ಬಾಯ್ಕಾಟ್ ಚೀನಾ ಅಭಿಯಾನಕ್ಕೆ ‘ಮಹಾ’ ಬೆಂಬಲ ! ಸಾಧ್ಯವೇ ಇಲ್ಲ ಎನ್ನುತ್ತಿದ್ದವರು ಈಗ ಏನಂತೀರಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ಹಾಗೂ ಭಾರತದ ಗಡಿಯಲ್ಲಿ ನಡೆದ ಘಟನೆಯಿಂದ ಇದೀಗ ದೇಶದ ಎಲ್ಲೆಡೆ ಬಹುತೇಕ ಜನರ ಬಾಯಲ್ಲಿ ಚೀನಾ ವಸ್ತುಗಳನ್ನು ಹಾಗೂ ಚೀನಾದ ಕಂಪನಿಗಳ ಜೊತೆ ವ್ಯವಹಾರವನ್ನು ನಿಲ್ಲಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಕೆಲವೊಂದು ಅತ್ಯಗತ್ಯ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲು ಸದ್ಯದ ಮಟ್ಟಿಗೆ ಸಾಧ್ಯವಿಲ್ಲದೇ ಇದ್ದರೂ, ಈಗ ಸಾಧ್ಯವಾದಷ್ಟು ನಿಲ್ಲಿಸಿ, ದಿನೇ ದಿನೇ ಇಲ್ಲಿಯೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತ ಸಂಪೂರ್ಣ ಆಮದು ನಿಲ್ಲಿಸೋಣ ಎಂಬ ಕೂಗು ಕೇಳಿ ಬರುತ್ತಿದೆ.

ಈ ಅಭಿಯಾನವನ್ನು ಕಂಡ ಕೆಲವರು ನೆಟ್ಟಿಗರು ಹಲವಾರು ಜನ ನಮ್ಮನ್ನು ಟೀಕೆ ಮಾಡಿದ್ದರು. ಇನ್ನು ಕೆಲವರು ಒನ್ ಪ್ಲಸ್ ಕಂಪನಿಯ ಮೊಬೈಲ್ ಗಳು ಕ್ಷಣ ಮಾತ್ರದಲ್ಲಿ ಭಾರತದಲ್ಲಿ ಸೇಲ್ ಆಗಿದ್ದ ಸುದ್ದಿಯ ಸ್ಕ್ರೀನ್ಶಾಟ್ ಗಳನ್ನು ಕಳುಹಿಸಿ ನಮ್ಮನ್ನು ಕಿಚಾಯಿಸಿದ್ದರು. ಇಷ್ಟೇ ಅಲ್ಲದೇ ಮಹಾರಾಷ್ಟ್ರದ ಶಿವಸೇನಾ ಪಕ್ಷವು 5000 ಕೋಟಿ ಪ್ರಾಜೆಕ್ಟನ್ನು ಚೀನಾ ಕಂಪನಿಗಳಿಗೆ ನೀಡಿದೆ ಎಂದು ನೀವು ಕೈ ಜೋಡಿಸಿರುವ ಬಾಯ್ಕಾಟ್ ಚೀನಾ ಅಭಿಯಾನ ಯಶಸ್ವಿಯಾಗುವುದಿಲ್ಲ ಎಂದಿದ್ದರು.

ಆದರೆ ಇದೀಗ ಕೇಂದ್ರ ಸರ್ಕಾರ ಮಹಾರಾಷ್ಟ್ರ ಅಖಾಡಕ್ಕಿಳಿದು ಮಹಾರಾಷ್ಟ್ರ ರಾಜ್ಯದ ಕೈಗಾರಿಕಾ ಸಚಿವರಾಗಿರುವ ಸುಭಾಷ್ ದೇಸಾಯಿರವರ ಜೊತೆ ಮಾತುಕತೆ ನಡೆಸಿ ಚೀನಾ ದೇಶಕ್ಕೆ ನೀಡಿರುವ 5000 ಕೋಟಿ ಮೌಲ್ಯದ ಮೂರು ಒಪ್ಪಂದಗಳನ್ನು ಪಕ್ಕಕ್ಕೆ ಸರಿಸುವಂತೆ ಮನವೊಲಿಸಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ ಬಳಿಕ ಉದ್ಧವ್ ಠಾಕ್ರೆ ರವರ ಬಳಿ ಚರ್ಚೆ ಮಾಡಿ ದೊಡ್ಡ ಒಪ್ಪಂದಗಳನ್ನು ನಿಲ್ಲಿಸಲಾಗಿದೆ ಎಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಂದ ಹಾಗೇ ಇದು ಬಾಯ್ಕಾಟ್ ಚೀನಾ ಅಭಿಯಾನದಲ್ಲಿ ಮತ್ತೊಂದು ಪುಟ್ಟ ಹೆಜ್ಜೆ. ಹೌದು, ಐದು ಸಾವಿರ ಕೋಟಿ ಮೌಲ್ಯದ್ದಾಗಿದ್ದರೂ ಇದು ಪುಟ್ಟ ಹೆಜ್ಜೆಯಷ್ಟೇ. ಖಂಡಿತ ಇದೇ ರೀತಿಯ ಪುಟ್ಟ ಪುಟ್ಟ ಹೆಜ್ಜೆಗಳಿಂದ ನಾವು ಅಂದುಕೊಂಡದ್ದನ್ನು ಸಾಧಿಸಬಹುದು ಜೈ ಹಿಂದ್.