ಜಪಾನ್-ಅಮೇರಿಕಾ ಒಂದಾಗಿ ಇಟ್ಟ ನಡೆ ಕಂಡು ಬೆಚ್ಚಿಬಿದ್ದ ಚೀನಾ ! ಸ್ಪಷ್ಟ ಸಂದೇಶ ನೀಡಲು ಮುಂದಾದ ಎರಡು ರಾಷ್ಟ್ರಗಳು !

ಜಪಾನ್-ಅಮೇರಿಕಾ ಒಂದಾಗಿ ಇಟ್ಟ ನಡೆ ಕಂಡು ಬೆಚ್ಚಿಬಿದ್ದ ಚೀನಾ ! ಸ್ಪಷ್ಟ ಸಂದೇಶ ನೀಡಲು ಮುಂದಾದ ಎರಡು ರಾಷ್ಟ್ರಗಳು !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಬಲಾಢ್ಯ ರಾಷ್ಟ್ರಗಳನ್ನು ಚೀನಾ ಕೆಣಕಿದೆ. ಭಾರತ, ಜಪಾನ್, ಅಮೇರಿಕ ದಂತಹ ಟಾಪ್ ರಾಷ್ಟ್ರಗಳ ಜೊತೆ ಒಮ್ಮೆಲೇ ಚೀನಾ ಖ್ಯಾತೆ ತೆಗೆಯುತ್ತಿದೆ. ಇನ್ನು ಇವೆಲ್ಲವನ್ನೂ ಹೊರತು ಪಡಿಸಿದರೇ ಟಾಪ್ ೫ ರಾಷ್ಟ್ರಗಳ ಪೈಕಿ ಉಳಿದಿರುವುದು ರಷ್ಯಾ ಮಾತ್ರ. ಒಂದು ವೇಳೆ ಯುದ್ಧ ನಡೆದರೇ ರಷ್ಯಾ ತಟಸ್ಥವಾಗಿರುತ್ತದೆ, ಇಲ್ಲವಾದಲ್ಲಿ, ಭಾರತದ ಪರ ನಿಲ್ಲುತ್ತದೆ. ಚೀನಾ ಪರವಾಗಿ ಧ್ವನಿ ಎತ್ತಲು ಸಾಧ್ಯವೇ ಇಲ್ಲ.

ಉತ್ತರ ಕೊರಿಯಾ, ಪಾಕಿಸ್ತಾನ ದೇಶಗಳ ಜೊತೆ ಸ್ನೇಹ ಹೊಂದಿದ್ದರೂ ವಿಶ್ವದ ಬಲಾಢ್ಯ ರಾಷ್ಟ್ರಗಳ ಮುಂದೆ ಏನು ಪ್ರಯೋಜನ ಇಲ್ಲ ಎಂಬುದು ಚೀನಾ ದೇಶಕ್ಕೆ ತಿಳಿದಿದೆ. ಆದರೂ ಕೂಡ ತನ್ನ ಬುದ್ದಿಯನ್ನು ಮಾತ್ರ ಬಿಡುತ್ತಿಲ್ಲ. ತೈವಾನ್ ಹಾಗೂ ಭಾರತ ಜೊತೆ ಖ್ಯಾತೆಯ ನಂತರ ಜಪಾನ್ ದೇಶದ ದ್ವೀಪದ ಮೇಲೆ ಕಣ್ಣಿಟ್ಟಿದ್ದ ಚೀನಾ ದೇಶಕ್ಕೆ ಜಪಾನ್ ಕ್ಷಿಪಣಿ ಜಮಾವಣೆ ಮಾಡಿ, ಗಡಿಯಲ್ಲಿ ಆಂಟಿ-ಮಿಸೈಲ್ ವ್ಯವಸ್ಥೆಯನ್ನು ನಿಯೋಜಿಸಿ, ಸೇನಾ ಜಮಾವಣೆ ಮಾಡಿ, ಚೀನಾ ದೇಶಕ್ಕೆ ಖ್ಯಾತೆ ಮುಂದುವರೆದರೇ ಏನಾಗಬಹುದು ಎಂಬ ಸ್ಪಷ್ಟ ಸಂದೇಶ ಸಾರಿತ್ತು.

ಇದೀಗ ಇದರ ಬೆನ್ನಲ್ಲೇ ಜಪಾನ್-ಅಮೇರಿಕಾ ದೇಶಗಳು ಜಂಟಿಯಾಗಿ ಮಹತ್ವದ ಹೆಜ್ಜೆ ಇಟ್ಟಿವೆ. ಹೌದು, ಇದು ಪೂರ್ವ ನಿಯೋಜಿತವಾಗಿದ್ದರೇ ಅಷ್ಟೇನು ಆಲೋಚನೆ ಮಾಡಬೇಕಾಗಿರಲಿಲ್ಲ. ಆದರೆ ದಕ್ಷಿಣ ಚೀನಾ ಸಮುದ್ರಲ್ಲಿ ಇದ್ದಕ್ಕಿದ್ದ ಹಾಗೇ ಜಪಾನ್ ಹಾಗೂ ಅಮೇರಿಕ ನೌಕಾ ಪಡೆಗಳು ಜಂಟಿ ಸಮರಾಭ್ಯಾಸ ನಡೆಸಿವೆ. ಚೀನಾ ದೇಶದ ಗಡಿಯಲ್ಲಿ ಭೇಟಿಯಾದ ಎರಡು ರಾಷ್ಟ್ರಗಳ ನೌಕಾ ಪಡೆಗಳು, ಯಾವುದೇ ಪೂರ್ವ ನಿರ್ಯೋಜಿತವಾಗಿಲ್ಲದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಚೀನಾ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಒಟ್ಟಿನಲ್ಲಿ ಇಷ್ಟು ದಿವಸ ತನ್ನ ಗಡಿಯಲ್ಲಿ ಸೇನಾ ಜಮಾವಣೆ ಮಾಡಿದ್ದ ಜಪಾನ್ ತನ್ನ ನೌಕಾ ಪಡೆಯನ್ನು ಅಖಾಡಕ್ಕೆ ಇಳಿಸಿ ಚೀನಾ ಗಡಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಚೀನಾ ದೇಶಕ್ಕೆ ನುಂಗಾಲಾರದ ತುತ್ತಾಗಿದೆ.