ಗಡಿಯಲ್ಲಿ ಚೀನಾಗೆ ಕಡಿವಾಣ ಹಾಕಲು ತುರ್ತಾಗಿ ಬರಲಿವೆ ಬ್ರಹ್ಮಾಸ್ತ್ರಗಳು ! ಮಹತ್ವದ ಹೆಜ್ಜೆ ಇಟ್ಟ ಸೇನೆ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ಸೇನೆಯು ಕೇಂದ್ರ ಸರ್ಕಾರ ತುರ್ತಾಗಿ ನೀಡಿರುವ ಹಣವನ್ನು ಸದ್ಬಳಕೆ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ಒಂದೆಡೆ ರಷ್ಯಾ ದೇಶದಿಂದ ಕೇಂದ್ರ ಸರ್ಕಾರ ಯುದ್ಧ ವಿಮಾನಗಳನ್ನು ತುರ್ತಾಗಿ ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿದೆ. ಇದಕ್ಕೆ ರಷ್ಯಾ ದೇಶ ಕೂಡ ಒಪ್ಪಿಕೊಂಡು ಸಾಧ್ಯವಾದಷ್ಟು ಬೇಗ ಯುದ್ಧ ವಿಮಾನಗಳನ್ನು ಕಳುಹಿಸಿಕೊಡುವುದಾಗಿ ಹೇಳಿದೆ.

ಇದರ ಬೆನ್ನಲೇ ಯುದ್ಧಕ್ಕೆ ಅತ್ಯಗತ್ಯ ವಾಗಿರುವ ಕ್ಷಿಪಣಿಗಳನ್ನು ಭಾರತೀಯ ಸೇನೆ ಖರೀದಿ ಮಾಡಲು ಮುಂದಾಗಿದೆ. ಭಾರತದ ಬಳಿ ಸಾಕಷ್ಟು ಕ್ಷಿಪಣಿಗಳ ದಾಸ್ತಾನು ಇದ್ದರೂ ಕೂಡ 50 ಕಿಲೋ ಮೀಟರ್ ವ್ಯಾಪಿಯಲ್ಲಿರುವ ಗುರಿಗಳನ್ನು ತಲುಪಬಲ್ಲ, ಹೆಚ್ಚಿನ ಎಕ್ಸ್‌ಕ್ಯಾಲಿಬರ್ ನಿಖರ-ನಿರ್ದೇಶಿತ ಕ್ಷಿಪಣಿಗಳನ್ನು ಖರೀದಿ ಮಾಡಲು ಸೇನೆ ನಿರ್ಧಾರ ಮಾಡಿದೆ.

ಈ ಕ್ಷಿಪಣಿಗಳನ್ನು ಸುಲಭವಾಗಿ ಎತ್ತರದ ಪ್ರದೇಶಗಳಲ್ಲಿ ಬಳಸಬಹುದಾಗಿದೆ. ಅದೇ ಕಾರಣಕ್ಕೆ ಭಾರತೀಯ ಸೇನೆಯು ದಾಸ್ತಾನನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಆಸಕ್ತಿ ತೋರಿದೆ ಎನ್ನಲಾಗಿದೆ. ಚೀನಾ ದೇಶದ ಸೇನೆಗೆ ಪರ್ವತದಲ್ಲಿ ಯುದ್ಧ ಮಾಡುವ ತರಬೇತಿ ಅಥವಾ ಅನುಭವ ಇಲ್ಲದ ಕಾರಣ ಭಾರತ ಒಂದು ವೇಳೆ ಯುದ್ಧ ನಡೆದರೇ ಪರ್ವತಗಳ ಮೂಲಕ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಭಾರತೀಯ ಸೇನೆಯು ಸರ್ವ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ.