ಬಿಗ್ ಬ್ರೇಕಿಂಗ್: ಶಸ್ತ್ರಾಸ್ತ್ರ ಒಪ್ಪಂದ ಮುರಿಯಿರಿ ಎಂದ ನಂತರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ ಕೇಂದ್ರ! ಯುದ್ಧಕ್ಕೆ ಸನ್ನದ್ಧ ವಾಗುತ್ತಿದೆಯೇ ಭಾರತ?

ನಮಸ್ಕಾರ ಸ್ನೇಹಿತರೇ, ಭಾರತ ಹಾಗೂ ಚೀನಾ ಗಡಿಯಲ್ಲಿ ಯಾವ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಒಂದೆಡೆ ಚೀನಾ ದೇಶ ಸೇನಾ ರವಾನೆ ಮಾಡುತ್ತಿದ್ದರೆ ಭಾರತ ದೇಶ ಕೂಡ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿ ನಿಂತಿದೆ, ಗಣನೀಯ ಪ್ರಮಾಣದಲ್ಲಿ ಸೇನೆಯನ್ನು ಹೆಚ್ಚಿಸಿದೆ.

ಇಷ್ಟೇ ಅಲ್ಲದೇ, ಕೆಲವು ಗಂಟೆಗಳ ಹಿಂದಷ್ಟೇ ಭಾರತೀಯ ಸೈನಿಕರು ಯಾವುದೇ ಶಸ್ತ್ರಾಸ್ತ್ರಗಳನ್ನು ಗಡಿಯಲ್ಲಿ ಮುಕ್ತವಾಗಿ ಬಳಸಬಹುದು, ಒಪ್ಪಂದಗಳನ್ನು ಗಣನೆಗೆ ತೆಗೆದುಕೊಳ್ಳ ಬೇಡಿ, ಚೀನಾ ಪುಂಡಾಟಕ್ಕೆ ಬ್ರೇಕ್ ಹಾಕಿ ಎಂದಿದ್ದ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಕಠಿಣ ನಿರ್ಧಾರ ಘೋಷಣೆ ಮಾಡಿದೆ. ಹೌದು ಸ್ನೇಹಿತರೇ, ಇದೀಗ ಇಂದು ನಡೆದ ರಕ್ಷಣಾ ಸಚಿವರು, ಭಾರತೀಯ ಸೇನೆಯ ದಂಡನಾಯಕ ಹಾಗೂ ಮೂರು ಸೇನಾ ಅಧ್ಯಕ್ಷರ ಸಭೆಯ ನಂತರ ಕೇಂದ್ರ ಸರ್ಕಾರ ತುರ್ತು ಹಣವನ್ನು ಬಿಡುಗಡೆ ಮಾಡಿದೆ.

ಯುದ್ಧಕ್ಕೆ ಸಿದ್ದರಾಗಿರಲು ಸೂಚನೆ ನೀಡಿ, ತುರ್ತು ಅವಶ್ಯಕತೆಯ ಕಾರ್ಯ ವಿಧಾನದ ಅಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ತುರ್ತು ಹಣವನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮೂರು ಪಡೆಗಳು ಅಗತ್ಯವಿರುವ ಶಸ್ತ್ರಾಸ್ತ್ರಗಳು ಹೊಂದಿರುವ ಕಾರಣ, ಕೊಂಚ ಕಡಿಮೆ ಇದೆ ಎನಿಸಿದರೂ ಆಲೋಚನೆ ಮಾಡದೇ ಖರೀದಿ ಮಾಡಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಕ್ಷಣಾ ಪಡೆಗಳು ಇಲ್ಲಿಯವರೆಗೂ ಹಲವಾರು ಕ್ಷಿಪಣಿ ಹಾಗೂ ಬಿಡಿಭಾಗಗಳನ್ನು ದಾಸ್ತಾನು ಮಾಡಿಕೊಂಡಿವೆ ಎಂದು ಸೇನಾಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಆದೇಶದ ಮೂಲಕ ಗಡಿಯಲ್ಲಿ ಕಾವು ಮತ್ತಷ್ಟು ಏರುವುದು ಖಚಿತವಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav