ಈ ವಾರದ ದ್ವಾದಶ ರಾಶಿಗಳ ಫಲಾಫಲ- ಈ ರಾಶಿಗಳಿಗೆ ಹಣದ ಹರಿವು ಹೆಚ್ಚಳ, ಹೆಚ್ಚಿನ ಲಾಭ ! ಯಾವ್ಯಾವು ಗೊತ್ತಾ?

ಈ ವಾರದ ದ್ವಾದಶ ರಾಶಿಗಳ ಫಲಾಫಲ- ಈ ರಾಶಿಗಳಿಗೆ ಹಣದ ಹರಿವು ಹೆಚ್ಚಳ, ಹೆಚ್ಚಿನ ಲಾಭ ! ಯಾವ್ಯಾವು ಗೊತ್ತಾ?

0

ನಮಸ್ಕಾರ ಸ್ನೇಹಿತರೇ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಗ್ರಹಣದ ಪರಿಣಾಮವು ಮಾನವ ಸಮಾಜದ ಮೇಲೆ ದೀರ್ಘಕಾಲ ಉಳಿಯುತ್ತದೆ. ಜೂನ್ 21 ರ ಸೂರ್ಯಗ್ರಹಣ ಕೆಲವು ಜನರಿಗೆ ಒಳ್ಳೆಯ ಸಮಯವನ್ನು, ಕೆಲವು ಜನರಿಗೆ ಮಿಶ್ರ ಹಾಗೂ ಕಠಿಣ ಸಮಯವನ್ನು ನೀಡಲಿದೆ. ಕೆಲವೊಂದು ರಾಶಿಗಳಿಗೆ ಸಮಯ ಬಹಳ ಉತ್ತಮವಾಗಿದ್ದು, ಮೀನಾ ರಾಶಿಯ ಜನರ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರದ ದ್ವಾದಶ ರಾಶಿಗಳ ಫಲಾಫಲಗಳು ಈ ಕೆಳಗಿನಂತೆ ಇವೆ.

ಮೇಷ: 22-June-2020 to 28-June-2020

ಈ ಸಮಯದಲ್ಲಿ ನಿಮ್ಮ ಕೆಲಸದ ಸಾಮರ್ಥ್ಯವು ಬಹಳ ಹೆಚ್ಚಾಗಿರುತ್ತದೆ, ಇದರಿಂದಾಗಿ ನಿಮ್ಮ ಪ್ರತಿಯೊಂದು ಕೆಲಸಗಳು ಬಹಳ ಸುಗಮವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ. ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ನಿಮ್ಮ ಆರೋಗ್ಯದ ಕಾಳಜಿ ಕೂಡ ಮರೆಯಬೇಡಿ. ಆರೋಗ್ಯಕರ ಆಹಾರ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಆದ್ದರಿಂದ ಸೇವಿಸುವ ಆಹಾರದ ಕಡೆ ಗಮನವಿರಲಿ.

ವೃಷಭ: 22-June-2020 to 28-June-2020

ಈ ವಾರ ವೃಷಭ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳು ಎದುರಾಗಬಹುದು, ಚಿಕ್ಕಪುಟ್ಟ ವಿಷಯಗಳಿಗೂ ಕುಟುಂಬ ಸದಸ್ಯರ ನಡುವೆ ವಾದ ವಿವಾದಗಳು ಹೆಚ್ಚಾಗುತ್ತವೆ. ಇದರಿಂದ ನಿಮ್ಮ ಮೇಲೆ ಕೊಂಚ ಒತ್ತಡ ಹೆಚ್ಚಾಗುತ್ತದೆ. ನಿಮ್ಮ ಖರ್ಚು ವೆಚ್ಚಗಳು ಕೂಡ ಈ ವಾರ ಹೆಚ್ಚಾಗುತ್ತವೆ, ಇದರ ಕುರಿತು ಗಮನ ಹರಿಸದೆ ಹೋದರೆ ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬಹುದು. ಸಾಧ್ಯವಾದಷ್ಟು ಹಣವನ್ನು ಭವಿಷ್ಯಕ್ಕಾಗಿ ಸಂಗ್ರಹಿಸಲು ಪ್ರಯತ್ನಪಡಿ. ಇವರ ನಿಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ, ಆರೋಗ್ಯದ ದೃಷ್ಟಿಯಿಂದ ಈ ಸಮಯ ನಿಮಗೆ ಬಹಳ ಉತ್ತಮವಾಗಿದೆ.

ಮಿಥುನ: 22-June-2020 to 28-June-2020

ಈ ವಾರ ನಿಮ್ಮ ಗೌರವ ವ್ಯಕ್ತಿತ್ವ ಹೊಳೆಯುತ್ತದೆ. ಇತರರು ನಿಮ್ಮನ್ನು ನೋಡಿ ನಿಮ್ಮ ಜೊತೆ ಸ್ನೇಹ ಬೆಳೆಸಿಕೊಳ್ಳಲು ಅಥವಾ ನಿಮ್ಮಂತೆ ಆಗಬೇಕು ಎನ್ನುವಷ್ಟು ಮಟ್ಟಿಗೆ ನಿಮ್ಮ ವ್ಯಕ್ತಿತ್ವ ಈ ವಾರ ಇರಲಿದೆ. ನಿಮ್ಮ ಜನಪ್ರಿಯತೆಯು ಕೂಡ ಹೆಚ್ಚಾಗುತ್ತದೆ ಹಾಗೂ ಹೊಸ ಜನರನ್ನು ಭೇಟಿ ಮಾಡುವ ಅವಕಾಶ ಪಡೆಯುತ್ತೀರಿ. ಆರ್ಥಿಕವಾಗಿ ಈ ವಾರ ನಿಮಗೆ ಬಹಳ ಶುಭಕರವಾಗಲಿದೆ. ಈ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಸಾಧ್ಯವಾದಷ್ಟು ಹತೋಟಿಯಲ್ಲಿ ಇಟ್ಟುಕೊಳ್ಳಿ, ಇಲ್ಲವಾದರೆ ಇದು ನೀವು ಗಳಿಸಿದ ಗೌರವಕ್ಕೆ ಧಕ್ಕೆ ತರಬಹುದು.

ಕರ್ಕಾಟಕ: 22-June-2020 to 28-June-2020

ಈ ವಾರ ನಿಮಗೆ ಖರ್ಚುಗಳು ಹೆಚ್ಚಾಗುವ ಸಂಭವವಿದೆ, ಸಾಧ್ಯವಾದಷ್ಟು ಕಡಿಮೆ ಹಣವನ್ನು ಖರ್ಚು ಮಾಡಿ. ಮನೋರಂಜನಾ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡುತ್ತೀರಿ, ಹಣದ ಕೊರತೆಯಿಂದಾಗಿ ನಿಮ್ಮಲ್ಲಿನ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯ ಸ್ವಲ್ಪ ಪ್ರತಿಕೂಲವಾಗಿದೆ. ವ್ಯಾಪಾರಿಗಳು ವಿದೇಶಿ ಮೂಲಗಳಿಂದ ಲಾಭ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ, ಇದರಿಂದ ನಿಮ್ಮ ಕೌಟುಂಬಿಕ ಆರ್ಥಿಕ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳು ಸುಧಾರಿಸುತ್ತವೆ.

ಸಿಂಹ: 22-June-2020 to 28-June-2020

ಈ ವಾರ ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಸಂಪೂರ್ಣ ಬೆಂಬಲ ನೀಡುತ್ತಾರೆ. ಇದರಿಂದ ನೀವು ನಿಮ್ಮ ಸ್ಥಾನವನ್ನು ಹಾಗೂ ಗೌರವವನ್ನು ಹೆಚ್ಚು ಮಾಡಿಕೊಳ್ಳುತ್ತೀರಿ. ನೀವು ಅಂದುಕೊಂಡರೆ ಈ ವಾರ ಎಲ್ಲಾ ಕೆಲಸಗಳನ್ನು ಬಹಳ ಸುಲಭವಾಗಿ ಪೂರ್ಣಗೊಳಿಸಬಹುದು. ನಿಮ್ಮ ಕೆಲಸ ಸಾಮರ್ಥ್ಯ ಕಂಡ ಮೇಲಿನ ಅಧಿಕಾರಿಗಳು ಮತ್ತಷ್ಟು ಕೆಲಸ ಹಾಗೂ ಜವಾಬ್ದಾರಿಯನ್ನು ನೀಡುತ್ತಾರೆ. ಅದ್ಯಾಗೂ ನಿಮ್ಮ ಜೀವನದ ಗುರಿಯತ್ತ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಸ್ವಲ್ಪ ನಿರ್ಬಂಧ ಅನುಭವಿಸುವ ಸಾಧ್ಯತೆಗಳಿವೆ. ಇದರಿಂದ ಗುರಿ ತಲುಪುತ್ತೇನೆ ಇಲ್ಲವೋ ಎಂಬ ಆಲೋಚನೆ ಮನದಲ್ಲಿ ಮೂಡುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಬಾರಿ ನಿಮಗೆ ಸಾಮಾನ್ಯವಾಗಿದ್ದು ಕೊಂಚ ಎಚ್ಚರಿಕೆಯಿಂದ ಇರಿ.

ಕನ್ಯಾ: 22-June-2020 to 28-June-2020

ಈ ವಾರ ನಿಮಗೆ ಕೆಲಸದ ನಿಮಿತ್ತ ಬಹಳ ಒಳ್ಳೆಯ ಕ್ಷಣಗಳನ್ನು ನೀವು ಕಾಣಬಹುದು. ಹಲವಾರು ಅಪೂರ್ಣ ಕೆಲಸವನ್ನು ನೀವು ಮಾಡಿ ಮುಗಿಸುತ್ತೀರಿ. ನಿಮ್ಮ ಪರಿಶ್ರಮವನ್ನು ಕಂಡ ನಿಮ್ಮ ಸಹೋದ್ಯೋಗಿಗಳು ಹಾಗೂ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮನ್ನು ತುಂಬಾ ಮೆಚ್ಚಿಕೊಳ್ಳುತ್ತಾರೆ. ಈ ವಾರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಈ ಸಮಯದಲ್ಲಿ ನಿಮ್ಮ ಆಲೋಚನೆಗಳು ಮತ್ತು ಕಲೆಯನ್ನು ಪ್ರದರ್ಶಿಸುವ ಮೂಲಕ ನೀವು ಲಾಭ ಗಳಿಸುವ ಸಾಧ್ಯತೆಗಳಿವೆ. ಹಣಕಾಸಿನ ದೃಷ್ಟಿಯಿಂದ ಈ ವಾರ ಬಹಳ ಉತ್ತಮವಾಗಿದೆ. ಕೌಟುಂಬಿಕವಾಗಿ ವಾತಾವರಣ ಉತ್ತಮವಾಗಿರಲಿದೆ.

ತುಲಾ: 22-June-2020 to 28-June-2020

ನಿಮ್ಮ ಕೆಲಸದ ಸಾಮರ್ಥ್ಯವು ಹೆಚ್ಚಾಗುತ್ತದೆ ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಈ ಸಮಯದಲ್ಲಿ ವ್ಯಾಪಾರಿಗಳು ಹೂಡಿಕೆ ಮಾಡಲು ಅನೇಕ ಅವಕಾಶವನ್ನು ಪಡೆಯುತ್ತಾರೆ ಹಾಗೂ ಈ ಹೂಡಿಕೆಗಳು ಲಾಭ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಹೂಡಿಕೆ ಮಾಡುವ ಮುನ್ನ ಸಂಪೂರ್ಣವಾಗಿ ತಿಳಿದು ಕೊಂಡು ಹೂಡಿಕೆ ಮಾಡಿ. ಈ ವಾರ ಅದೃಷ್ಟ ನಿಮ್ಮ ಜೊತೆ ಇರುವ ಕಾರಣ ಪ್ರತಿ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಕಾರ್ಯ ನಿರ್ವಹಿಸುತ್ತೀರಿ. ನಿಮ್ಮ ಕೆಲಸಗಳ ನಿಮಿತ್ತ ಕೊಂಚ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯದ ಕುರಿತು ಗಮನ ಹರಿಸಿ.

ವೃಶ್ಚಿಕ: 22-June-2020 to 28-June-2020

ಪತಿ ಅಥವಾ ಪತ್ನಿ ಯೊಂದಿಗೆ ಹೆಚ್ಚಿನ ಸಮಸ್ಯೆಗಳು ಕಂಡು ಬರುತ್ತವೆ. ಪ್ರತಿಕೂಲ ಫಲಗಳನ್ನು ಪಡೆಯುತ್ತೀರಿ. ಸಣ್ಣ ಸಣ್ಣ ವಿಷಯಗಳಿಗೂ ವಾದ ವಿವಾದಗಳು ಕೇಳಿ ಬರುತ್ತವೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲ ನಿಮಗೆ ಇರುವುದಿಲ್ಲ. ಆದ ಕಾರಣದಿಂದ ಕೆಲಸ ಪೂರ್ಣಗೊಳಿಸಲು ಕೊಂಚ ಕಷ್ಟವಾಗಬಹುದು. ಆರ್ಥಿಕವಾಗಿ ಈ ಸಮಯ ನಿಮಗೆ ಸಂಪೂರ್ಣ ಲಾಭದಾಯಕವಾಗಿಲ್ಲ. ಈ ಸಮಯದಲ್ಲಿ ನೀವು ಸಂಯಮವನ್ನು ಕಾಪಾಡಿ ಕೊಳ್ಳುವ ಮೂಲಕ ಹಲವಾರು ಸಮಸ್ಯೆಗಳಿಂದ ಹೊರ ಬರಬಹುದು.

ಧನಸ್ಸು: 22-June-2020 to 28-June-2020

ಈ ವಾರ ವಿವಾಹಿತರಿಗೆ ಸಮಯ ಪ್ರತಿಕೂಲವಾಗಿರುತ್ತದೆ. ಯಾಕೆಂದರೆ ಈ ಸಮಯದಲ್ಲಿ ನಿಮ್ಮ ಸೋದರ ಸಂಬಂಧಿತರೊಂದಿಗೆ ವಾದ ವಿವಾದಗಳು ಹೆಚ್ಚಾಗಿರುತ್ತವೆ. ಇದರಿಂದ ನಿಮ್ಮ ವೈವಾಹಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇನ್ನು ಸಹ ಭಾಗಿತ್ವದಲ್ಲಿ ವ್ಯಾಪಾರ ಮಾಡಿದರೇ, ಹಣದ ವಿಷಯದ ಬಗ್ಗೆ ಹೆಂಡತಿಯೊಂದಿಗೆ ಜಗಳವಾಡುವ ಸಾಧ್ಯತೆ ಹೆಚ್ಚು. ಹೇಗಾದರೂ ಪರಿಸ್ಥಿತಿಗಳ ಕ್ರಮೇಣ ಬದಲಾವಣೆಯೊಂದಿಗೆ ನೀವು ಒತ್ತಡದಿಂದ ಪರಿಹಾರ ಪಡೆಯುತ್ತೀರಿ.

ಮಕರ: 22-June-2020 to 28-June-2020

ವೃತ್ತಿ ಜೀವನಕ್ಕೆ ಈ ವಾರ ಬಹಳ ಶುಭವಾಗಲಿದೆ. ನಿಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಈ ವಾರ ಕಾರ್ಯ ನಿರ್ವಹಣೆ ಮಾಡುತ್ತೀರಿ. ಇದರಿಂದ ನಿಮ್ಮ ಸ್ಥಾನಮಾನ ಹಾಗೂ ಗೌರವ ಹೆಚ್ಚಾಗುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಕಾಳಜಿವಹಿಸಿ ಈ ವಾರ ನಿಮ್ಮ ಸೃಜನಶೀಲ ಸಾಮರ್ಥ್ಯವು ಹೆಚ್ಚಾಗಿರುತ್ತದೆ, ಇದರಿಂದ ಖಂಡಿತ ನೀವು ಶುಭ ಫಲಿತಾಂಶಗಳನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮಗೆ ಹೊಸ ರೀತಿಯ ಮೂಲಗಳಿಂದ ಹಣ ಹರಿದು ಬರುತ್ತದೆ. ಈ ಹಣವನ್ನು ಭವಿಷ್ಯದ ನಿಧಿಗಾಗಿ ಮೀಸಲಿಡುವುದು ಬಹಳ ಉತ್ತಮ.

ಕುಂಭ: 22-June-2020 to 28-June-2020

ಈ ವಾರ ನಿಮಗೆ ಬಹಳ ಶುಭಕರವಾಗಿದೆ. ಅದೃಷ್ಟ ನಿಮ್ಮ ಜೊತೆ ಇರುವ ಕಾರಣ ಯಾವುದೇ ಕೆಲಸದಲ್ಲಿ ನಿಮಗೆ ಯಶಸ್ಸು ಖಂಡಿತ. ನಿಮ್ಮ ಕಾರ್ಯಗಳು ಪೂರ್ಣ ಗೊಳ್ಳುತ್ತಿದ್ದಂತೆ ನಿಮಗೆ ಲಾಭ ಹರಿದು ಬರುತ್ತದೆ. ನಿಮ್ಮ ಕ್ಷೇತ್ರದಲ್ಲಿನ ಹಿರಿಯ ಅಧಿಕಾರಿಗಳು ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಸಲಹೆಗಳನ್ನು ಪ್ರಶಂಸಿಸುತ್ತಾರೆ. ವಿವಾಹಿತರು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಹಣ ಹೆಚ್ಚು ಖರ್ಚಾಗುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿ ಕೊಳ್ಳುವುದು ಉತ್ತಮ.

ಮೀನ: 22-June-2020 to 28-June-2020

ಜೂನ್ ತಿಂಗಳ ಈ ವಾರದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಏಕೆಂದರೆ ಗ್ರಹಗಳ ಸ್ಥಾನಮಾನ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ನಿಮ್ಮ ಆರ್ಥಿಕ ಮತ್ತು ವೃತ್ತಿ ಜೀವನದ ಮೇಲೆ ಕೂಡ ಪರಿಣಾಮ ಬೀರಲಿದ್ದು, ನಿಮ್ಮ ಖರ್ಚು ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಿ ಹಾಗೂ ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಉತ್ತಮ. ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿರ ಬೇಕು.