ವಾಹ್: ಇದೀಗ ದಿಗ್ಗಜ ಕಂಪನಿ ಮಹಿಂದ್ರಾ ಸರದಿ, ಸ್ವದೇಶೀ ಭಾರತಕ್ಕೆ ಆನೆಬಲ ! ಅತಿದೊಡ್ಡ ಹೆಜ್ಜೆ ಇಟ್ಟ ಮಹಿಂದ್ರಾ ಗ್ರೂಪ್ಸ್ !

ವಾಹ್: ಇದೀಗ ದಿಗ್ಗಜ ಕಂಪನಿ ಮಹಿಂದ್ರಾ ಸರದಿ, ಸ್ವದೇಶೀ ಭಾರತಕ್ಕೆ ಆನೆಬಲ ! ಅತಿದೊಡ್ಡ ಹೆಜ್ಜೆ ಇಟ್ಟ ಮಹಿಂದ್ರಾ ಗ್ರೂಪ್ಸ್ !

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಮಹಿಂದ್ರಾ ಗ್ರೂಪ್ಸ್, ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಉದ್ಯಮ ಆರಂಭಿಸಲು ಮುಂದಾಗಿದೆ. ಈ ಮೂಲಕ ನಮ್ಮ ದೇಶದಲ್ಲಿಯೇ ಉತ್ಪನ್ನಗಳನ್ನು ತಯಾರಿಸಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಅಂದಹಾಗೆ ದೇಶಕ್ಕೆ ಈ ಉದ್ಯಮ ಬಹಳ ಅತ್ಯಗತ್ಯವಾಗಿದೆ, ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವುದಲ್ಲದೇ ಚೀನಾ ಕಂಪನಿಗಳಿಂದ ತೆರವಾಗಿರುವ ಮಾರುಕಟ್ಟೆಯ ಸ್ಥಾನವನ್ನು ಸ್ವದೇಶೀ ಕಂಪನಿ ತನ್ನದಾಗಿಸಿಕೊಳ್ಳಲಿದೆ.

ಹೌದು, ಭಾರತವಷ್ಟೇ ಅಲ್ಲದೇ ಇದೀಗ ವಿಶ್ವದ ಎಲ್ಲೆಡೆ ಕೆಲವೊಂದು ರಾಷ್ಟ್ರಗಳಲ್ಲಿ 4G ಹಾಗೂ ಇನ್ನು ಕೆಲವು ರಾಷ್ಟ್ರಗಳಲ್ಲಿ 5G ನೆಟ್ವರ್ಕ್ ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ BSNL ಸಂಸ್ಥೆ ಭಾರತದಲ್ಲಿ 4G ನೆಟ್ವರ್ಕ್ ಸ್ಥಾಪನೆಗೆ ಚೀನಾ ದೇಶದ ಕಂಪನಿಗಳಿಗೆ ನೀಡಿದ ಟೆಂಡರ್ ಗಳನ್ನುವಾಪಸ್ಸು ತೆಗೆದುಕೊಂಡಿತ್ತು. ಆದರೆ ಈ ನಿರ್ಧಾರ ಹೊರತಾಗಿಯೂ ಭಾರತ ದೇಶ ದಕ್ಷಿಣ ಕೊರಿಯಾ, ಅಮೇರಿಕ ಅಥವಾ ಯುರೋಪಿಯನ್ ರಾಷ್ಟ್ರಗಳಿಂದ 4G ಹಾಗೂ 5G ಉಪಕರಣಗಳನ್ನು ಆಮದು ಮಾಡಿಕೊಳ್ಳಲೇ ಬೇಕಿತ್ತು.

ಆದರೆ ಇದೀಗ ಗೌರವಾನ್ವಿತ ಕಂಪನಿಗಳಲ್ಲಿ ಒಂದಾಗಿರುವ ಟೆಕ್ ಮಹೀಂದ್ರಾ ಕಂಪನಿಯು 4 ಜಿ ಉಪಕರಣಗಳನ್ನು ಜಂಟಿಯಾಗಿ ತಯಾರಿಸಲು ಮತ್ತು ಭಾರತದ 5 ಜಿ ಮೂಲಸೌಕರ್ಯ ಯೋಜನೆಗೆ ಸಾಮರ್ಥ್ಯಗಳನ್ನು ಬೆಳೆಸುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (ಐಟಿಐ) ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತದಲ್ಲಿಯೇ 4 ಜಿ ಹಾಗೂ 5 ಜಿ ಮೂಲಸೌಕರ್ಯಕ್ಕಾಗಿ ಉಪಕರಣಗಳನ್ನು ತಯಾರಿಸಲು ಮುಂದಾಗಿದ್ದಾರೆ. ಇದು ಸರಿಸುಮಾರು ಶತಕೋಟಿ ಡಾಲರ್ ಮೌಲ್ಯದ ವ್ಯವಹಾರವಾಗಿದ್ದು ಕೇವಲ ಇದೊಂದೇ ಉದ್ಯಮದಿಂದ ವಿಶ್ವದ ಇತರೇ ರಾಷ್ಟ್ರಗಳು ಲಕ್ಷಾಂತರ ಉದ್ಯೋಗಗಳ ಮೂಲವಾಗಿದೆ. ಒಟ್ಟಿನಲ್ಲಿ ಈ ಉದ್ಯಮ ಭಾರತದಲ್ಲಿ ಆರಂಭವಾಗುತ್ತಿರುವುದು ಬಹಳ ಸಂತಸದ ಸಂಗತಿಯಾಗಿದೆ.