ಚೀನಾಗೆ ಮತ್ತೊಂದು ಬಿಗ್ ಶಾಕ್ ನೀಡಿದ ಕೇಂದ್ರ ! ಆನ್ಲೈನ್ ಮಾರುಕಟ್ಟೆ ಕದ ತಟ್ಟಿ ಮತ್ತೊಂದು ಆದೇಶ ಹೊರಡಿಸಿದ ಕೇಂದ್ರ

ಚೀನಾಗೆ ಮತ್ತೊಂದು ಬಿಗ್ ಶಾಕ್ ನೀಡಿದ ಕೇಂದ್ರ ! ಆನ್ಲೈನ್ ಮಾರುಕಟ್ಟೆ ಕದ ತಟ್ಟಿ ಮತ್ತೊಂದು ಆದೇಶ ಹೊರಡಿಸಿದ ಕೇಂದ್ರ

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ನಡೆದ ಘಟನೆಯಿಂದ ದೇಶದ ಎಲ್ಲೆಡೆ ಚೀನಾ ವಸ್ತುಗಳನ್ನು ನಿಷೇಧ ಮಾಡಿ, ಮೊಬೈಲ್ ಆಪ್ಸ್ ಅನ್ನು ತೆಗೆದುಹಾಕಿ ಎಂಬ ಘೋಷಣೆಗಳು ಕೇಳಿ ಬಂದಿವೆ.( ವಿಶೇಷ ಸೂಚನೆ: ಈಗಾಗಲೇ ಕೊಂಡಿರುವ ಯಾವುದೇ ವಸ್ತುಗಳನ್ನು ಬಿಸಾಡಬೇಡಿ. ಇದರಿಂದ ಚೀನಾಗೆ ಯಾವುದೇ ನಷ್ಟವಿಲ್ಲ ಯಾಕೆಂದರೆ ಆ ವಸ್ತುವಿನ ಹಣ ಈಗಾಗಲೇ ಚೀನಾಗೆ ಹರಿದು ಹೋಗಿರುತ್ತದೆ.)

ಈ ಕೂಗಿನ ನಡುವೆ ನಮಗೆಲ್ಲರಿಗೂ ಕಾಡುವ ಪ್ರಶ್ನೆಯೇ ಹೇಗೆ ನಾವು ಈ ವಸ್ತು ಯಾವ ದೇಶದ್ದು ಎಂದು ತಿಳಿಯುವುದು? ಎಷ್ಟೋ ವಸ್ತುಗಳಲ್ಲಿ ಮೂಲ ದೇಶದ ಹೆಸರು ನಮೂದನೆ ಮಾಡಿರುವುದಿಲ್ಲ ಎಂದು. ಇದೀಗ ಇದರ ಕುರಿತು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಹೊಸ ಆದೇಶ ಹೊರಡಿಸಿದೆ. ಅದರಲ್ಲಿಯೂ ಚೀನಾ ಉತ್ಪನ್ನಗಳು ಹೆಚ್ಚು ಹೆಚ್ಚು ಸೇಲ್ ಆಗುವ ಆನ್ಲೈನ್ ಮಾರಾಟ ತಾಣಗಳ ಮೇಲೆ ಕೇಂದ್ರ ಕಣ್ಣಿಟ್ಟಿದೆ.

ಹೌದು ಸ್ನೇಹಿತರೇ, ಇದೀಹ ಹೊಸ ಆದೇಶ ಹೊರಡಿಸಿರುವ ಕೇಂದ್ರ, ಯಾವುದೇ ಆನ್ಲೈನ್ ಮಾರಾಟ ಮಳಿಗೆಯಲ್ಲಿ ದೊರೆಯುವ ವಸ್ತುಗಳ ಮಾಹಿತಿ ಸ್ಥಳದಲ್ಲಿ ಈ ವಸ್ತು ಯಾವ ದೇಶದಲ್ಲಿ ತಯಾರಾಗಿದೆ ಹಾಗೂ ಈ ಕಂಪನಿಯ ಮೂಲ ದೇಶ ಯಾವುದು ಎಂದು ತಿಳಿಸಿರಬೇಕು. ಅಷ್ಟೇ ಅಲ್ಲದೇ ಪ್ರತಿಯೊಂದು ಮಾರಾಟ ಮಳಿಗೆಗಳಲ್ಲಿ “MADE IN INDIA” ಎಂಬ ಫಿಲ್ಟರ್ ತೋರಿಸಿ, ಭಾರತದಲ್ಲಿ ತಯಾರಾದ ವಸ್ತುಗಳು ಮಾತ್ರ ತೋರಿಸಬೇಕು ಎಂಬ ಆದೇಶ ಹೊರಡಿಸಿದೆ. ಒಂದು ವೇಳೆ ಆನ್ಲೈನ್ ಮಾರಾಟಗಾರು ಮೂಲ ದೇಶದ ಮಾಹಿತಿ ನೀಡದೇ ಇದ್ದಲ್ಲಿ ಮಾರಾಟ ಮಾಡುವ ಪರವಾನಗಿ ಕಳೆದುಕೊಳ್ಳುತ್ತಾರೆ.