ಚೀನಾಗೆ ಅತಿ ದೊಡ್ಡ ಶಾಕ್ ! ಮತ್ತೊಂದು ದೊಡ್ಡ ನಿರ್ಧಾರ ಮೂಲಕ ದೇಶದಲ್ಲಿ ಕೈಗಾರಿಕಾ ಕ್ರಾಂತಿಗೆ ಸಜ್ಜಾದ ಭಾರತ !

ಚೀನಾಗೆ ಅತಿ ದೊಡ್ಡ ಶಾಕ್ ! ಮತ್ತೊಂದು ದೊಡ್ಡ ನಿರ್ಧಾರ ಮೂಲಕ ದೇಶದಲ್ಲಿ ಕೈಗಾರಿಕಾ ಕ್ರಾಂತಿಗೆ ಸಜ್ಜಾದ ಭಾರತ !

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಚೀನಾ ದೇಶದಿಂದ ಸರಕುಗಳ ಆಮದನ್ನು ನಿಲ್ಲಿಸಿ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಆ ಸರಕುಗಳು ಭಾರತದಲ್ಲಿ ತಯಾರಾದರೇ ಮಾತ್ರ ಸರಕುಗಳ ಆಮದನ್ನು ನಾವು ನಿಲ್ಲಿಸಬಹುದು, ಇಲ್ಲವಾದಲ್ಲಿ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲೇ ಬೇಕಾಗುತ್ತದೆ. ಅಷ್ಟೇ ಅಲ್ಲದೇ ಚೀನಾ ದೇಶ ಅತಿ ಕಡಿಮೆ ಬೆಲೆ ವಸ್ತುಗಳನ್ನು ನೀಡುತ್ತದೆ, ಇತರ ದೇಶಗಳ ಸರಕು ಕಡಿಮೆ ಬೆಲೆಗೆ ಸಿಗುವುದಿಲ್ಲ, ಇನ್ನು ಭಾರತದಲ್ಲಿ ತಯಾರಾಗುವ ವಸ್ತುಗಳು ಕೂಡ ಹೆಚ್ಚಿನ ಬೆಲೆಯದ್ದಾಗಿರುತ್ತವೆ, ಚೀನಾ ದೇಶ ಕಡಿಮೆ ಬೆಲೆಗೆ ನೀಡುವಾಗ ನಮ್ಮಲ್ಲಿ ಯಾಕೆ ಕಡಿಮೆ ಬೆಲೆಗೆ ತಯಾರು ಮಾಡಲು ಸಾಧ್ಯವಿಲ್ಲ ಎಂಬ ಆಲೋಚನೆ ಎಲ್ಲರಲ್ಲೂ ಮೂಡಿದ್ದು ಸುಳ್ಳಲ್ಲ.

ಅಷ್ಟೇ ಅಲ್ಲಾ, ಕಚ್ಚಾ ವಸ್ತುಗಳನ್ನು ಕೂಡ ಚೀನಾ ಕಡಿಮೆ ದರಕ್ಕೆ ನೀಡುತ್ತದೆ, ನಾವ್ಯಾಕೆ ಅದೇ ರೀತಿ ಮಾಡಬಾರದು ಎಂದೆಲ್ಲ ಆಲೋಚನೆಗಳು ಎಲ್ಲರಲ್ಲೂ ಮೂಡಿತ್ತು. ಇದೀಗ ಈ ಎಲ್ಲಾ ಆಲೋಚನೆಗಳು ಕಾರ್ಯ ರೂಪಕ್ಕೆ ಬರಲು ಸಿದ್ಧತೆ ಮಾಡುವ ಮೂಲಕ ವರ್ಷಕ್ಕೆ ಲಕ್ಷಾಂತರ ಕೋಟಿ ಆಮದನ್ನು ನಿಲ್ಲಿಸಲು ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿಯನ್ನು ಆರಂಭಿಸಲು ದೇಶದ ಹಲವಾರು ಸಣ್ಣ ಕೈಗಾರಿಕೆಗಳು ಮುಂದಾಗಿವೆ. ಅದರಲ್ಲಿಯೂ ಗುಜರಾತ್ ರಾಜ್ಯದ ಮೊರ್ಬಿ ನಗರದಲ್ಲಿರುವ ಸರಿ ಸುಮಾರು 350 ಕೈಗಾರಿಕೆಗಳು ಹೊಸ ಯೋಜನೆಯೊಂದನ್ನು ರೂಪಿಸಿಕೊಂಡಿವೆ. ಈ ಯೋಜನೆಯ ಪ್ರಕಾರ ಸರಿ ಸುಮಾರು 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚೀನಾ ದೇಶದನ್ನು ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲು ಭಾರತದಲ್ಲಿಯೇ ವಸ್ತುಗಳನ್ನು ತಯಾರಿಸಲು ನಿರ್ಧಾರ ಮಾಡಲಾಗಿದೆ.

ನಮ್ಮ ಬಳಿ ಅಗತ್ಯವಾದ ಸೌಲಭ್ಯ ಹಾಗೂ ಕರಕುಶಲತೆ ಇದೆ, ನಾವು ಇನ್ನು ಮುಂದೆ ಆಟಿಕೆಗಳು, ಉಡುಗೊರೆ ವಸ್ತುಗಳು, ಗಡಿಯಾರಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಚೀನಾ ದೇಶದಿಂದ ಗಣನೀಯ ಪ್ರಮಾಣದಲ್ಲಿ ಆಮದಾಗುವ 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿನ ವಸ್ತುಗಳನ್ನು ಉತ್ತಮ ಗುಣಮಟ್ಟದಿಂದ ಚೀನಾದ ಬೆಲೆಗೆ ಸರಿದೂಗುವಂತೆ ತಯಾರಿಸಲು ಸಿದ್ಧರಾಗಿದ್ದೇವೆ ಎಂದು ಅಲ್ಲಿನ ಕೈಗಾರಿಕೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ಒಟ್ಟಿನಲ್ಲಿ ಇದೇ ರೀತಿ ದೇಶದ ಎಲ್ಲೆಡೆ ವಸ್ತುಗಳು ತಯಾರಾದರೇ ಸ್ವದೇಶೀ ಭಾರತವಷ್ಟೇ ಅಲ್ಲಾ, ದೇಶದ ಬಹು ದೊಡ್ಡ ಸಮಸ್ಯೆಯಾಗಿರುವ ಉದ್ಯೋಗ ಸಮಸ್ಯೆ ಕೂಡ ಬಗೆ ಹರಿಯುತ್ತದೆ.