ಚೀನಾಗೆ ನಿರ್ಮಿತ ವಸ್ತುಗಳಿಗಿ ಸೆಡ್ಡು ! ಆನ್ಲೈನ್ ನಂತರ ಸ್ವದೇಶೀ ವಸ್ತುಗಳನ್ನು ಪ್ರತ್ಯೇಕಿಸಲು ಹೊಸ ಹೆಜ್ಜೆ ಇಟ್ಟ ಭಾರತ ! ಏನು ಗೊತ್ತಾ??

ಚೀನಾಗೆ ನಿರ್ಮಿತ ವಸ್ತುಗಳಿಗಿ ಸೆಡ್ಡು ! ಆನ್ಲೈನ್ ನಂತರ ಸ್ವದೇಶೀ ವಸ್ತುಗಳನ್ನು ಪ್ರತ್ಯೇಕಿಸಲು ಹೊಸ ಹೆಜ್ಜೆ ಇಟ್ಟ ಭಾರತ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಎಲ್ಲೆಡೆ ಚೀನಾ ನಿರ್ಮಿತ ವಸ್ತುಗಳನ್ನು ನಿಷೇದ ಮಾಡುವಂತೆ ಅಥವಾ ಯಾರು ಖರೀದಿ ಮಾಡದಂತೆ ಅಭಿಯಾನಗಳು ಆರಂಭಗೊಂಡಿವೆ. ಸರ್ಕಾರವು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿ ಸ್ವದೇಶೀ ವಸ್ತುಗಳನ್ನು ಬಳಸುವಂತೆ ಉತ್ತೇಜನ ನೀಡುತ್ತಿದೆ.

ಆದರೆ ಇಷ್ಟೆಲ್ಲ ಅಭಿಯಾನಗಳು ನಡೆಯುತ್ತಿದ್ದರೂ ಕೂಡ ಎಲ್ಲರಲ್ಲಿ ಕಾಡುತ್ತಿದ್ದ ಪ್ರಶ್ನೆಯೆನೆಂದರೇ ನಾವು ಹೇಗೆ ಸ್ವದೇಶೀ ನಿರ್ಮಿತ ಹಾಗೂ ವಿದೇಶಿ ನಿರ್ಮಿತ ವಸ್ತುಗಳನ್ನು ಪ್ರತ್ಯೇಕಿಸಿ ನೋಡಿ ಖರೀದಿ ಮಾಡುವುದು? ಎಲ್ಲೊ ಒಂದು ಮೂಲೆಯಲ್ಲಿ ಮೇಡ್ ಇನ್ ಇಂಡಿಯಾ ಎಂದು ಹಾಕಿರುತ್ತಾರೆ, ಇಲ್ಲವೆಂದರೆ ಬಹುತೇಕ ವಸ್ತುಗಳ ಮೇಲೆ ಯಾವ ದೇಶದಲ್ಲಿ ನಿರ್ಮಾಣವಾಗಿದೆ ಎಂದು ನಮೂದಿಸಿರುವುದಿಲ್ಲ, ಇದರಿಂದ ಸ್ವದೇಶೀ ವಸ್ತುಗಳು ಯಾವುವು, ವಿದೇಶಿ ನಿರ್ಮಿತ ವಸ್ತುಗಳು ಯಾವುವು ಎಂದು ನಿರ್ಧಾರ ಮಾಡುವುದು ಕಷ್ಟ ಎನ್ನುತ್ತಿದ್ದರು.

ಇದೀಗ ಇದರ ಕುರಿತು ಗಮನ ಹರಿಸಿರುವ ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದಷ್ಟೇ ಆನ್ಲೈನ್ ಮಾರಾಟ ಮಳಿಗೆಗಳಲ್ಲಿ ಮೂಲ ನಿರ್ಮಿತ ದೇಶದ ಕಂಪನಿಯ ಹೆಸರನ್ನು ಕಡ್ಡಾಯ ಮಾಡಿತ್ತು, ಇದೀಗ ಇನ್ನೊಂದು ಆದೇಶ ಹೊರಡಿಸಲು ಮುಂದಾಗಿರುವ ಮೋದಿ ಸರ್ಕಾರವು ದೇಶಿಯ ಉತ್ಪನ್ನಗಳಿಗೆ ಪ್ರತ್ಯೇಕ ಕಲರ್ ಕೋಡ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಉನ್ನತ ಮೂಲಗಳ ಪ್ರಕಾರ ವೆಜ್ ಹಾಗೂ ನಾನ್ ವೆಜ್ ಕಲರ್ ಕೋಡ್ ಗಳಂತೆ ದೇಶೀಯವಾಗಿ ಉತ್ಪಾದನೆಯಾಗುವೆ ವಸ್ತುಗಳಿಗೆ ಕೇಸರಿ ಬಣ್ಣ ಕಡ್ಡಾಯ ಮಾಡುವ ಆಲೋಚನೆ ನಡೆಸಿದೆ. ಒಟ್ಟಿನಲ್ಲಿ ದೇಶಿಗರಿಗೆ ಯಾವ ವಸ್ತುಗಳು ಸ್ವದೇಶೀ ನಿರ್ಮಿತ ಎಂಬುದನ್ನು ತೋರಿಸಲು ಮಹತ್ವದ ಹೆಜ್ಜೆ ಇಡುತ್ತಿದೆ.