ಚೀನಾಗೆ ಬಾರಿ ಮುಜುಗರ ! ಭಾರತದ ನಿರ್ಧಾರದ ಮುಂದೆ ಮಂಡಿಯೂರಿದ ಟಿಕ್ ಟಾಕ್ ! ಚೀನಾಗೆ ತಾನೇ ಶಾಕ್ ನೀಡಲು ಮುಂದಾಗಿದ್ದು ಹೇಗೆ ಗೊತ್ತಾ?

ಚೀನಾಗೆ ಬಾರಿ ಮುಜುಗರ ! ಭಾರತದ ನಿರ್ಧಾರದ ಮುಂದೆ ಮಂಡಿಯೂರಿದ ಟಿಕ್ ಟಾಕ್ ! ಚೀನಾಗೆ ತಾನೇ ಶಾಕ್ ನೀಡಲು ಮುಂದಾಗಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ವಿಶ್ವದಲ್ಲಿಯೇ ಅತಿ ವೇಗವಾಗಿ ಮಾರುಕಟ್ಟೆ ವಿಸ್ತರಣೆ ಮಾಡುತ್ತಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ತದ ನಂತರ ಇದೀಗ ಪಾತಾಳಕ್ಕೆ ಕುಸಿದಿರುವ ಟಿಕ್ ಟಾಕ್ ಸಂಸ್ಥೆಯು ಹೊಸ ರಾಜಕೀಯ ದಾಳ ಉರುಳಿಸಿದೆ. ಇವರ ಪ್ರಕಾರ ಇದು ಮಾಸ್ಟರ್ ಪ್ಲಾನ್ ಆಗಿರಬಹುದು ಆದರೆ ನಾವು ನಂಬಲು ಸಿದ್ದರಿಲ್ಲ ಎಂದು ನೆಟ್ಟಿಗರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ದೇಶ ಹೊರ ಹಾಕಿದ ಮೇಲೆ ಸಾವಿರಾರು ಕೋಟಿ ನಷ್ಟದ ಹಾದಿಯಲ್ಲಿ ಇರುವ ಟಿಕ್ ಟಾಕ್ ಉರುಳಿಸಿರುವ ಹೊಸ ದಾಳವಾದರೂ ಏನು? ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಏನು? ಎಂಬುದರ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.

ಸ್ನೇಹಿತರೇ, ಚೀನಾ ದೇಶದ ಕಾನೂನಿನ ಅನ್ವಯ ಅಲ್ಲಿನ CCP ಕೇಳಿದ ತಕ್ಷಣ ಬಳಕೆದಾರರ ಸಂಪೂರ್ಣ ಡೀಟೇಲ್ಸ್ ನೀಡಲೇಬೇಕು. ಇದೇ ರೀತಿಯ ಹಲವಾರು ನಿಯಮಗಳಿಗೆ ಜಗತ್ತಿನ ಟೆಕ್ ದೈತ್ಯಗಳಾದ ಫೇಸ್ಬುಕ್, ಟ್ವಿಟ್ಟರ್, ಯೌಟ್ಯೂಬ್, ಗೂಗಲ್ ಸೇರಿದಂತೆ ಇನ್ನಿತರ ಕಂಪನಿಗಳು ಒಪ್ಪದೇ ಇರುವ ಕಾರಣ ಚೀನಾ ದೇಶದಲ್ಲಿ ಈ ಯಾವುದೇ ಸೇವೆಗಳು ಲಭ್ಯವಿಲ್ಲ. ಇನ್ನು ಟಿಕ್ ಟಾಕ್ ಮೂಲ ಚೀನಾ ದೇಶದ್ದಾಗಿರುವ ಕಾರಣ ಬಳಕೆದಾರರ ಡೇಟಾ ಚೀನಾ ಕಮ್ಯುನಿಸ್ಟ್ ಪಾರ್ಟಿ ಪಡೆಯುವ ಹಕ್ಕು ಹೊಂದಿರುತ್ತದೆ ಎಂಬ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾರತ ದೇಶದಿಂದ ಟಿಕ್ ಟಾಕ್ ಅನ್ನು ಹೊರಹಾಕಿದೆ.

ಭಾರತದ ಈ ನಿರ್ಧಾರವನ್ನು ಹಲವಾರು ದೇಶಗಳು ಶ್ಲಾಘನೆ ಮಾಡಿವೆ. ಅಷ್ಟೇ ಅಲ್ಲದೇ, ಭಾರತದ ಈ ಹಾದಿಯಲ್ಲಿ ನಡೆಯುವುದಾಗಿ ವಿಶ್ವದ ಬಲಿಷ್ಠ ರಾಷ್ಟ್ರಗಳು ತಿಳಿಸಿವೆ. ಅಮೇರಿಕ ದೇಶ ಕೂಡ ಭಾರತದ ರೀತಿಯಲ್ಲಿ ನಾವು ಚೀನಾ ದೇಶಕ್ಕೆ ಉತ್ತರ ನೀಡಬೇಕು ಎಂದು ಕೊಂಡಿದ್ದೇವೆ ಎಂದು ಹೇಳಿದೆ. ಇದು ಟಿಕ್ ಟಾಕ್ ಮಾಲೀಕ ಕಂಪನಿಯಾದ ಬೈಟ್ ಡಾನ್ಸ್ ಕಂಪನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚೀನಾ ದೇಶಕ್ಕೆ ಬುದ್ದಿ ಕಲಿಸಲು ಎಲ್ಲಾ ದೇಶಗಳು ಈ ರೀತಿಯ ಹೆಜ್ಜೆ ಹಾಕುತ್ತಿರುವ ಕಾರಣ ಬೈಟ್ ಡಾನ್ಸ್ ಟಿಕ್ ಟಾಕ್ ಉಳಿಸಿಕೊಳ್ಳಲು ಹೊಸ ದಾರಿ ಹುಡುಕಿದೆ.

ಇದೀಗ ಬೈಟ್ ಡಾನ್ಸ್ ಸಂಸ್ಥೆಯು ಚೀನಾ ದೇಶದಲ್ಲಿನ ತನ್ನ ಮುಖ್ಯ ಕಚೇರಿಯನ್ನು ಮತ್ಯಾವುದಾದರೂ ದೇಶಕ್ಕೆ ಸ್ಥಳಾಂತರ ಮಾಡಲು ಮುಂದಾಗಿದೆ. ಚೀನಾ ದೇಶದ ಜೊತೆ ನಿಕಟ ಸಂಪರ್ಕ ಹೊಂದಿರುವ ಕಾರಣ ಮಾರುಕಟ್ಟೆ ಕಳೆದು ಕೊಳ್ಳುತ್ತಿದ್ದೇವೆ ಎಂಬುದನ್ನು ಅರಿತುಕೊಂಡು ಈ ನಿರ್ಧಾರ ತೆಗೆದುಕೊಂಡಿದೆ. ಅದರಲ್ಲಿಯೂ ಭಾರತದಲ್ಲಿನ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಬೈಟ್ ಡಾನ್ಸ್ ಸಿದ್ದವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬೇರೆ ದೇಶಕ್ಕೆ ಕಂಪನಿ ಸ್ಥಳಾಂತರ ಮಾಡುವ ಮೂಲಕ ಅಲ್ಲಿನ ಸರ್ಕಾರದ ಕಾನೂನುಗಳನ್ನು ಪಾಲಿಸುತ್ತೇವೆ ಎಂದು ಹೇಳಲು ಹೊರಟಿದೆ. ಆದರೆ ಬೈಟ್ ಡಾನ್ಸ್ ಕಂಪನಿಯ ಈ ನಿರ್ಧಾರ ಚೀನಾ ದೇಶಕ್ಕೆ ಬಾರಿ ಮುಜುಗರ ತಂದಿದ್ದು, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನು ಕಂಡ ಭಾರತೀಯ ನೆಟ್ಟಿಗರು ನೀವು ಈ ರೀತಿಯ ಎಷ್ಟೇ ಯೋಜನೆಗಳನ್ನು ರೂಪಿಸಿದರೂ ಚೀನಿಗರನ್ನು ನಂಬಲು ಭಾರತದಲ್ಲಿ ಯಾರು ತಯಾರಿಲ್ಲ ಎಂದು ಟ್ರೆಂಡಿಂಗ್ ಸೃಷ್ಟಿಸಿದ್ದಾರೆ.