ಈ ವಾರದ ದ್ವಾದಶ ರಾಶಿಗಳ ಫಲಾಫಲ- ಕೆಲವು ರಾಶಿಗಳಿಗೆ ಲಾಭ, ಇನ್ನು ಕೆಲವು ರಾಶಿಗಳು ಆರೋಗ್ಯದ ಕುರಿತು ಗಮನ ಹರಿಸಿ

ಈ ವಾರದ ದ್ವಾದಶ ರಾಶಿಗಳ ಫಲಾಫಲ- ಕೆಲವು ರಾಶಿಗಳಿಗೆ ಲಾಭ, ಇನ್ನು ಕೆಲವು ರಾಶಿಗಳು ಆರೋಗ್ಯದ ಕುರಿತು ಗಮನ ಹರಿಸಿ

0

ನಮಸ್ಕಾರ ಸ್ನೇಹಿತರೇ, ಈ ವಾರದ ದ್ವಾದಶ ರಾಶಿಗಳ ಫಲಾಫಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಳಗಿನಂತೆ ಇದ್ದು, ಕೆಲವು ರಾಶಿಗಳಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಇನ್ನು ಕೆಲವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಒಟ್ಟಾರೆಯಾಗಿ ಎಲ್ಲಾ ರಾಶಿಗಳ ಪ್ರಕಾರ ಗ್ರಹಗಳ ಆಧಾರದ ಮೇಲೆ ಈ ಕೆಳಗಿನಂತೆ ಇದೆ.

ಮೇಷ: 13-July-2020 to 19-July-2020

ಈ ವಾರ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸುತ್ತವೆ. ಆದ್ದರಿಂದ ನೀವು ಈ ವಾರ ಅರ್ಥಹೀನ ವಿಷಯಗಳನ್ನು ನಿರ್ಲಕ್ಷಿಸಿ, ನಿಮ್ಮ ಕೆಲಸದ ಕುರಿತು ಮಾತ್ರ ಗಮನ ಹರಿಸಿ. ಇದರಿಂದ ನಿಮ್ಮ ಕೆಲಸಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಕೌಟುಂಬಿಕವಾಗಿ ಈ ವಾರ ಅಷ್ಟಾಗಿ ಚೆನ್ನಾಗಿ ಇಲ್ಲ, ಆದರಿಂದ ತಾಳ್ಮೆ ಮೂಲಕ ವ್ಯವಹರಿಸಿ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರಿಕೆಯಿಂದ ಹೆಜ್ಜೆಯಿಡಿ. ಮಾತಿನ ಮೇಲೆ ಹಿಡಿತವಿರಲಿ. ಹೊರಗಿನ ಸಮಾಜದಲ್ಲಿ ಇತರರೊಂದಿಗೆ ಮಾತನಾಡುವಾಗ ಕೂಡ ಮಾತಿನ ಕುರಿತು ಎಚ್ಚರಿಕೆ ವಹಿಸುವುದು ಉತ್ತಮ. ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ ನಿಮ್ಮ ಮನೆಯ ಹಿರಿಯರ ಅಭಿಪ್ರಾಯ ತೆಗೆದುಕೊಂಡು ಮುನ್ನೆಡೆಯಿರಿ.

ವೃಷಭ: 13-July-2020 to 19-July-2020

ಆರ್ಥಿಕ ಜೀವನದಲ್ಲಿ ನೀವು ಈ ವಾರ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ನೀವು ಮಾತನಾಡುವ ಪದಗಳ ಕುರಿತು ಎಚ್ಚರಿಕೆಯಿಂದ ಇರಿ, ಇಲ್ಲದಿದ್ದರೇ ನಿಮ್ಮ ಸಾಮಾಜಿಕ ಗೌರವಕ್ಕೆ ಧಕ್ಕೆ ಬರಬಹುದು. ವೈಯಕ್ತಿಕ ಜೀವನದಲ್ಲಿ, ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಹೆಚ್ಚು ಅವಕಾಶಗಳು ಸಿಗುತ್ತವೆ. ಇದರಿಂದ ನಿಮ್ಮ ಧೈರ್ಯವು ಹೆಚ್ಚುತ್ತದೆ ಹಾಗೂ ಮನಸ್ಸು ಶಾಂತವಾಗಿರುವ ಕಾರಣ ಅನೇಕ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತೀರಿ. ಆತ್ಮಮವಿಶ್ವಾಸ ಹೆಚ್ಚಿರುತ್ತದೆ.

ಮಿಥುನ: 13-July-2020 to 19-July-2020

ಈ ವಾರ ನೀವು ನಿಮ್ಮ ಉದ್ಯೋಗ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳು ನಿಮಗೆ ಬೆಂಬಲ ನಿಲ್ಲುತ್ತಾರೆ. ಇದರಿಂದ ನಿಮ್ಮ ಆದಾಯವು ಹೆಚ್ಚಾಗಿರುತ್ತದೆ. ಆದರೆ ವ್ಯಾಪಾರ ಮಾಡುವವರು ಈ ವಾರ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು. ಈ ವಾರ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ, ಇದರಿಂದಾಗಿ ನೀವು ಆರ್ಥಿಕವಾಗಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ಅಗತ್ಯ.

ಕರ್ಕಾಟಕ: 13-July-2020 to 19-July-2020

ಈ ವಾರ ನಿಮ್ಮ ಉದ್ಯೋಗದ ಕ್ಷೇತ್ರದಲ್ಲಿ ಉತ್ತಮ ವಾರವಾಗಲಿದೆ. ಸಮಯಕ್ಕೆ ಮುಂಚಿತವಾಗಿ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಒಂದು ವೇಳೆ ನೀವು ನಿರೋದ್ಯೋಗಿಗಳಾಗಿದ್ದರೇ ಉತ್ತಮ ಕಂಪನಿಯಲ್ಲಿ ನಿಮಗೆ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಕೌಟುಂಬಿಕವಾಗಿ ಈ ವಾರ ಉತ್ತಮವಾಗಿರಲಿದೆ. ನಿಮ್ಮ ತಂದೆಯೊಂದಿಗೆ ಇರುವ ವೈಮನಸ್ಸುಗಳನ್ನು ನಿವಾರಿಸಿಕೊಂಡು ಸಂಬಂಧ ಸುಧಾರಿಸುತ್ತದೆ. ವ್ಯಾಪಾರಿಗಳು ಆಪ್ತರ ಸಹಾಯದಿಂದ ಉತ್ತಮ ಲಾಭಗಳಿಸುವ ಸಾಧ್ಯತೆಗಳಿವೆ. ಆದರೆ ಯಾರನ್ನೇ ಆಗಲಿ ಕುರುಡಾಗಿ ನಂಬುವುದು ಬೇಡ, ವ್ಯವಹಾರಗಳಲ್ಲಿ ಕೊಂಚ ಎಚ್ಚರಿಕೆಯಿಂದ ಇರಿ.

ಸಿಂಹ: 13-July-2020 to 19-July-2020

ಈ ವಾರ ನಿಮ್ಮನ್ನು ಅದೃಷ್ಟ ಹುಡುಕಿಕೊಂಡು ಬರಲಿದೆ. ನಿಮ್ಮ ಬಾಕಿ ಉಳಿದಿರುವ ಎಲ್ಲಾ ಕಾರ್ಯಗಳು ಪೂಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಸಾಮಾಜಿಕವಾಗಿ ಉತ್ತಮ ಗೌರವ ದೊರೆಯಲಿದೆ. ನಿಮ್ಮ ಕಾರ್ಯಗಳನ್ನು ಪೂಣಗೊಳಿಸಲು ಅಡ್ಡಿಗಳು ಇವೆ ಎಂದು ಕೈ ಕಟ್ಟಿ ಕುಳಿತಿರಬೇಡಿ, ಕೆಲಸ ಆರಂಭಿಸಿದರೆ ಮಾತ್ರ ಪೂಣಗೊಳಿಸಲು ಸಾಧ್ಯ. ವ್ಯಾಪಾರಿಗಳಿಗೆ ಈ ವಾರ ಹೆಚ್ಚಿನ ಲಾಭ ಸಿಗುತ್ತದೆ. ಕೌಟುಂಬಿಕವಾಗಿ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಲಿದೆ.

ಕನ್ಯಾ: 13-July-2020 to 19-July-2020

ಆರೋಗ್ಯ ಜೀವನದಲ್ಲಿ ಈ ವಾರ ಕೊಂಚ ಪ್ರತಿಕೂಲವಾಗಿರಲಿದೆ. ಆದರಿಂದ ಸಮತೋಲಿತ ಆಹಾರ, ಯೋಗ ಮತ್ತು ವ್ಯಾಯಾಮಗಳನ್ನು ಮಾಡಿ ಉತ್ತಮ ಸ್ವಾಸ್ತ್ಯ ಕಾಪಾಡಿಕೊಳ್ಳಿ. ಇಲ್ಲವಾದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸುತ್ತವೆ. ಇನ್ನು, ವಿದ್ಯಾರ್ಥಿಗಳಿಗೆ ಈ ವಾರ ಶುಭವಾಗಿರಲಿದ್ದು, ಸಂಶೋಧನಾ ಕಾರ್ಯದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಸಮಯವು ಶುಭವಾಗಿರುತ್ತದೆ. ಸಾಮಾಜಿಕ ವಿಚಾರವಾಗಿ ಹಣ ಖರ್ಚು ಮಾಡುವ ಸಮಯ ಎದುರಾಗುತ್ತದೆ. ನಿಮ್ಮ ತಂದೆ ನಿಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಬೆಂಬಲಕ್ಕೆ ನಿಲ್ಲುತ್ತಾರೆ.

ತುಲಾ: 13-July-2020 to 19-July-2020

ಕೌಟುಂಬಿಕವಾಗಿ ಈ ವಾರ ನಿಮಗೆ ಬಹಳ ಒಳ್ಳೆಯ ಸಮಯವಾಗಿದೆ, ನಿಮ್ಮ ಪೋಷಕರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ವೈವಾಹಿಕ ಜೀವನವು ಕೂಡ ಸುಧಾರಿಸುತ್ತದೆ. ಇನ್ನು ಸಹಭಾಗಿತ್ವದಲ್ಲಿ ವ್ಯಾಪಾರ ಮಾಡಿದರೇ ಈ ವಾರ ಬಹಳ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಆದರೆ ಸಾಮಾಜಿಕ ಮಟ್ಟದಲ್ಲಿ ಇತರರೊಂದಿಗೆ ವಾದ ವಿವಾದಗಳು ಬೇಡ, ಇದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಆಗುವ ಸಾಧ್ಯತೆಗಳಿವೆ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೇ ಈ ವಾರ ಬಹಳ ಒಳ್ಳೆಯ ಸಮಯವಾಗಿರುತ್ತದೆ.

ವೃಶ್ಚಿಕ: 13-July-2020 to 19-July-2020

ಈ ವಾರ ನಿಮ್ಮ ಆರೋಗ್ಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸುತ್ತವೆ. ಇದರಿಂದಾಗಿ ನಿಮ್ಮ ಹಳೆಯ ಕಾಯಿಲೆಗಳನ್ನು ಕೂಡ ನೀವು ತೊಡೆದು ಹಾಕಲು ಸಾಧ್ಯವಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಅಂದುಕೊಂಡದ್ದನ್ನು ಸಾಧಿಸಬಹುದಾಗಿದೆ. ನಿಮ್ಮ ಮಾತು ತೀಕ್ಷ್ಣವಾಗಿರುವ ಕಾರಣ ನಿಮ್ಮ ಎದುರಾಳಿಗಳನ್ನು ಕೂಡ ಬಹಳ ಸುಲಭವಾಗಿ ನಿವಾರಿಸಬಹುದು. ಕೌಟುಂಬಿಕವಾಗಿ ಈ ವಾರ ಕೊಂಚ ಏರಿಳಿತಗಳು ಕಂಡು ಬರುತ್ತವೆ. ಅದರಲ್ಲಿಯೂ ನಿಮ್ಮ ತಂದೆಯೊಂದಿಗೆ ಭಿನ್ನಾಭಿಪ್ರಾಯಗಳು ಉದ್ಭವಿಸುತ್ತವೆ. ಯಾವುದೇ ಭಿನ್ನಾಭಿಪ್ರಾಯಗಳು ಕಂಡು ಬಂದಾಗ ಶಾಂತರಾಗಿದ್ದರೆ ಪರಿಸ್ಥಿತಿ ಹತೋಟಿಯಲ್ಲಿ ಇರುತ್ತದೆ.

ಧನಸ್ಸು: 13-July-2020 to 19-July-2020

ಈ ವಾರ ವಿದ್ಯಾರ್ಥಿಗಳಿಗೆ ಪ್ರತಿಕೂಲವಾಗಿರುತ್ತದೆ, ಯಾಕೆಂದರೆ ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಮಕ್ಕಳ ಬಗ್ಗೆ ಕಾಳಜಿ ಇರಲಿ, ಚಿಂತೆ ಬೇಡ. ಈ ವಾರ ನೀವು ವ್ಯಾಯಾಮ ಕಸರತ್ತುಗಳ ಕುರಿತು ಗಮನ ಹರಿಸುತ್ತೀರಿ. ಈ ವಾರ ಉತ್ತಮ ವಾಗಿರಲಿದ್ದು ನೀವು ಉತ್ತಮ ಫಲಗಳನ್ನು ಪಡೆಯಬಹುದಾಗಿದೆ.

ಮಕರ: 13-July-2020 to 19-July-2020

ಕೌಟುಂಬಿಕವಾಗಿ ಈ ವಾರ ನಿಮ್ಮನ್ನು ಅದೃಷ್ಟ ಹುಡುಕಿಕೊಂಡು ಬರಲಿದೆ. ದಂಪತಿಗಳು ತಮ್ಮ ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಕೌಟುಂಬಿಕವಾಗಿ ಉತ್ತಮ ವಾರವಾಗಿದ್ದರೂ ಕೂಡ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಧ್ರುತಿಗೆಡಬೇಡಿ. ತಾಯಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವ ಪ್ರಯತ್ನ ಮಾಡಿ. ಆರ್ಥಿಕವಾಗಿ ನೀವು ಈ ವಾರ ಹೆಚ್ಚು ಖರ್ಚು ಮಾಡುವ ಸಾಧ್ಯತೆಗಳಿವೆ. ಇದರಿಂದ ನಿಮ್ಮ ಹಣಕಾಸಿನ ಶಕ್ತಿ ಕುಂದುತ್ತದೆ. ಆದರಿಂದ ಖರ್ಚಿನ ಕುರಿತು ಗಮನವಿರಲಿ, ಈ ವಾರ ನಿಮಗೆ ಭವಿಷ್ಯದ ಹಣಕಾಸಿನ ವಿಚಾರದಲ್ಲಿ ಬಹಳ ಮುಖ್ಯ ಪಾತ್ರ ವಹಿಸಲಿದೆ.

ಕುಂಭ: 13-July-2020 to 19-July-2020

ಈ ವಾರ ನಿಮ್ಮ ಶಕ್ತಿ ಮತ್ತು ಧೈರ್ಯ ಎರಡು ಹೆಚ್ಚಾಗಿರುತ್ತದೆ, ಇದರಿಂದ ನಿಮ್ಮ ಉದ್ಯೋಗ ಕ್ಷೇತ್ರಗಳಲ್ಲಿ ನಿಮ್ಮ ಕೆಲಸದ ಸಾಮರ್ಥ್ಯ ಹೆಚ್ಚಾಗಿರುತ್ತದೆ. ನಿಮ್ಮ ಎಲ್ಲಾ ಕಾರ್ಯಗಳನ್ನು ಬಹಳ ವೇಗವಾಗಿ ಪೂರ್ಣಗೊಳಿಸುತ್ತೀರಿ. ಇನ್ನು ಈ ಸಮಯದಲ್ಲಿ ನಿಮ್ಮನ್ನು ನೀವು ಅಹಂಕಾರದಿಂದ ದೂರ ಇಟ್ಟುಕೊಳ್ಳಿ, ಅಹಂಕಾರ ಒಳ್ಳೆಯದಲ್ಲ ಇಲ್ಲವಾದಲ್ಲಿ ನಿಮ್ಮ ಆತ್ಮೀಯರು ನಿಮ್ಮಿಂದ ದೂರ ಸರಿಯುತ್ತಾರೆ. ಕೌಟುಂಬಿಕವಾಗಿ ಒಳ್ಳೆಯ ಸಮಯ. ಆದರೆ ತಾಯಿಯ ಆರೋಗ್ಯದ ಕೆಲವು ತೊಂದರೆಗಳಿಂದ ನೀವು ಹೆಚ್ಚು ಖರ್ಚು ಮಾಡ ಬೇಕಾಗುತ್ತದೆ. ಆದ್ದರಿಂದ ತಾಯಿಯ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿ. ಅದೇ ಸಮಯ್ದಲ್ಲಿ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ.

ಮೀನ: 13-July-2020 to 19-July-2020

ಈ ವಾರ ನಿಮ್ಮ ಮಾತಿನ ಸ್ವರೂಪದಲ್ಲಿ ಹಲವಾರು ಬದಲಾವಣೆಗಳು ಕಾಣಿಸುತ್ತವೆ. ಆದ ಕಾರಣ ನೀವು ಯಾರೊಂದಿಗಾದರೂ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೇ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು. ಕಿರಿಯ ಸಹೋದರರೊಂದಿಗೆ ಇರುವ ವೈಮನಸ್ಸುಗಳು ದೂರವಾಗಿ ಉತ್ತಮ ಸಂಬಂಧ ಏರ್ಪಡುತ್ತದೆ. ನೀವು ಅವರ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಲಿದ್ದೀರಿ, ಇದರಿಂದ ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಕೆಲವು ಸಮಸ್ಯೆಗಳು ಕಾಣಿಸುತ್ತವೆ, ಆದರಿಂದ ಆರ್ಥಿಕ ವಿಚಾರವಾಗಿ ನಿಮ್ಮ ಪೋಷಕರ ಸಲಹೆ ಪಡೆದು ಕೊಳ್ಳುವುದು ಉತ್ತಮ.