ಚೀನಾಗೆ ಬಾರಿ ಮುಖಭಂಗ ! ವರ್ಷಗಳ ಪ್ರಯತ್ನಕ್ಕೆ ಎಳ್ಳು ನೀರು ಬಿಟ್ಟು ಭಾರತದ ಜೊತೆ ಕೈ ಜೋಡಿಸಿ ರಷ್ಯಾ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ರಷ್ಯಾ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲಿಂದಲೂ ಭಾರತ ದೇಶದ ಆಪ್ತಮಿತ್ರ ಎಂದು ಗುರುತಿಸಿಕೊಂಡಿದೆ. ಮೊದಲಿಂದಲೂ ಪ್ರತಿ ಹೆಜ್ಜೆಯಲ್ಲಿಯೂ ಕರೆಯದೇ ಇದ್ದರೂ ಭಾರತದ ಜೊತೆ ಕೈ ಜೋಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೀಗಿರುವಾಗ ಇದೀಗ ಮತ್ತೊಮ್ಮೆ ಭಾರತದ ಪರವಾಗಿ ಧ್ವನಿ ಎತ್ತುವ ಮೂಲಕ ಚೀನಾ ದೇಶಕ್ಕೆ ಶಾಕ್ ನೀಡಿದೆ. ಈ ಬೆಂಬಲ ಹಳೆಯದಾದರೂ ಕೂಡ ಚೀನಾ ದೇಶಕ್ಕೆ ಇದು ಇಂದಿನ ಪರಿಸ್ಥಿತಿಯಲ್ಲಿ ಶಾಕ್ ನೀಡಿರುವುದು ಸುಳ್ಳಲ್ಲ.

ಅಷ್ಟಕ್ಕೂ ವಿಷಯದ ಮೂಲವೇನು??

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶ ಇತ್ತೀಚಿಗೆ ರಷ್ಯಾ ದೇಶದ ಜೊತೆ ಸ್ನೇಹ ಸಂಬಂಧವನ್ನು ಹೆಚ್ಚು ಮಾಡಿತ್ತು. ಹಲವಾರು ಒಪ್ಪಂದಗಳು, ಮಾತುಕತೆಗಳು ನಡೆಸಿದ್ದ ಚೀನಾ ದೇಶವು ರಷ್ಯಾ ದೇಶದ ಜೊತೆ ಸ್ನೇಹ ಸಂಬಂಧವನ್ನು ವೃದ್ಧಿ ಮಾಡಿಕೊಳ್ಳುತಿತ್ತು.

ಒಂದೆಡೆ ಭಾರತವನ್ನು ಅಮೇರಿಕ ಬೆಂಬಲಿತ ರಾಷ್ಟ್ರ ಎಂದು ಬಿಂಬಿಸಿ ಭಾರತದ ಜೊತೆ ರಷ್ಯಾ ಸಂಬಂಧವನ್ನು ಕೊನೆಗೊಳಿಸುವ ಆಲೋಚನೆಗಳು ಕೂಡ ನಡೆದಿದ್ದವು. ಇದಕ್ಕೆ ಪ್ರಮುಖ ಕಾರಣವೇನೆಂದರೇ, ಮೊದಲನೆಯದಾಗಿ ಯುದ್ಧ, ಎರಡನೆಯಾದಾಗಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ.

ಹೌದು ಸ್ನೇಹಿತರೇ, ಭಾರತ ದೇಶಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಬೇಕು ಎಂಬುದು ವಿಶ್ವದ ಹಲವಾರು ದೇಶಗಳ ಕೂಗು. ಇನ್ನು ಚೀನಾ ದೇಶವನ್ನು ಹೊರತುಪಡಿಸಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳೆಲ್ಲವೂ ಈ ಆಲೋಚನೆಗೆ ಬೆಂಬಲ ನೀಡುತ್ತವೆ. ಇದರಿಂದ ಚೀನಾ ದೇಶಕ್ಕೆ ದಿನೇ ದಿನೇ ಒತ್ತಡಗಳು ಹೆಚ್ಚಾಗುತ್ತಿದ್ದವು.

ಅದೇ ಕಾರಣಕ್ಕೆ ರಷ್ಯಾ ದೇಶದ ಜೊತೆ ಮಹತ್ವದ ಸ್ನೇಹ ಸಂಬಂಧ ಬೆಳೆಸಿ, ಭಾರತದ ಪರ ನೀಡುವ ಬೆಂಬಲವನ್ನು ವಾಪಸ್ಸು ತೆಗೆದುಕೊಳ್ಳುವಂತೆ ಮಾಡುವುದು ಚೀನಾದ ಯೋಜನೆಯಾಗಿತ್ತು. ಆದರೆ ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಇಂದು ರಷ್ಯಾ ದೇಶ ಮತ್ತೊಮ್ಮೆ ಭಾರತ ದೇಶಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಬೇಕು ಎಂದು ಪುನರುಚ್ಚರಿಸಿದೆ. ಈ ಮೂಲಕ ಚೀನಾ ದೇಶದ ಹಲವಾರು ವರ್ಷಗಳ ಪ್ರಯತ್ನಕ್ಕೆ ಕ್ಯಾರೇ ಎನ್ನದೇ ಇರುವ ಕಾರಣ ಚೀನಾಕ್ಕೆ ಮತ್ತೊಮ್ಮೆ ಮುಖಭಂಗ ಎದುರಾಗಿದೆ.

Post Author: Ravi Yadav