ಅತ್ಯಗತ್ಯ ಸಂದರ್ಭದಲ್ಲಿ ಭಾರತಕ್ಕಾಗಿ ಒಪ್ಪಂದವನ್ನೇ ಬದಲಿಸಿದ ಫ್ರಾನ್ಸ್ ! ಸೇನೆಗೆ ಆನೆ ಬಲ ! ಧನ್ಯವಾದಗಳು ಮಿತ್ರ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶವು ನಮ್ಮ ಹೆಮ್ಮೆಯ ವಾಯುಪಡೆಯನ್ನು ಮತ್ತಷ್ಟು ಬಲಗೊಳಿಸಲು ರಫೇಲ್ ಜೆಟ್ ಗಳನ್ನೂ ಖರೀದಿಸಲು ಫ್ರಾನ್ಸ್ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಭಾಗವಾಗಿ ಮುಂದಿನ ತಿಂಗಳು ನಾಲ್ಕು ಸುಶಜ್ಜಿತ ರಫೇಲ್ ಜೆಟ್ ಗಳನ್ನು ಭಾರತಕ್ಕೆ ಕಳುಹಿಸುವುದಾಗಿ ಫ್ರಾನ್ಸ್ ಭರವಸೆ ನೀಡಿತ್ತು.

ಕೊರೋನ ಪರಿಣಾಮದಿಂದ ತಡವಾಗಬಹುದೇ? ಎಂದು ಭಾರತ ಪ್ರಶ್ನೆ ಮಾಡಿ, ಹೇಗಾದರೂ ಪ್ರಕ್ರಿಯೆಯನ್ನು ವೇಗಗೊಳಿಸಿ ಎಂದಿತ್ತು. ಇದಕ್ಕೆ ಒಪ್ಪಿಕೊಂಡಿದ್ದ ಫ್ರಾನ್ಸ್ ದೇಶ ಮುಂದಿನ ತಿಂಗಳು ಅಂದರೇ ಜೂಲೈ ನಲ್ಲಿ ವಿಮಾನಗಳನ್ನು ಕಳುಹಿಸಲು ಒಪ್ಪಿಕೊಂಡಿತ್ತು. ಆದರೆ ಗಡಿಯಲ್ಲಿ ನಡೆದ ಘಟನೆ, ಹಾಗೂ ಚೀನಾ ದೇಶದ ನಡುವೆ ನಡೆಯುತ್ತಿರುವ ಸನ್ನಿವೇಶಗಳನ್ನು ನೋಡಿದ ವಾಯುಪಡೆ, ಮೊದಲ ಹಂತವಾಗಿ ಹೆಚ್ಚುವರಿ ಜೆಟ್ ಗಳನ್ನು ನೀಡಲು ಸಾಧ್ಯವೇ ಎಂದು ಮನವಿ ಮಾಡಿತ್ತು.

ಇದಕ್ಕೆ ಇದೀಗ ಪ್ರತಿಕ್ರಿಯೆ ನೀಡಿರುವ ಫ್ರಾನ್ಸ್ ದೇಶವು, ಹೆಚ್ಚುವರಿಯಾಗಿ ಎರಡು ವಿಮಾನಗಳನ್ನು ಕಳುಹಿಸುವುದಾಗಿ ಘೋಷಣೆ ಮಾಡಿ, ಒಟ್ಟಾರೆ 6 ರಫೇಲ್ ಯುದ್ಧ ವಿಮಾನಗಳು ಮುಂದಿನ ಜುಲೈ ತಿಂಗಳ 27 ತಾರೀಕಿನಂದು ಭಾರತ ತಲುಪಲಿವೆ ಎಂದು ಅಧಿಕೃತ ಆದೇಶ ಹೊರಡಿಸಿದೆ. ಈ ಯುದ್ಧ ವಿಮಾನಗಳನ್ನು ಚೀನಾ ಗಡಿಗಳಲ್ಲಿ ನಿಯೋಜನೆ ಮಾಡುವುದಾಗಿ ವಾಯುಪಡೆ ಖಚಿತ ಪಡಿಸಿದೆ. ಒಟ್ಟಿನಲ್ಲಿ ಅದೇನೇ ಆಗಲಿ, ಹೆಚ್ಚುವರಿ ವಿಮಾನಗಳಿಗಾಗಿ ಮನವಿ ಮಾಡಿದ ತಕ್ಷಣ ನಡೆದಿದ್ದ ಒಪ್ಪಂದವನ್ನು ಮರೆತು ಭಾರತಕ್ಕೆ ಹೆಚ್ಚುವರಿ ಯುದ್ಧ ವಿಮಾನಗಳನ್ನು ಕಳುಹಿಸುತ್ತಿರುವ ಫ್ರಾನ್ಸ್ ದೇಶಕ್ಕೆ ನಮ್ಮ ಪರವಾಗಿ ಅನಂತ ಅನಂತ ವಂದನೆಗಳು.