ಡಿಜಿಟಲ್ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಧಾರ ಘೋಷಣೆ ಮಾಡಿ ಚೀನಾ ಅಪ್ಲಿಕೇಶನ್ಗಳಿಗೆ ಬಿಗ್ ಶಾಕ್ ನೀಡಿದ ಮೋದಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲಡೆ ಚೀನಾ ದೇಶದ ಅಪ್ಲಿಕೇಶನ್ ಗಳನ್ನು ಬಳಸಬೇಡಿ ಎಂಬ ಅಭಿಯಾನಗಳು ಆರಂಭವಾಗಿವೆ. ಆದರೆ ಹಲವಾರು ಜನರು ಸರ್ಕಾರವೇ ಯಾಕೆ ಚೀನಾ ಅಪ್ಲಿಕೇಶನ್ಗಳನ್ನು ನಿಷೇಧಿಸಬಾರದು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇದೀಗ ಕೇಂದ್ರ ಸರ್ಕಾರ ಹೋಗಿದೆ ಹಾದಿಯಲ್ಲಿ ಮುನ್ನುಗ್ಗಿ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇಷ್ಟು ದಿವಸ ಟೆಂಡರುಗಳ ಹಾಗೂ ಕಂಪನಿಗಳ ಒಪ್ಪಂದಗಳನ್ನು ರದ್ದು ಮಾಡುವ ಮೂಲಕ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದ ನರೇಂದ್ರ ಮೋದಿ ಸರ್ಕಾರವು ಇದೀಗ ದೇಶದ ಭದ್ರತೆಯ ದೃಷ್ಟಿ ಎಂಬ ಆಧಾರದ ಮೇಲೆ ಬರೋಬ್ಬರಿ ಚೀನಾ ದೇಶದ 59 ಅಪ್ಲಿಕೇಶನ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಪಟ್ಟಿಯಲ್ಲಿ ಟಿಕ್‌ಟಾಕ್, ಶೇರಿಟ್, ಯುಎಸ್ ಬ್ರೌಸರ್, ಬೈದು ನಕ್ಷೆ, ಹೆಲೋ, ಮಿ ಸಮುದಾಯ, ಕ್ಲಬ್ ಫ್ಯಾಕ್ಟರಿ, ವೀಚಾಟ್, ಯುಸಿ ನ್ಯೂಸ್, ವೀಬೊ, ಕ್ಸೆಂಡರ್, ಮೀಟು, ಕ್ಯಾಮ್‌ಸ್ಕಾನರ್ ಮತ್ತು ಕ್ಲೀನ್ ಮಾಸ್ಟರ್ ಸೇರಿಕೊಂಡಿವೆ. ದಿನೇ ದಿನೇ ಈ ಅಭಿಯಾನಕ್ಕೆ ಜನರ ಬೆಂಬಲ ಹೆಚ್ಚಾಗುವುದರ ಜೊತೆಗೆ ಈ ಆದೇಶ ಹೊರಡಿಸಿರುವುದು, ಜನರಲ್ಲಿ ಮತ್ತಷ್ಟು ಉತ್ಸಹಾ ನೀಡುವುದು ಸುಳ್ಳಲ್ಲ. ಅಂದಹಾಗೆ ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿ ಹೊರಬರಬೇಕಾಗಿದ್ದು, ಟೈಮ್ಸ್ ನೌ ಹಾಗೂ ಸುವರ್ಣ ನ್ಯೂಸ್ ನಂತಹ ಪ್ರತಿಷ್ಠಿತ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿವೆ.

Post Author: Ravi Yadav