ಕರಣ್ ಗೆ ಅತಿ ದೊಡ್ಡ ಶಾಕ್ ! ಆನ್ಲೈನ್ ನಲ್ಲಿ ಬಾರಿ ಸಂಭ್ರಮಾಚರಣೆ ಮಾಡಿದ ಸುಶಾಂತ್ ಫ್ಯಾನ್ಸ್ ! ಯಾಕೆ ಗೊತ್ತಾ?

ಕರಣ್ ಗೆ ಅತಿ ದೊಡ್ಡ ಶಾಕ್ ! ಆನ್ಲೈನ್ ನಲ್ಲಿ ಬಾರಿ ಸಂಭ್ರಮಾಚರಣೆ ಮಾಡಿದ ಸುಶಾಂತ್ ಫ್ಯಾನ್ಸ್ ! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ಬಾಲಿವುಡ್ ಅನ್ನು ನಡುಗಿಸುತ್ತಿದೆ. ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬ ಬಲವಾದ ಮಾತುಗಳು ಕೇಳಿಬಂದಿವೆ. ಅದರಲ್ಲಿಯೂ ಕರಣ್ ಜೋಹರ್, ಅಲಿಯಾ ಭಟ್, ಸಲ್ಮಾನ್ ಖಾನ್, ಸೋನಂ ಕಪೂರ್ ಸೇರಿದಂತೆ ಖ್ಯಾತ ಸೆಲೆಬ್ರೆಟಿಗಳ ಮೇಲೆ ಹಲವಾರು ಟೀಕೆಗಳು ಕೇಳಿ ಬರುತ್ತಿವೆ.

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಣ್ ಹಾಗೂ ಇತರರು ಸ್ವಜನಪಕ್ಷಪಾತ ದಿಂದ ಮಾತನಾಡಿದ್ದಾರೆ ಎನ್ನಲಾಗುತ್ತಿರುವ ಹಲವಾರು ವಿಡಿಯೋ ಗಳು ಬಾರಿ ವೈರಲ್ ಆಗಿವೆ. ಇನ್ನು ಈ ಸ್ವಜನಪಕ್ಷಪಾತದ ಕುರಿತು ಕಂಗನಾ ರಾವತ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಮಾತನಾಡಿರುವ ವಿಡಿಯೋ ಗಳು ಇನ್ನೂ ಹೆಚ್ಚು ಸದ್ದು ಮಾಡಿವೆ. ಅದರಲ್ಲಿ ಬಾಲಿವುಡ್ ನಲ್ಲಿ ಬಾರಿ ಸದ್ದು ಮಾಡಿದ್ದ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ನಡೆದಿದ್ದ ಸಂಭಾಷಣೆಗಳೇ ಹೆಚ್ಚಾಗಿವೆ.

ಇದೀಗ ಈ ಕಾಫಿ ವಿಥ್ ಕರಣ್ ನಡೆಸಿ ಕೊಡುತ್ತಿದ್ದ ಕರಣ್ ಜೋಹರ್ ರವರ ಮೇಲೂ ಟೀಕೆಗಳ ಬಾಣಗಳು ಸುರಿದಿವೆ. ಹೀಗಿರುವಾಗ ಪ್ರಖ್ಯಾತ ಶೋ ರದ್ದಾಗುವ ಆದೇಶ ಹೊರಬೀಳುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಸುಶಾಂತ್ ರವರ ಕುರಿತು ಗೇಲಿ ಮಾಡಿದ್ದಕ್ಕಾಗಿ ಸುಶಾಂತ್ ರವರ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಈ ಕಾರ್ಯಕ್ರಮದ ವಿಡಿಯೋಗಳನ್ನು ಪೋಸ್ಟ್ ಮಾಡಿ ಟೀಕೆಗಳ ಬಾಣಗಳನ್ನು ಸುರಿಸಿದ್ದರು. ಇದರ ಬೆನ್ನಲ್ಲೇ ಸ್ಟಾರ್ ವರ್ಲ್ಡ್ ಸಂಸ್ಥೆಯು ಬೇರೆ ಚಾನೆಲ್ ವರ್ಗಾಯಿಸುವ ಆಲೋಚನೆ ನಡೆಸಿತ್ತು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಾರ್ಯಕ್ರಮವನ್ನು ನಿಲ್ಲಿಸುವ ಪ್ರಸ್ತಾಪವನ್ನು ಚಾನೆಲ್ ನ ಮಾಲೀಕರು ಇಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.