ಗುಡ್ ನ್ಯೂಸ್: ನವಭಾರತ ನಿಲ್ಲುವುದಿಲ್ಲ, ಚೀನಾಗೆ ಮತ್ತೊಂದು ಸ್ಪಷ್ಟ ಸಂದೇಶ ರವಾನೆ ಮಾಡಿದ ಭಾರತ

ಗುಡ್ ನ್ಯೂಸ್: ನವಭಾರತ ನಿಲ್ಲುವುದಿಲ್ಲ, ಚೀನಾಗೆ ಮತ್ತೊಂದು ಸ್ಪಷ್ಟ ಸಂದೇಶ ರವಾನೆ ಮಾಡಿದ ಭಾರತ

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ಹಾಗೂ ಚೀನಾ ದೇಶಗಳ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಆದರೆ ಯಾವುದೇ ಕಾರಣಕ್ಕೂ ಚೀನಾ ದೇಶವನ್ನು ನಂಬಲು ಸಿದ್ಧವಿಲ್ಲದ ಭಾರತ ತನ್ನ ಹೈ ಅಲರ್ಟ್ ಮುಂದುವರೆಸಿದೆ, ನಿನ್ನೆ ರಾತ್ರಿ ಭಾರತೀಯ ವಾಯುಪಡೆಯು ಸಂಪೂರ್ಣ ಗಸ್ತು ತಿರುಗಿದೆ. ಇದರ ಬೆನ್ನಲ್ಲೇ ಇಂದು ಮತ್ತೊಂದು ಮಹತ್ವದ ಸಭೆಯ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು, ಚೀನಾ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

ಹೌದು, ಸ್ನೇಹಿತರೇ, ಚೀನಾ ದೇಶ ಗಡಿಯಲ್ಲಿನ ಪರಿಸ್ಥಿತಿ ಕಂಡು ಭಾರತ ತನ್ನ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುತ್ತದೆ ಎಂದು ಅಂದಾಜು ಮಾಡಿತ್ತು. ಅಷ್ಟೇ ಅಲ್ಲದೇ, ಶಾಂತ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಲು ಎರಡು ದೇಶಗಳು ಒಪ್ಪಿರುವುದರಿಂದ ಚೀನಾ ದೇಶವು ಅಭಿವೃದ್ಧಿ ಕಾರ್ಯಗಳನ್ನು ಭಾರತ ನಿಲ್ಲಿಸುತ್ತದೆ ಎಂಬ ಅಂದಾಜಿನಲ್ಲಿ ಇತ್ತು. ಆದರೆ ಭಾರತ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಪಾಕಿಸ್ತಾನಕ್ಕೂ ಶಾಕ್ ಎದುರಾಗಿದ್ದು, ಚೀನಾ ದೇಶಕ್ಕೂ ಸ್ಪಷ್ಟ ಸಂದೇಶ ರವಾನೆ ಮಾಡಲಾಗಿದೆ.

ಇಂದು ನಡೆದ ಮಹತ್ವದ ಸಭೆಯಲ್ಲಿ, ಭಾರತ ದೇಶವು ಚೀನಾ ಹಾಗೂ ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಆದೇಶ ನೀಡಿದೆ. ಪ್ರತಿಯೊಂದು ಯೋಜನೆಗಳ ಬಗ್ಗೆ ಸಂಪೂರ್ಣ ವಿವರ ಪಡೆದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು, ಸೇನೆಗೆ ಎಲ್ಲಾ ಮೂಲ ಸೌಕರ್ಯಗಳು ಸಮಯಕ್ಕೆ ತಲುಪಬೇಕು. ಯಾವುದೇ ಕಾರಣಕ್ಕೂ ಈ ಯೋಜನೆಗಳು ತಡವಾಗುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.