ಭಾರತಕ್ಕಾಗಿ ಹೊಸ ಮಸೂದೆ ಮಂಡಿಸಿ ಐತಿಹಾಸಿಕ ಗಿಫ್ಟ್ ನೀಡಿದ ಅಮೇರಿಕ !ಏನು ಗೊತ್ತಾ? ಇದು ನವಭಾರತದ ತಾಕತ್ತು !

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶದ ವಿ-ರುದ್ಧ ಸದೃಢವಾಗಿ ನಿಂತಿರುವ ಭಾರತ ದೇಶದ ಪರವಾಗಿ ವಿಶ್ವದ ಹಲವಾರು ದೇಶಗಳು ಧ್ವನಿ ಎತ್ತುತ್ತಿವೆ. ಗಡಿಯಲ್ಲಿ ಚೀನಾ ದೇಶದ ಖ್ಯಾತೆಯ ನಂತರವಂತೂ ಭಾರತಕ್ಕೆ ದಿನೇ ದಿನೇ ಬೆಂಬಲ ಹೆಚ್ಚಾಗುತ್ತಿದೆ. ಹೀಗಿರುವಾಗ ಭಾರತ ದೇಶಕ್ಕೆ ಹೊಸ ಮಸೂದೆ ಮಂಡಿಸಿ, ಅಮೇರಿಕ ದೇಶ ಸಿಹಿ ಸುದ್ದಿ ನೀಡಿದೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಮೇರಿಕ ದೇಶವು ಮೊದಲಿಂದಲೂ ಚೀನಾ ದೇಶದ ವಿಚಾರದಲ್ಲಿ ಭಾರತದ ಪರವಾಗಿ ಧ್ವನಿ ಎತ್ತಿದೆ. ಅದಕ್ಕಾಗಿಯೇ ಇದೀಗ ಭಾರತ ಚೀನಾ ಸವಾಲುಗಳನ್ನು ಎದುರಿಸುತ್ತಿರುವ ರೀತಿ ಕಂಡು ಹಾಗೂ ಗಡಿಯಲ್ಲಿನ ಪರಿಸ್ಥಿತಿ ಕಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ. ಅಷ್ಟಕ್ಕೂ ಆ ನಿರ್ಧಾರವಾದರೂ ಏನು? ಹಾಗೂ ಅದರಿಂದ ಭಾರತ ದೇಶಕ್ಕೇನು ಲಾಭ?

ಸ್ನೇಹಿತರೇ, ಅಮೇರಿಕ ದೇಶ ನಿಮಗೆಲ್ಲರಿಗೂ ತಿಳಿದಿರುವಂತೆ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಇಸ್ರೇಲ್ ದೇಶಗಳ ಜೊತೆ ಮಿಲಿಟರಿ ಸಹಭಾಗಿತ್ವ ಹೊಂದಿದೆ. ಇದೇ ಒಪ್ಪಂದದ ಆಧಾರದ ಮೇಲೆ ಅಮೇರಿಕ ದೇಶದ ಯಾವುದೇ ಹೊಸ ಅತ್ಯಾಧುನಿಕ ಯುದ್ಧ ವಿಮಾನಗಳು, ಅಥವಾ ಶಸ್ತ್ರಾಸ್ತ್ರ ಗಳನ್ನೂ ಈ ಮೂರು ದೇಶಗಳಿಗೆ ಮಾತ್ರ ನೀಡಲಾಗುತ್ತದೆ. ಅಷ್ಟೇ ಅಲ್ಲದೇ, ಮಿಲಿಟರಿ ವಲಯದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸಲು ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆ (ಎನ್‌ಡಿಎಎ) ಅಡಿಯಲ್ಲಿ ವಿವಿಧ ದೇಶಗಳ ನಡುವೆ ಸಿಬ್ಬಂದಿ ಹಾಗೂ ಮಾಹಿತಿ ವಿನಿಮಯ ನಡೆಯುತ್ತದೆ.

ಇದೀಗ ಇದೇ ಒಪ್ಪಂದಗಳು ಭಾರತಕ್ಕೆ ಅನ್ವಯವಾಗುವಂತೆ ಅಮೇರಿಕ ದೇಶದಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಮಾಡಲಾಗಿದೆ. ಇದರಿಂದ ಅಮೇರಿಕ ದೇಶದ ಜೊತೆ ಇನ್ನು ಮುಂದೆ ಭಾರತ ಮಿಲಿಟರಿ ಸಹಭಾಗತ್ವ ಹೊಂದಲು ಸಹಾಯವಾಗಲಿದೆ. ಅಷ್ಟೇ ಅಲ್ಲದೇ, ಅತ್ಯಾಧುನಿಕ ಫೈಟರ್ ಜೆಟ್‌ಗಳನ್ನು ಭಾರತ ಪಡೆಯ ಬಹುದಾಗಿದೆ. ಮತ್ತೊಂದು ಮಸೂದೆಯಲ್ಲಿ ಭಾರತ ದೇಶದ ಜೊತೆ ಮಿಲಿಟರಿ ವಲಯದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಮಂಡಿಸಲಾಗಿದ್ದು ರಕ್ಷಣಾ ಮತ್ತು ಸಂಬಂಧಿತ ಕೈಗಾರಿಕಾ ಮತ್ತು ತಂತ್ರಜ್ಞಾನ ಸಂಶೋಧನೆ, ಅಭಿವೃದ್ಧಿ ಅವಕಾಶಗಳು ಮತ್ತು ಯುಎಸ್ ಮತ್ತು ಭಾರತದ ನಡುವಿನ ಸಿಬ್ಬಂದಿ ವಿನಿಮಯದ ವಿಚಾರದಲ್ಲಿ ಭಾರತದ ಜೊತೆ ಅಮೇರಿಕ ಕೈ ಜೋಡಿಸಲಿದೆ.

Post Author: Ravi Yadav