ಬಂದಿತು ವಿಶೇಷ ಆಹ್ವಾನ ! ದಕ್ಷಿಣ ಚೀನಾ ಸಮುದ್ರದಲ್ಲಿ ಶುರುವಾಗಲಿದೆಯೇ ಭಾರತದ ಹವಾ? ಏನು ಗೊತ್ತಾ?

ಬಂದಿತು ವಿಶೇಷ ಆಹ್ವಾನ ! ದಕ್ಷಿಣ ಚೀನಾ ಸಮುದ್ರದಲ್ಲಿ ಶುರುವಾಗಲಿದೆಯೇ ಭಾರತದ ಹವಾ? ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಮ್ಮ ಸೈನಿಕರ ಮಾಡಿದ ಮಹಾನ್ ಮಾನವೀಯತಾ ಕಾರ್ಯ ಇದೀಗ ದೇಶಕ್ಕೆ ಮತ್ತಷ್ಟು ಬಲ ತುಂಬುವ ಸೂಚನೆ ನೀಡಿದೆ. ಇದಕ್ಕಾಗಿಯೇ ಭಾರತ ದೇಶಕ್ಕೆ ವಿಶೇಷ ಆಹ್ವಾನ ಬಂದಿದ್ದು, ನವ ದೆಹಲಿ ಇದಕ್ಕೆ ಅಸ್ತು ಎಂದರೇ, ಚೀನಾ ಬುಸುಗುಡುತ್ತಿರುವ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತೀಯ ನೌಕಾ ಪಡೆಯ ಹವಾ ಆರಂಭವಾಗಲಿದೆ.

ಹೌದು ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಭಾರತೀಯ ನೌಕಾ ಪಡೆಯು ಸಮುದ್ರದಲ್ಲಿ ಎಂಜಿನ್ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡು ಧಗ ಧಗ ಉರಿಯುತ್ತಿರುವ ಇತರ ದೇಶದ ನೌಕಾ ಪಡೆಯ ಹಡಗನ್ನು ನೋಡುತ್ತದೆ. ಮರು ಕ್ಷಣ ಆಲೋಚನೆ ಮಾಡದ ನಮ್ಮ ಯೋಧರು ರಕ್ಷಣೆಗೆ ತೆರಳಿ, ನೌಕಾಪಡೆಯ ಹಡಗನ್ನು ರಕ್ಷಿಸಿ, ಹಡಗನ್ನು ಭಾರತದ ಕೊಚ್ಚಿಯ ನೌಕಾಪಡೆಯ ನೌಕಾಂಗಣದಲ್ಲಿ ಉಚಿತವಾಗಿ ರಿಪೇರಿ ಮಾಡಿ, ಹಲವಾರು ಜನರಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸುತ್ತದೆ. ಕೆಲವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಒದಗಿಸುತ್ತದೆ ನಮ್ಮ ಹೆಮ್ಮೆಯ ನೌಕಾಪಡೆ.

ಅದು ಬೇರೆ ಯಾವ ದೇಶದ್ದು ಅಲ್ಲಾ, ಮೊದಲಿಗೆ ಚೀನಾ ದೇಶದ ಆಪ್ತಮಿತ್ರ ಎಂದು ಕರೆಸಿಕೊಂಡು, ಚೀನಾ ನಡೆಗಳಿಗೆ ಬೇಸತ್ತು ಇತ್ತೀಚಿಗೆ ಹೊರಬಂದು, ಅಮೇರಿಕ ದೇಶದ ಕದ ತಟ್ಟಿದ್ದ ಫಿಲಿಪೈನ್ಸ್ ದೇಶದ ಹಡಗು. ಇದಾದ ಬಳಿಕ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರನ್ನು ಉದ್ದೇಶಿಸಿ ಪತ್ರ ಬರೆದ ಫಿಲಿಪೈನ್ಸ್ ನೌಕಾಪಡೆ ಹಾಗೂ ಅಲ್ಲಿನ ಸರ್ಕಾರ ಧನ್ಯವಾದ ತಿಳಿಸುತ್ತಾರೆ.

ಇದೀಗ ಮತ್ತೊಂದು ಸಂದೇಶ ರವಾನೆ ಮಾಡಿರುವ ಫಿಲಿಪೈನ್ಸ್ ದೇಶವು, ನಮ್ಮ ಸಮುದ್ರಗಳನ್ನು (ದಕ್ಷಿಣ ಚೀನಾ ಸಮುದ್ರ) ಎಲ್ಲರಿಗೂ ಹೆಚ್ಚು ಸುರಕ್ಷಿತವಾಗಿಸಲು ನಾವು ಉತ್ತಮ ಮಾರ್ಗಗಳನ್ನು ಹುಡುಕುತ್ತಿರುವುದರಿಂದ ಭಾರತದ ಜೊತೆ ಈ ಸಂಬಂಧವನ್ನು ವಿಸ್ತರಿಸಲು ನಾವು ಆಶಿಸುತ್ತೇವೆ. ಭಾರತೀಯ ನೌಕಾಪಡೆಯ ನಿರಂತರ ಸಂಕಲ್ಪವನ್ನು ಜಾಗತಿಕ ಕಡಲ ಶಕ್ತಿಯಾಗಿ ಮುನ್ನಡೆಸುವಲ್ಲಿ ನಿಮ್ಮ ನಿರಂತರ ಯಶಸ್ಸಿಗೆ ಶುಭ ಹಾರೈಸುತ್ತೇವೆ ಎಂದು ಲಾಜಿಸ್ಟಿಕ್ಸ್ ಹಂಚಿಕೆ ಒಪ್ಪಂದಕ್ಕೆ ಮುದ್ರೆ ಹಾಕಲು ಆಹ್ವಾನ ನೀಡಿದೆ. ಈ ಆಹ್ವಾನಕ್ಕೆ ಭಾರತ ಒಪ್ಪಿಕೊಂಡರೇ, ಫಿಲಿಪೈನ್ಸ್ ನೌಕಾನೆಲೆಗಳನ್ನು ಮುಕ್ತವಾಗಿ ಬಳಸಿಕೊಳ್ಳಬಹುದಾಗಿದೆ. ಈಗಾಗಲೇ ಚೀನಾ ದೇಶದ ಸುತ್ತ ಇದೇ ರೀತಿಯ ಒಪ್ಪಂದಗಳ ಬಲೆ ಹೆಣೆದಿರುವ ಭಾರತ, ಈ ಆಹ್ವಾನವನ್ನು ತಿರಸ್ಕರಿಸುವ ಸಾಧ್ಯತೆಯೇ ಇಲ್ಲ ಎಂದು ಹೇಳಲಾಗುತ್ತಿದೆ.