ಬಿಗ್ ನ್ಯೂಸ್: ಭಾರತಕ್ಕೆ ಮತ್ತೊಂದು ಸಿಹಿ ಸುದ್ದಿ, ಹೊಸ ಹೂಡಿಕೆಗೆ ಮುಂದಾದ ತೈವಾನ್ ಕಂಪನಿ !

ಬಿಗ್ ನ್ಯೂಸ್: ಭಾರತಕ್ಕೆ ಮತ್ತೊಂದು ಸಿಹಿ ಸುದ್ದಿ, ಹೊಸ ಹೂಡಿಕೆಗೆ ಮುಂದಾದ ತೈವಾನ್ ಕಂಪನಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ವಿಶ್ವದ ಇತರ ರಾಷ್ಟ್ರಗಳ ಕಂಪನಿಗಳು ಚೀನಾ ದೇಶದಿಂದ ತಮ್ಮ ಉತ್ಪಾದನಾ ಘಟಕಗಳನ್ನು ಇತರ ದೇಶಗಳಿಗೆ ಸ್ಥಳಾಂತರ ನಡೆಸಲು ತಯಾರಿ ನಡೆಸುತ್ತಿವೆ. ಪ್ರಮುಖವಾಗಿ ವಿಯೆಟ್ನಾಮ್ ಹಾಗೂ ಭಾರತ ದೇಶದ ಕಡೆ ಎಲ್ಲಾ ಕಂಪನಿಗಳು ಮುಖ ಮಾಡಿ ನಿಂತಿವೆ. ಒಂದು ವೇಳೆ ಭಾರತದಲ್ಲಿ ಮತ್ತಷ್ಟು ರಿಯಾಯಿತಿಗಳನ್ನು ನೀಡಿ, ವಿಯೆಟ್ನಾಮ್ ದೇಶಕ್ಕಿಂತ ಹೆಚ್ಚು ನಿಯಮಗಳನ್ನು ಸಡಿಲಿಕೆ ಮಾಡಿದ್ದಲ್ಲಿ ಖಂಡಿತಾ ಭಾರತಕ್ಕೆ ಮತ್ತಷ್ಟು ಹೆಚ್ಚು ಕಂಪನಿಗಳು ಸ್ಥಳಾಂತರಗೊಳ್ಳಲಿದ್ದು, ಮತ್ತಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ.

ಭಾರತ ದೇಶ ಕೂಡ ಇದರ ಕುರಿತು ಹಲವಾರು ತಯಾರಿಗಳನ್ನು ನಡೆಸುತ್ತಿದೆ. ಈ ತಯಾರಿಯ ನಡೆವೆಯೇ, ಹಲವಾರು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಇದರಿಂದ ಚೀನಾ ಕಂಗಾಲಾಗಿರುವುದು ಸುಳ್ಳಲ್ಲ. ಇದೀಗ ತೈವಾನ್ ದೇಶದ ಮೂಲ ಕಂಪನಿ ಯಾಗಿರುವ ಫಾಕ್ಸ್‌ಕಾನ್ ಕಂಪನಿಯು ತನ್ನ ಆಪಲ್ ಫೋನ್ ಗಳ ಉತ್ಪಾದನಾ ಕಂಪನಿಯನ್ನು ಬಂಡವಾಳವನ್ನು ಹೆಚ್ಚು ಮಾಡಲು ಸಿದ್ಧವಾಗಿದೆ. ಈಗಾಗಲೇ ಭಾರತದಲ್ಲಿ ಉತ್ಪಾದನಾ ಘಟಕ ಹೊಂದಿದ್ದರೂ ಕೂಡ ಭಾರತದಲ್ಲಿ ಕೆಲವೇ ಕೆಲವು ರೀತಿಯ ಐಫೋನ್ ಮಾದರಿಗಳನ್ನು ಜೋಡಿಸಲಾಗುತಿತ್ತು. ಆದರೆ ಇದೀಗ ಬರೋಬ್ಬರಿ 100 ಶತಕೋಟಿ ಡಾಲರ್ ಗಳನ್ನೂ ಹೂಡಿಕೆ ಮಾಡಿ ಮತ್ತಷ್ಟು ಐಫೋನ್ ಮಾದರಿಗಳನ್ನು ಭಾರತದಲ್ಲಿಯೇ ತಯಾರು ಮಾಡಲು ಸಿದ್ಧವಾಗಿದೆ.

ಇನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚು ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ಇದರಿಂದಾಗಿ ನೇರವಾಗಿ 6000 ಉದ್ಯೋಗಗಳು ಸೃಷ್ಟಿಯಾಗಲಿವೆ. ಇಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ಭಾರತದಿಂದ ಆಪಲ್ ಫೋನ್ ಗಳನ್ನು ಇತರ ದೇಶಗಳಿಗೆ ರಫ್ತ್ತು ಮಾಡುವ ಆಲೋಚನೆ ಹೊಂದಿದ್ದೇವೆ, ಇತರ ದೇಶಗಳಿಗೆ ಹೋಲಿಕೆ ಮಾಡಿದರೇ ಆಮದು ತೆರಿಗೆ ಕಡಿಮೆಯಿದೆ ಎಂದು ಕಂಪನಿ ತಿಳಿಸಿದೆ. ಇದರಿಂದ ದೇಶಕ್ಕೂ ಕೂಡ ಹೆಚ್ಚಿನ ಲಾಭಗಳಿದ್ದು, ಭಾರತ ದೇಶದೊಂದಿಗೆ ಉತ್ತಮ ಸಂಬಂಧ ಹೊಂದುತ್ತೇವೆ ಎಂದು ತೈವಾನ್ ದೇಶದ ಕಂಪನಿ ತಿಳಿಸಿದೆ.