ಐಪಿಎಲ್ ನಡೆಸಲು ಮತ್ತೊಂದು ಆಲೋಚನೆಯಲ್ಲಿ ತೊಡಗಿದ್ದಾರಂತೆ ಸೌರವ್ ಗಂಗೂಲಿ !

ಐಪಿಎಲ್ ನಡೆಸಲು ಮತ್ತೊಂದು ಆಲೋಚನೆಯಲ್ಲಿ ತೊಡಗಿದ್ದಾರಂತೆ ಸೌರವ್ ಗಂಗೂಲಿ !

ನಮಸ್ಕಾರ ಸ್ನೇಹಿತರೇ, ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂದು ಖ್ಯಾತಿ ಪಡೆದುಕೊಂಡಿರುವ ಐಪಿಎಲ್ ಟೂರ್ನಿಯು ಈ ಬಾರಿ ಕರೋನ ಕಾರಣದಿಂದ ಮುಂದೂಡಲ್ಪಟ್ಟಿದೆ. ಆದರೆ ಇದರಿಂದ ಹಣವಷ್ಟೇ ಅಲ್ಲಾ, ಅಭಿಮಾನಿಗಳು ಕೂಡ ಐಪಿಎಲ್ ಟೂರ್ನಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅದೇ ಕಾರಣಕ್ಕೆ ಇದೀಗ ಐಪಿಎಲ್ ನಡೆಸಲು ಸೌರವ್ ಗಂಗೂಲಿ ರವರು, ಹೊಸ ಆಲೋಚನೆ ನಡೆಸಿರುವುದನ್ನು ಅವರೇ ತಿಳಿಸಿದ್ದಾರೆ. ಭಾರತೀಯ ಯುವ ಆಟಗಾರ ಮಾಯಾಂಕ್ ಅಗರವಾಲ್ ರವರ ಜೊತೆ ವಿಶೇಷ ಸಂದರ್ಶದಲ್ಲಿ ಮಾತನಾಡಿದ ಸೌರವ್ ಗಂಗೂಲಿ ರವರು, ಟಿ 20 ವಿಶ್ವ ಕಪ್ ಬಗ್ಗೆ ತಿಳಿದಿಲ್ಲ, ವಿಶ್ವಕಪ್ ಮುಂದೂಡಲ್ಪಡುತ್ತದೆಯೋ ಇಲ್ಲವೋ ತಿಳಿದಿಲ್ಲ, ಆದರೆ ನಾವು ಮಾತ್ರ ಐಪಿಎಲ್ ಟೂರ್ನಿಯನ್ನು ಕಾಳಜಿ ವಹಿಸಿಕೊಂಡು ಆಯೋಜನೆ ಮಾಡಲು ತಯಾರಿ ನಡೆಸುತ್ತಿದ್ದೇವೆ.

ಆದರೆ ಭಾರತದಲ್ಲಿ ನಡೆಸುವುದು, ಅಭಿಮಾನಿಗಳ ಹಾಗೂ ಆಟಗಾರರ ಆರೋಗ್ಯದ ದೃಷ್ಟಿಯಿಂದ ಅಸಾಧ್ಯವೆನಿಸುತ್ತಿದೆ. ಅದಕ್ಕಾಗಿಯೇ ಇತರ ದೇಶಗಳಲ್ಲಿ ನಡೆಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಎಲ್ಲಾ ಸರಿಹೊಂದಿದಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿಯು ಆರಂಭವಾಗಲಿದೆ ಎಂಬುದು ತಿಳಿದು ಬಂದಿದೆ. ಈಗಾಗಲೇ ಶ್ರೀಲಂಕಾ, ಯುಎಇ ಸೇರಿದಂತೆ ನ್ಯೂಜಿಲ್ಯಾಂಡ್ ದೇಶಗಳು ಐಪಿಎಲ್ ಟೂರ್ನಿಯನ್ನು ತಮ್ಮ ದೇಶದಲ್ಲಿ ಆಯೋಜಿಸಲು ಸಿದ್ಧರಾಗಿರುವುದಾಗಿ ತಿಳಿಸಿವೆ.