ಫಾರ್ಮಸಿಟಿಕಲ್ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟ ಕೇಂದ್ರ ! ಚೀನಾಗೆ ಮತ್ತೊಂದು ಹಾದಿಯಲ್ಲಿ ಶಾಕ್ ! ಏನು ಗೊತ್ತಾ?

ಫಾರ್ಮಸಿಟಿಕಲ್ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟ ಕೇಂದ್ರ ! ಚೀನಾಗೆ ಮತ್ತೊಂದು ಹಾದಿಯಲ್ಲಿ ಶಾಕ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ದೇಶವು ಇದೀಗ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಗುರುತಿಸಿಕೊಂಡು ಇತರ ದೇಶಗಳ ಮೇಲಿನ ಅವಲಂಬತೆಯನ್ನು ಕಡಿಮೆ ಮಾಡಲು ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿದೆ. ಈ ಹಾದಿ ಬಹಳ ದೊಡ್ಡದಾಗಿದ್ದು ಕಷ್ಟ ಎನಿಸಿದರೂ ಕೂಡ ದೇಶಕ್ಕಾಗಿ ಹಾಗೂ ದೇಶದ ಏಳಿಗೆಗಾಗಿ ಇದು ಅತ್ಯಗತ್ಯವಾಗಿದೆ. ಅದೇ ಕಾರಣಕ್ಕೆ ಎಲ್ಲರೂ ರಾಜಕೀಯ ಮರೆತು ಒಟ್ಟಾಗಿ ಕೈಜೋಡಿಸಿ ಭಾರತದಲ್ಲಿಯೇ ವಸ್ತುಗಳನ್ನು ಉತ್ಪಾದನೆ ಮಾಡಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಇಷ್ಟೆಲ್ಲಾ ಅಭಿಯಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ನಾವು ಕೇವಲ ಭಾರತದಲ್ಲಿ ಉತ್ಪಾದನೆ ಮಾಡಿದರೇ ಸಾಲುವುದಿಲ್ಲ ಎಂದು ಎಲ್ಲರಿಗೂ ಅನಿಸುತ್ತಿರುತ್ತದೆ, ತಯಾರು ಮಾಡಲು ಅಗತ್ಯವಾಗಿರುವ ಕಚ್ಚಾ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಇಲ್ಲಿ ಜೋಡಿಸಿ ಮಾರಾಟ ಮಾಡಿದರೇ ಅವಲಂಬತೆ ಕೊಂಚ ಕಡಿಮೆಯಾದರೂ ಕೂಡ ಅಷ್ಟಾಗಿ ಪ್ರಭಾವ ಬೀರುವುದಿಲ್ಲ. ಅದೇ ಕಾರಣಕ್ಕೆ ಇದೀಗ ಭಾರತ ತನ್ನ ಪ್ರಮುಖ ಉತ್ಪಾದನೆ ವಿಭಾಗದ ಮೇಲೆ ಕಣ್ಣಿಟ್ಟು ಮಹತ್ವದ ಸಭೆ ನಡೆಸಿ, ಅಧಿಕಾರಿಗಳಿಗೆ ಹೊಸ ಕೆಲಸ ನೀಡಿದೆ. ಹೌದು ಸ್ನೇಹಿತರೇ, ಭಾರತ ಇದೀಗ ತನ್ನ ಪ್ರಮುಖ ಉತ್ಪಾದನಾ ವಿಭಾಗವಾದ ಮಾತ್ರೆಗಳನ್ನು ತಯಾರು ಮಾಡುವ ಕ್ಷೇತ್ರದಲ್ಲಿ ಚೀನಾ ಅವಲಂಬತೆಯನ್ನು ಕಡಿಮೆ ಮಾಡಲು ತಯಾರಿ ನಡೆಸಿದೆ. ಇದರಿಂದ ಸರಿ ಸುಮಾರು 7000 ಕೋಟಿ ರೂ ಚೀನಾಕ್ಕೆ ಹರಿಯುವುದು ತಪ್ಪಲಿದೆ.

ಹೌದು, ಭಾರತ ದೇಶವು ಅತಿದೊಡ್ಡ ಮಾತ್ರ ಉತ್ಪಾದನಾ ರಾಷ್ಟ್ರವಾಗಿದ್ದರೂ ಕೂಡ ಶೇಕಡಾ 70 ರಷ್ಟು ಕಚ್ಚಾ ವಸ್ತುಗಳನ್ನು ಚೀನಾ ದೇಶದಿಂದಲೇ ಆಮದು ಮಾಡಿಕೊಳ್ಳುತಿತ್ತು. ಇದರ ಕುರಿತು ಇದೀಗ ಗಮನಹರಿಸಿರುವ ಕೇಂದ್ರ, ಹಂತ ಹಂತವಾಗಿ ಕಚ್ಚಾ ವಸ್ತುಗಳನ್ನು ಇಲ್ಲಿಯೇ ತಯಾರಿಸಲು ಎನ್‌ಐಟಿಐ ಆಯೋಗ, ಔಷದ ಇಲಾಖೆ, ಹಣಕಾಸು ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ ಸೇರಿ ಸಭೆ ನಡಿಸಿದರ ಪರಿಣಾಮ ಇದೀಗ ಅಧಿಕಾರಿಗಳು 600 ಕ್ಕೂ ಹೆಚ್ಚು ಕಚ್ಚಾ ವಸ್ತುಗಳ ತಯಾರಕರನ್ನು ತಲುಪಿ, ಯೋಜನೆ, ಅರ್ಹತಾ ಮಾನದಂಡಗಳು ಮತ್ತು ಪ್ರೋತ್ಸಾಹಕಗಳ ವರ್ಗೀಕರಣದ ಕನಿಷ್ಠ ಅವಶ್ಯಕತೆಗಳನ್ನು ರೂಪಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ. ಈ ಮೂಲಕ ಕಚ್ಚಾ ವಸ್ತುಗಳ ಆಮದಿಗೂ ಕೂಡ ಕೇಂದ್ರ ಬ್ರೇಕ್ ಹಾಕಲು ಮುಂದಾಗಿರುವುದು ಸಂತಸದ ವಿಷಯ ಎಂಬ ಮಾತುಗಳು ಕೇಳಿಬಂದಿವೆ.