆಲೋಚನೆ ಮಾಡಿ ಮುನ್ನುಗ್ಗಿ. ಖರ್ಚಿನ ಕುರಿತು ಗಮನ ಹರಿಸಿ, ಉಳಿತಾಯ ಮತ್ತು ಹಣದ ಸುರಕ್ಷತೆಯ ಬಗ್ಗೆ ಗಮನ ಹರಿಸಿ. ನಿಮ್ಮ ಸಂಪತ್ತಿನ ಬಗ್ಗೆ ಇತರರೊಂದಿಗೆ ಚರ್ಚಿಸುವ ಕಾರಣ ಶತ್ರುಗಳ ಕಿವಿ ಎಚ್ಚರಗೊಳ್ಳುತ್ತದೆ. ಇದರಿಂದ ನಿಮಗೆ ನಷ್ಟವೇ ಹೊರತು ಯಾವುದೇ ಲಾಭವಿಲ್ಲ. ಇನ್ನು ಎರಡನೇಯದಾಗಿ, ನೀವು ಗಳಿಸುವ ಹಣದ ಕುರಿತು ಎಂದಿಗೂ ಅಹಂಕಾರ ಅಥವಾ ಹೆಮ್ಮೆ ಪಡಬಾರದು. ಹಾಗೇ ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ ಹಾಗೂ ಅವಳ ಕೃಪೆಯು ಕಡಿಮೆಯಾಗುತ್ತದೆ. ಜನರು ತಮ್ಮ ಸಂಪತ್ತಿನ ಕುರಿತು ವಿಪರೀತ ಉತ್ಸುಕರಾಗಿರಬಾರದು ಎಂದು ಚಾಣಕ್ಯ ರವರು ಹೇಳಿದ್ದಾರೆ.

ಇನ್ನು ಮೂರನೇಯದಾಗಿ ಲಕ್ಷ್ಮಿಯ ಮನಸ್ಸು ಚಂಚಲ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಲಕ್ಷ್ಮಿಯನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು, ಸರಿಯಾದ ಸ್ಥಳ ಹಾಗೂ ಸರಿಯಾದ ಸಮಯಕ್ಕೆ ಅನುಗುಣವಾಗಿ ಹಣವನ್ನು ಬಳಸುವ ವ್ಯಕ್ತಿ ಯಾವಾಗಲು ಯಶಸ್ಸು ಪಡೆಯುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ. ಬಿಕ್ಕಟಿನ ಸಮಯದಲ್ಲಿ ಹಣ ಮಾತ್ರ ಮನುಷ್ಯನ ಒಡನಾಡಿ ಎಂದು ಅವರು ಹೇಳಿದ್ದಾರೆ. ಆದರಿಂದ ಹಣವನ್ನು ಚಿಂತನಶೀಲವಾಗಿ ಖರ್ಚು ಮಾಡಬೇಕು ಎಂದಿದ್ದಾರೆ. ಇನ್ನು ನಾಲ್ಕನೆಯದಾಗಿ ಅನೈತಿಕವಾಗಿ ಗಳಿಸಿದ ಹಣ ಕೆಟ್ಟದು, ಅಂತಹ ಸಂಪತ್ತು ಹೆಚ್ಚು ಕಾಲ ಉಳಿಯುವುದಿಲ್ಲ. ಅಷ್ಟೇ ಅಲ್ಲಾ, ನೀವು ಒಳ್ಳೆಯ ರೀತಿಯಲ್ಲಿ ಹಣ ಗಳಿಸಿದ್ದರೂ ಕೂಡ ತಪ್ಪು ಉದ್ದೇಶಗಳಿಗೆ ಬಳಕೆ ಮಾಡಿದರೇ ನಿಮ್ಮ ಬಳಿ ಲಕ್ಷ್ಮಿ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.