ಅಖಾಡಕ್ಕಿಳಿದು ಆಟ ಆರಂಭಿಸಿದ ಅಮಿತ್ ಶಾ ! ಚೀನಾಗೆ ಬೆವರಿಳಿಸಲು ಮತ್ತೊಂದು ದಾಳ ! ಏನು ಗೊತ್ತಾ?

ಅಖಾಡಕ್ಕಿಳಿದು ಆಟ ಆರಂಭಿಸಿದ ಅಮಿತ್ ಶಾ ! ಚೀನಾಗೆ ಬೆವರಿಳಿಸಲು ಮತ್ತೊಂದು ದಾಳ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಚೀನಾ ದೇಶ ಭಾರತದ ಗಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಂದ ಬಾರಿ ತಲೆ ಕೆಡಿಸಿಕೊಂಡಿದೆ. ಯಾಕೆಂದರೆ ಮೊದಲನೆಯದಾಗಿ ಯುದ್ಧ ನಡೆದಾರಿ ಈ ರಸ್ತೆಗಳಿಂದ ಭಾರತ ಸುಲಭವಾಗಿ ಯುದ್ಧಕ್ಕೆ ಅಗತ್ಯವಾಗಿರುವ ಶಸ್ತ್ರಾಸ್ತ್ರ ಹಾಗೂ ಸಾಮಗ್ರಿಗಳನ್ನು ಅತಿವೇಗ ವಾಗಿ ರವಾನೆ ಮಾಡಬಹುದು, ಸೈನಿಕರು ಕೂಡ ಅಷ್ಟೇ ವೇಗವಾಗಿ ಗಡಿ ತಲುಪಬಹುದು.

ಇನ್ನು ಎರಡನೆಯದಾಗಿ ಗ್ಯಾಲ್ವನ್ ಕಣಿವೆ ಬಹಳ ಎತ್ತರವಿರುವ ಕಾರಣ ಸೈನಿಕರು ಸುಲಭವಾಗಿ ಎಂತಹ ಸವಾಲುಗಳನ್ನು ಎದುರಿಸಬಹದು. ಅದೇ ಕಾರಣಕ್ಕೆ ಇದೀಗ ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಲು ಪ್ರಯತ್ನ ಪಡುತ್ತಿದೆ. ಇದೀಗ ಇದರ ಕುರಿತು ಗಮನ ಹರಿಸಿರುವ ಅಮಿತ್ ಶಾ ರವರು ನಿನ್ನೆ ನಡೆದ ತುರ್ತು ಸಭೆಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಸೈನಿಕರಿಗೆ ಅಗತ್ಯವಾದ ವಸ್ತುಗಳನ್ನು ಪೂರೈಸುವುದರ ಕುರಿತು ಹಾಗೂ ಚೀನಾ ಗಡಿಯಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಗಳನ್ನು ವೇಗಗೊಳಿಸಲು ನಿರ್ಧರಿಸಲಾಗಿದೆ. ಇದೊಂದೇ ರಸ್ತೆಯಲ್ಲ ಎಲ್ಲಾ 73 ರಸ್ತೆಗಳನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಲು ಆದೇಶ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ, ಭಾರತ-ಚೀನಾ ಗಡಿಯಲ್ಲಿ ಒಟ್ಟು 73 ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಈ ರಸ್ತೆಗಳ ನಿರ್ಮಾಣ ಕಾರ್ಯವನ್ನು ಎಲ್ಲಾ ಏಜೆನ್ಸಿಗಳ ಸಹಕಾರದೊಂದಿಗೆ ಶೀಘ್ರದಲ್ಲೇ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಗಡಿ ರಸ್ತೆ ಸಂಘಟನೆಯ ಅಧಿಕಾರಿಗಳು ಅಂದರೆ ಬಿಆರ್‌ಒ, ಐಟಿಬಿಪಿ, ಸಿಪಿಡಬ್ಲ್ಯುಡಿ ಮತ್ತು ಗೃಹ ಸಚಿವಾಲಯಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಈ ರಸ್ತೆಗಳಲ್ಲಿ ಕನಿಷ್ಠ 32 ರಸ್ತೆಗಳ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡಿದೆ ಎಂದು ಸರ್ಕಾರ ಹೇಳುತ್ತದೆ. ಇದಕ್ಕಾಗಿ ವಿವರವಾದ ಯೋಜನೆಯನ್ನು ಸಹ ಸಿದ್ಧಪಡಿಸಲಾಗಿದೆ.