ಬಿಗ್ ಬ್ರೇಕಿಂಗ್: ಅಮಿತ್ ಶಾ ಖಾತೆ ಬದಲಾವಣೆ?? ತಲ್ಲಣ ಸೃಷ್ಟಿಸಿದ ಸುದ್ದಿ ! ಅಷ್ಟಕ್ಕೂ ಯಾವ ಖಾತೆ ಗೊತ್ತಾ?

ಬಿಗ್ ಬ್ರೇಕಿಂಗ್: ಅಮಿತ್ ಶಾ ಖಾತೆ ಬದಲಾವಣೆ?? ತಲ್ಲಣ ಸೃಷ್ಟಿಸಿದ ಸುದ್ದಿ ! ಅಷ್ಟಕ್ಕೂ ಯಾವ ಖಾತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಅಮಿತ್ ಶಾ ರವರ ಕಾರ್ಯವೈಖರಿಯ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಗೃಹ ಸಚಿವರಾಗಿ ಅಧಿಕಾರ ಅಧಿಕಾರಕ್ಕೆ ಏರಿದ ಮೇಲೆ ಹಲವಾರು ಮಸೂದೆಗಳನ್ನು ಮಂಡಿಸುವುದಷ್ಟೇ ಅಲ್ಲದೇ, ಸದಾ ಗೃಹ ಕಚೇರಿಯಲ್ಲಿ ದೇಶದಲ್ಲಿನ ಸವಾಲುಗಳ ಬಗ್ಗೆ ಚರ್ಚಿಸಿ ಪ್ರತಿಯೊಂದು ಸವಾಲುಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ತನ್ನದೇ ಆದ ಕಾರ್ಯ ತಂತ್ರವನ್ನು ರೂಪಿಸುತ್ತಿರುತ್ತಾರೆ.

ಗೃಹ ಕಚೇರಿಯಲ್ಲಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು ಕೂಡ ಅಮಿತ್ ಶಾ ರವರು ಗೃಹ ಕಚೇರಿಗೆ ಎಂಟ್ರಿ ಕೊಟ್ಟಮೇಲೆ ಕೆಲಸ ಹೆಚ್ಚಾಗಿದೆ. ಸದಾ ಗೃಹ ಕಚೇರಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಾ, ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುತ್ತಾ, ನಮಗೂ ಹೆಚ್ಚುವರಿ ಕೆಲಸಗಳನ್ನು ನೀಡುತ್ತಿದ್ದಾರೆ ಎಂದು ಹಲವಾರು ಬಾರಿ ಹೇಳಿರುವುದನ್ನು ನಾವು ಕೇಳಿದ್ದೇವೆ, ನೀವು ಕೇಳಿರುತ್ತೀರಿ. ಇನ್ನು ದೇಶದಲ್ಲಿ ಐತಿಹಾಸಿಕ ಮಸೂದೆಗಳನ್ನು ಮಂಡಿಸಿ ಜಮ್ಮು-ಕಾಶ್ಮೀರದಲ್ಲಿ ತನ್ನದೇ ಬೆಂಬಲದಿಂದ ನಡೆಯುತ್ತಿದ್ದ ಸರಕಾರವನ್ನು ಪತನಗೊಳಿಸಿ ಆರ್ಟಿಕಲ್ 370 ಅನ್ನು ರದ್ದುಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡಿದ ಕೀರ್ತಿ ಅಮಿಷಾ ರವರಿಗೆ ಸಲ್ಲುತ್ತದೆ.

ಗೃಹ ಸಚಿವರಾಗಿ ಇದೇ ರೀತಿ ಹಲವಾರು ಕೆಲಸಗಳನ್ನು ಮಾಡಿರುವ ಅಮಿತ್ ಶಾ ರವರ ಖಾತೆ ಇದೀಗ ಬದಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇಷ್ಟು ದಿವಸ ಕೊರೋನ ಪರಿಣಾಮದಿಂದ ನಿಂತುಹೋಗಿದ್ದ ರಾಜಕೀಯ ಚಟುವಟಿಕೆಗಳು ಇದೀಗ ಗರಿಗೆದರುತ್ತಿವೆ ಇದರ ಬೆನ್ನಲ್ಲೇ ಭಾರತ ನೆರೆಹೊರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಹಾಗೂ ನೇಪಾಳದಿಂದ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿದ್ದು, ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಾದ ಕನ್ನಡ ಪ್ರಭಾ ಹಾಗೂ ಬಿಸಿನೆಸ್ ಸ್ಟ್ಯಾಂಡರ್ಡ್ ಈ ಕುರಿತು ವರದು ಮಾಡಿದ್ದು, ಅಮಿತ್ ಶಾ ಅವರು ಭಾರತದ ರಕ್ಷಣಾ ಸಚಿವರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿವೆ.

ಒಂದು ವೇಳೆ ಅದೇ ನಡೆದಲ್ಲಿ ಅಮಿತ್ ಶಾ ರವರು ಗೃಹ ಕಚೇರಿಯಲ್ಲಿ ಕೆಲಸ ಮಾಡಿದಂತೆ, ಅದೇ ವೇಗದಲ್ಲಿ ಗಡಿಯಲ್ಲಿ ನಡೆಯುವ ವಿದ್ಯಮಾನಗಳಲ್ಲಿ ಕೆಲಸ ಮಾಡಿದ್ದಲ್ಲಿ ಖಂಡಿತ ಇನ್ನು ಮಹತ್ವದ ಘಟನೆಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಮಿತ್ ಷಾ ರವರಿಗೆ ಖಾತೆ ನೀಡುವ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.