ಜಪಾನ್, ಇಸ್ರೇಲ್, ಯುಎಸ್ ಅಲ್ಲಾ ಭಾರತಕ್ಕೆ ತನ್ನ ಸಶಸ್ತ್ರ ಪಡೆಗಳ ಬೆಂಬಲ ಘೋಷಿಸಿದ ಮೊದಲ ದೇಶ ! ವಿವರಗಳೇನು ಗೊತ್ತಾ?

ಜಪಾನ್, ಇಸ್ರೇಲ್, ಯುಎಸ್ ಅಲ್ಲಾ ಭಾರತಕ್ಕೆ ತನ್ನ ಸಶಸ್ತ್ರ ಪಡೆಗಳ ಬೆಂಬಲ ಘೋಷಿಸಿದ ಮೊದಲ ದೇಶ !ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ಕ್ಷಣ ಕ್ಷಣಕ್ಕೂ ಕಾವು ಏರುತ್ತಿದೆ. ಇದೀಗ ಪಾಕಿಸ್ತಾನವು ಕೂಡ ಗಡಿಯಲ್ಲಿ ಚೀನಾ ದೇಶಕ್ಕೆ ಬೆಂಬಲಿಸುವ ಸಾಧ್ಯತೆಗಳು ಕಾಣಿಸುತ್ತವೆ. ಈಗಾಗಲೇ ಭಿಕ್ಷೆ ಬೇಡುತ್ತಿದ್ದರೂ ಕೂಡ ಬುದ್ದಿ ಕಲಿಯದ ಪಾಕಿಸ್ತಾನ, ಇದೀಗ ಭಾರತದ ಗಡಿಯಲ್ಲಿ ತನ್ನ ಸೇನೆ ರವಾನೆ ಮಾಡುತ್ತಿದೆ.

ಅಷ್ಟೇ ಅಲ್ಲದೇ, ಚೀನಾ ದೇಶಕ್ಕೆ ತನ್ನ ವಾಯುನೆಲೆಗಳನ್ನು ಹಾಗೂ ಸೇನಾ ನೆಲಗಳನ್ನು ಬಳಸಿಕೊಳ್ಳುವ ಅವಕಾಶ ನೀಡುವ ಮೂಲಕ ಚೀನಾ ದೇಶಕ್ಕೆ ಭಾರತವನ್ನು ಸುತ್ತು ವರೆಯಲು ಅವಕಾಶ ನೀಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದೆ. ಇನ್ನೊಂದೆಡೆ ಭಾರತ ದೇಶವು ಕೂಡ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿ ಎಂತಹ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ದವಾಗಿ ನಿಂತಿದೆ. ಭಾರತದ ನಡೆಗೆ ಅಮೇರಿಕ ದೇಶ ಕೂಡ ಬೆಂಬಲ ನೀಡಿ, ಭಾರತಕ್ಕೆ ಸೇನೆ ರವಾನಿಸಲು ನಿರ್ಧಾರ ಮಾಡಿರುವುದಾಗಿ ಹೇಳಿಕೆ ನೀಡಿದೆ. ಮತ್ತೊಂದೆಡೆ ಭಾರತದ ಮಿತ್ರರಾದ ಜಪಾನ್, ತೈವಾನ್ ಕೂಡ ಬೆಂಬಲ ನೀಡುವ ಸೂಚನೆಗಳು ನೀಡಿವೆ, ಆದರೆ ಸಶಸ್ತ್ರ ಪಡೆಗಳ ಬೆಂಬಲವನ್ನು ಇಲ್ಲಿಯವರೆಗೂ ಯಾರು ಅಧಿಕೃತವಾಗಿ ಆದೇಶ ಹೊರಡಿಸಿರಲಿಲ್ಲ.

ಆದರೆ ಇದೀಗ ವಿಶ್ವದ ಬಲಾಢ್ಯ ದೇಶಗಳಲ್ಲಿ ಒಂದಾದ ಫ್ರಾನ್ಸ್ ದೇಶ ಅಧಿಕೃತ ಆದೇಶ ಹೊರಡಿಸಿ, ಭಾರತಕ್ಕೆ ಸೇನೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಹೌದು ಸ್ನೇಹಿತರೇ, ಇದೀಗ ಭಾರತಕ್ಕೆ ಪತ್ರ ಬರೆದಿರುವ ಫ್ರಾನ್ಸ್ ದೇಶದ ರಕ್ಷಣಾ ಅಧಿಕಾರಿ, ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಗೆ ನಾವು ಸಂತಾಪ ಸೂಚಿಸುತ್ತಿದ್ದೇವೆ. ಸೈನಿಕರ ಕುಟುಂಬಕ್ಕೆ ಸ್ನೇಹ ಪರವಾದ ಬೆಂಬಲ ಸೂಚಿಸುತ್ತಿದ್ದೇವೆ, ಹಾಗೂ ಭಾರತದ ಜೊತೆ ಇಂತಹ ಕಠಿಣ ಸಂದರ್ಭದಲ್ಲಿ ಫ್ರೆಂಚ್ ಸಶಸ್ತ್ರ ಪಡೆಗಳ ಹಾಗೂ ನನ್ನ ಅಚಲ ಮತ್ತು ಸ್ನೇಹಪರ ಬೆಂಬಲವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದು ಅಧಿಕೃತ ಪತ್ರ ಬೆರೆಯುವ ಮೂಲಕ ಫ್ರಾನ್ಸ್ ದೇಶದ ಸಶಸ್ತ್ರ ಪಡೆಯ ಬೆಂಬಲವನ್ನು ಸೂಚಿಸಿದ್ದಾರೆ.