ಇದೀಗ ನಿತಿನ್ ಗಡ್ಕರಿ ಸರದಿ ! ತಡವಾದರೂ ಚೀನಾಗೆ ಬಲವಾದ ಶಾಕ್ ನೀಡಿ ಹೊರಡಿಸಿದ ಆದೇಶವೇನು ಗೊತ್ತಾ?

ಇದೀಗ ನಿತಿನ್ ಗಡ್ಕರಿ ಸರದಿ ! ತಡವಾದರೂ ಚೀನಾಗೆ ಬಲವಾದ ಶಾಕ್ ನೀಡಿ ಹೊರಡಿಸಿದ ಆದೇಶವೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಚೀನಾ ದೇಶದ ವಿರುದ್ಧ ಕೂಗು ಹೆಚ್ಚಾಗಿರುವ ಹಿನ್ನಲೆಯಲ್ಲಿ ಚೀನಾ ದೇಶಕ್ಕೆ ದಿನಕ್ಕೊಂದು ಶಾಕ್ ಗಳು ಎದುರಾಗುತ್ತಿವೆ. ಕೇಂದ್ರ ಸರ್ಕಾರ ಅಷ್ಟೇ ಅಲ್ಲಾ, ಹಲವಾರು ಪ್ರಾದೇಶಿಕ ಪಕ್ಷಗಳು ಕೂಡ ಇದೇ ಹಾದಿ ಹಿಡಿದಿವೆ. ಮೊದಲ ಬಾರಿಗೆ ದಿಗ್ಗಜ ಕಂಪನಿಗಳು ಕೂಡ ಗಡಿಯಲ್ಲಿ ನಡೆದ ಕಹಿ ಘಟನೆಯನ್ನು ಗಮನದಲ್ಲಿ ಇಟ್ಟುಕೊಂಡು, ಚೀನಾ ದೇಶದಿಂದ ವಸ್ತು ಆಮದು ಮಾಡಿಕೊಳ್ಳುವುದಿಲ್ಲ ಎಂದು ಬೆಂಬಲ ಸೂಚಿಸುತ್ತಿವೆ.

ಕೇವಲ ಸರ್ಕಾರವಷ್ಟೇ ಅಲ್ಲಾ ಸ್ವಾಮಿ, ಹಲವಾರು ಪ್ರಾದೇಶಿಕ ಪಕ್ಷದ ನಾಯಕರೂ ಕೂಡ ಇದೇ ಮಾತನ್ನು ಹೇಳಿವೆ. ಇನ್ನು ಸಾಮಾನ್ಯ ಜನರ ಕೂಗು ಕೂಡ ಇದೇ ಹಾಗಿದೆ. ಹೀಗಿರುವಾಗ ಇದೀಗ ನಿತಿನ್ ಗಡ್ಕರಿ ರವರ ಸರದಿ ಬಂದಿದೆ, ನಿನ್ನೆ ಮೋದಿ ಚೀನಾ ಅಪ್ಲಿಕೇಶನ್ ಗಳನ್ನೂ ನಿಷೇಧಿಸುವ ಮೂಲಕ ಶಾಕ್ ನೀಡಿದರೇ, ಇದೀಗ ನಿತಿನ್ ಗಡ್ಕರಿ ರವರು ಕೋಟ್ಯಂತರ ಮೌಲ್ಯದ ಟೆಂಡರ್ ಪ್ರಕ್ರಿಯೆಗಳಿಂದ ಚೀನಾ ದೇಶವನ್ನು ಹೊರಗಿಟ್ಟಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಹೊಸ ಆದೇಶ ಹೊರಡಿಸಿರುವ ನಿತಿನ್ ಗಡ್ಕರಿ ರವರು, ಇನ್ನು ಮುಂದೆ ಭಾರತದ ಹೆದ್ದಾರಿ ಯೋಜನೆ ಗಳಲ್ಲಿ, ಚೀನಾ ದೇಶದ ಕಂಪನಿ ಗಳು ಭಾಗವಹಿಸುವಂತೆ ಇಲ್ಲ. ಅಷ್ಟೇ ಅಲ್ಲಾ, ಭಾರತೀಯ ಕಂಪನಿಗಳ ಜೊತೆ ಅಥವಾ ಇನ್ನಿತರ ದೇಶಗಳ ಕಂಪನಿಗಳ ಜೊತೆ ಜಂಟಿ ಒಪ್ಪಂದ ಮಾಡಿಕೊಂಡು ಟೆಂಡರ್ ಪ್ರಕ್ರಿಯೆಗೆ ಪ್ರವೇಶ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ದೇಶದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣದಲ್ಲಿ ಚೀನಾ ದೇಶಕ್ಕೆ ಪಾಲು ನೀಡುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಸಾವಿರಾರು ಕೋಟಿ ಮೌಲ್ಯದ ಟೆಂಡರ್ ಗಳಿಂದ ಚೀನಾವನ್ನು ದೂರವಿಟ್ಟಿದ್ದಾರೆ.