ಸೋನಿಯಾ ರವರಿಗೆ ಮೋದಿ ಕರೆಮಾಡಿ ಉತ್ತರ ನೀಡಬಹುದಲ್ಲವೆ ಎಂದ ನಿರೂಪಕರಿಗೆ ಬಿಜೆಪಿ ನಾಯಕನ ಉತ್ತರ ಹೇಗಿತ್ತು ಗೊತ್ತಾ?

ಸೋನಿಯಾ ರವರಿಗೆ ಮೋದಿ ಕರೆಮಾಡಿ ಉತ್ತರ ನೀಡಬಹುದಲ್ಲವೆ ಎಂದ ನಿರೂಪಕರಿಗೆ ಬಿಜೆಪಿ ನಾಯಕನ ಉತ್ತರ ಹೇಗಿತ್ತು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಚೀನಾ ಹಾಗೂ ಭಾರತದ ಗಡಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಒಂದೆಡೆ ಚೀನಾ ದೇಶ ಭಾರತ ತನ್ನ ಗ್ಯಾಲ್ವನ್ ಕಣಿವೆಯನ್ನು ಅತಿಕ್ರಮಣ ಮಾಡಿಕೊಂಡಿದೆ ಎಂದು ವಾದ ಮಂಡಿಸುತ್ತಿದ್ದರೇ, ಭಾರತ ಗ್ಯಾಲ್ವನ್ ಕಣಿವೆ ತನ್ನದು ಇಲ್ಲಿನ ಸೇತುವೆ ಹಾಗೂ ರಸ್ತೆ ಸೇರಿದಂತೆ ಇನ್ನಿತರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಭಾರತ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟ ಚಿತ್ರಣ ನೀಡುತ್ತಿದೆ.

ಆದರೆ ಈ ಎರಡು ದೇಶಗಳ ಹೇಳಿಕೆಗಳ ನಡುವೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ರವರು ಭಾರತೀಯ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ, ಇದರ ಕುರಿತು ಪ್ರಧಾನಿ ಸ್ಪಷ್ಟತೆ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ. ಸೋನಿಯಾ ಗಾಂಧಿ ರವರು ಕೂಡ ಕೇಂದ್ರ ಸ್ಪಷ್ಟನೆ ನೀಡಬೇಕು ಎಂದು ವಾದ ಮಂಡಿಸಿದ್ದಾರೆ. ಇದೇ ರೀತಿಯ ಚರ್ಚೆ ಸಂದರ್ಭ ಬಿಜೆಪಿ ವಕ್ತಾರ ಸಂಬಿತ್ ಪತ್ರಾ ರವರು, ಕಾಂಗ್ರೆಸ್ ನಾಯಕರನ್ನು ಹಾಗೂ ಇಂಡಿಯಾ ಟುಡೇ ಹಿರಿಯ ನಿರೂಪಕ ರಾಜ್‌ದೀಪ್ ಸರ್ದೇಸಾಯಿ ಅವರನ್ನು ಒಮ್ಮೆಲೇ ಲೈವ್ ಕಾರ್ಯ ಕ್ರಮದಲ್ಲಿ ತರಾಟೆಗೆ ತೆಗೆದುಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ನಡೆದದ್ದೇನು? ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಉತ್ತರ ನೀಡಿದ್ದು ಹೇಗೆ? ಎಂಬುದರ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.

ಇಂಡಿಯಾ ಟುಡೆ ಚಾನೆಲ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ನಡೆಯುತ್ತಿರುವ ಕುರಿತು ಚರ್ಚೆ ನಡೆಯುತಿತ್ತು. ಈ ಚರ್ಚೆಯನ್ನು ಇಂಡಿಯಾ ಟುಡೇ ಹಿರಿಯ ನಿರೂಪಕ ರಾಜ್‌ದೀಪ್ ಸರ್ದೇಸಾಯಿ ನಡೆಸಿಕೊಡುತ್ತಿದ್ದರು. ಬಿಜೆಪಿ ಪಕ್ಷದ ವತಿಯಿಂದ ಸಂಬಿತ್ ಪತ್ರಾ ರವರು ಭಾಗವಹಿಸಿದ್ದರು. ಇನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಪವನ್ ಖೇಡಾ ರವರು ಭಾಗವಹಿಸಿದ್ದರು. ಇದೇ ಸಮಯದಲ್ಲಿ ಕಾಂಗ್ರೆಸ್ ಟೀಕೆಗಳ ಪರ ಧ್ವನಿ ಎತ್ತಿದ ರಾಜದೀಪ್ ಸರ್ದೇಸಾಯಿ ರವರು ನರೇಂದ್ರ ಮೋದಿ ರವರು ಇಷ್ಟೆಲ್ಲ ಟೀಕೆ ಮಾಡುತ್ತಿರುವುದನ್ನು ನೋಡಿದರೂ ಕೂಡ ಯಾಕೆ ನೇರವಾಗಿ ಸೋನಿಯಾ ಗಾಂಧಿ ರವರಿಗೆ ಕರೆ ಮಾಡಿ ಸೋನಿಯಾ ರವರ ಅನುಮಾನಗಳಿಗೆ ಸ್ಪಷ್ಟತೆ ನೀಡುವುದಿಲ್ಲ, ಆರೋಪಗಳು ಸುಳ್ಳಾದರೇ ಯಾಕೆ ಕರೆಯ ಮೂಲಕ ಸ್ಪಷ್ಟತೆ ನೆಡಬಾರದು ಎಂದು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ರವರನ್ನು ಪ್ರಶ್ನೆ ಮಾಡಿದರು.

ಈ ಪ್ರಶ್ನೆ ಕೇಳಿದ ಕೂಡಲೇ, ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಕೋಪಗೊಂಡರು. ಸೋನಿಯಾ ಗಾಂಧಿ ಯಾರು? ಅವರಿಗೆ ಯಾಕೆ ನರೇಂದ್ರ ಮೋದಿ ರವರು ನೇರವಾಗಿ ಕರೆ ಮಾಡಬೇಕು? ಸರ್ವ ಪಕ್ಷಗಳ ಸಭೆಯಲ್ಲಿ ಅವರು ನೀರು ಕುರಿಯಲು, ಚಹಾ ಕುಡಿಯಲು ಬಂದಿದ್ದರೇ? ಅವರೇನು ಭಾರತದ ಕ್ವೀನ್ ವಿಕ್ಟೋರಿಯಾ ರಾಣಿಯವರಂತೆಯೇ? ಎಂದು ಗರಂ ಆಗಿ ಉತ್ತರ ನೀಡಿದರು.

ಇದನ್ನು ಕಂಡ ನಿರೂಪಕರು ಅಲ್ಲಾ, ಅಲ್ಲಾ, ಪ್ರಧಾನಿ ಮೋದಿ ಯಾಕೆ ಎಲ್ಲಾ ವಿಪಕ್ಷ ನಾಯಕರಿಗೆ ಕರೆ ಮಾಡಿ ಸಂಪೂರ್ಣ ಚಿತ್ರಣ ನೀಡಬಾರದು ಎಂದರು. ಇದಕ್ಕೆ ಉತ್ತರಿಸಿದ ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಅವರು, ಅವರು ಯಾಕೆ ಪ್ರತಿಯೊಬ್ಬರಿಗೂ ಕರೆ ಮಾಡಬೇಕು? ಸರ್ವ ಪಕ್ಷಗಳ ಸಭೆ ಕರೆದಿದ್ದು ಅದೇ ಕಾರಣಕ್ಕೆ, ಮೊದಲು ಕ್ವೀನ್ ವಿಕ್ಟೋರಿಯಾ ನಂತರ ರಾಜ ಕುಮಾರ ರಾಹುಲ್ ರವರಿಗೆ ಕರೆ ಮಾಡಬೇಕೆ? ಅವರು ದೇಶದ ಪ್ರಧಾನಿ ಸರ್. ಯಾವುದೇ ಚಾನೆಲ್ ನ ಸುದ್ದಿ ನಿರೂಪಕರಲ್ಲ. ಅವರು ಯಾವುದೇ ಸುದ್ದಿ ವಾಹಿನಿಯ ಅತಿಥಿ ಸಂಯೋಜಕರಲ್ಲ, ಅವರು ಎಲ್ಲರನ್ನು ಕರೆದು ನೀವು ಬನ್ನಿ ನೀವು ಬನ್ನಿ ೬ ಗಂಟೆಗೆ ಡಿಬೇಟ್ ಇದೇ ಎಂದು ಕರೆಯಬೇಕೆ? ಎಂದು ಉತ್ತರಿಸಿದರು. ಈ ವಿಡಿಯೋ ಇದೀಗ ಎಲ್ಲೆಡೆ ಬಾರಿ ವೈರಲ್ ಆಗುತ್ತಿದೆ.