ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಘೋಷಣೆ ಮಾಡಿ ABD ! ಆಯ್ಕೆಯಾದವರು ಯಾರ್ಯಾರು ಗೊತ್ತಾ?

ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಘೋಷಣೆ ಮಾಡಿ ABD ! ಆಯ್ಕೆಯಾದವರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ವಿಶ್ವದಲ್ಲಿಯೇ ಅತ್ಯುತ್ತಮ ಆಟಗಾರರ ಅಗ್ರ ಸಾಲಿನಲ್ಲಿ ನಿಲ್ಲುವ ಆಟಗಾರರಲ್ಲಿ ಒಬ್ಬರಾದ ಎ ಬಿ ಡಿವಿಲಿಯರ್ಸ್ ರವರು ಇದೀಗ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಸಾರ್ವ ಕಾಲಿಕ ಶ್ರೇಷ್ಠ ತಂಡವನ್ನು ಘೋಷಣೆ ಮಾಡಿದ್ದಾರೆ. ಈ ತಂಡವನ್ನು ಕಂಡ ಬಹುತೇಕರು, ಇಲ್ಲಿಯವರೆಗಿನ ಶ್ರೇಷ್ಠ ತಂಡ ಎಂದಿದ್ದಾರೆ, ಕೆಲವರು ಮಾತ್ರ ತಮ್ಮದೇ ನೆಚ್ಚಿನ ಆಟಗಾರನನ್ನು ಸೆಲೆಕ್ಟ್ ಮಾಡಿ ಎಂದು ಅಭಿಪ್ರಾಯ ಮಂಡಿಸಿದ್ದಾರೆ.

ಇದೀಗ ಅಭಿಪ್ರಾಯ ವ್ಯಕ್ತಪಡಿಸಿರುವ ಎ ಬಿ ಡಿವಿಲಿಯರ್ಸ್ ರವರು, ಆರಂಭಿಕರಾಗಿ ನಮ್ಮೆಲ್ಲರ ನೆಚ್ಚಿನ ವೀರೇಂದ್ರ ಸೆಹ್ವಾಗ್ ರವರನ್ನು ಆಯ್ಕೆ ಮಾಡಿದರು, ಕ್ರಿಸ್ ಗೇಲ್ ರವರನ್ನು ಆಯ್ಕೆ ಮಾಡಲಿಲ್ಲ. ಇನ್ನೊಬ್ಬ ಆಟಗಾರನಾಗಿ ರೋಹಿತ್ ಶರ್ಮ ರವರನ್ನು ಆಯ್ಕೆ ಮಾಡುತ್ತಿರುವುದಾಗಿ ಹೇಳಿದರು. ಮೂರನೇ ಕ್ರಮಾಂಕದಲ್ಲಿ ಅಚ್ಚರಿ ಇಲ್ಲದಂತೆ ನೇರವಾಗಿ ವಿರಾಟ್ ಕೊಹ್ಲಿ ರವರನ್ನು ಆಯ್ಕೆ ಮಾಡಿ, ತಮ್ಮನ್ನು ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆ ಮಾಡಿಕೊಂಡರು.

ಇನ್ನು 5 ಕ್ರಮಾಂಕಕ್ಕೆ ಈಗಾಗಲೇ ಜಗತ್ತಿನ ಟಾಪ್ ಆಲ್ ರೌಂಡರ್ ಗಳ ಸಾಲಿನಲ್ಲಿ ಇರುವ ಬೆನ್ ಸ್ಟೋಕ್ಸ್ ರವರಿಗೆ ಸ್ಥಾನ ನೀಡಿ, ವಿಕೆಟ್ ಕೀಪರ್ ಆಗಿ ಧೋನಿ ರವರನ್ನು ಆಯ್ಕೆ ಮಾಡಿದ್ದಾರೆ. ರವೀಂದ್ರ ಜಡೇಜಾ ಹಾಗೂ ರಶೀದ್ ಖಾನ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಎರಡು ಸ್ಪಿನ್ ಬೌಲಿಂಗ್ ಆಯ್ಕೆಗಳಾಗಿ ಹೆಸರಿಸಲಾಯಿತು, ಹಾಗೂ ಅಗತ್ಯವಿದ್ದರೇ ಬ್ಯಾಟ್ ಮೂಲಕ ಕೊಡುಗೆ ನೀಡುತ್ತಾರೆ ಎಂದು ಇವರಿಬ್ಬರನ್ನು ಆಯ್ಕೆ ಮಾಡಿಕೊಂಡರು.

ಇನ್ನು ಫಾಸ್ಟ್ ಬೌಲರ್ ಗಳಾಗಿ, ಭುವನೇಶ್ವರ್ ಕುಮಾರ್, ಕಗಿಸೊ ರಬಾಡಾ ಹಾಗೂ ಕೊನೆಯದಾಗಿ ಜಸ್ಪ್ರಿತ್ ಬುಮ್ರಾ ರವರನ್ನು ಆಯ್ಕೆ ಮಾಡಿದರು. ವಿಶೇಷವಾಗಿ ಇವರು ಐಪಿಎಲ್ ನಿಯಮಗಳನ್ನು ಗಣನೆಗೆ ತೆಗೆದುಕೊಂಡು ಕೇವಲ 4 ವಿದೇಶಿಗರಿಗೆ ಮಾತ್ರ ಸ್ಥಾನ ನೀಡಿದರು. ಒಟ್ಟಾರೆಯಾಗಿ ತಂಡ ಈ ಕೆಳಗಿನಂತೆ ಇದ್ದು, ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಎಬಿಡಿ ರವರ ಸರ್ವಕಾಲಿಕ ಐಪಿಎಲ್ ಇಲೆವೆನ್ ತಂಡ: ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ , ಎಬಿ ಡಿವಿಲಿಯರ್ಸ್, ಬೆನ್ ಸ್ಟೋಕ್ಸ್, ಎಂಎಸ್ ಧೋನಿ (C) (WK), ರವೀಂದ್ರ ಜಡೇಜಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕಗಿಸೋ ರಬಾಡಾ, ಜಸ್ಪ್ರಿತ್ ಬುಮ್ರಾ