ಚೀನಾ ಮಾತು ಕೇಳಿ ಭಾರತದ ಜೊತೆ ಗಡಿ ಖ್ಯಾತೆ ತೆಗೆದ ಪ್ರಧಾನಿಗೆ ಬಿಗ್ ಶಾಕ್ !ನಡೆಯುತ್ತಿರುವುದು ಏನು ಗೊತ್ತಾ?

ಚೀನಾ ಮಾತು ಕೇಳಿ ಭಾರತದ ಜೊತೆ ಗಡಿ ಖ್ಯಾತೆ ತೆಗೆದ ಪ್ರಧಾನಿಗೆ ಬಿಗ್ ಶಾಕ್ !ನಡೆಯುತ್ತಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ ಹಲವಾರು ವರ್ಷಗಳ ಭಾರತದ ಜೊತೆಗಿನ ಸಂಬಂಧವನ್ನು ಇದೀಗ ನೇಪಾಳದಲ್ಲಿ ಅಧಿಕಾರ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷದ ಪ್ರಧಾನಿ ಕೆಪಿ ಶರ್ಮಾರವರು ಹದಗೆಡಿಸಿದ್ದಾರೆ. ಭಾರತದ ಕೆಲವು ಪ್ರದೇಶಗಳನ್ನು ತನ್ನದೆಂದು ತೋರಿಸಿ ಹೊಸ ನಕ್ಷೆ ಬಿಡುಗಡೆ ಮಾಡಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಯಶಸ್ವಿಯಾಗಿದ್ದಾರೆ.

ಆದರೆ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲ ಬಾರಿ ಹೊಸ ನಕ್ಷೆಯನ್ನು ಮಂಡಿಸಲು ಸರ್ವ ಪಕ್ಷಗಳ ಸಭೆ ಕರೆದಾಗ ತನ್ನದೇ ಪಕ್ಷದ ನಾಯಕರನ್ನು ಮನವೊಲಿಸುವಲ್ಲಿ ಕೆಪಿ ಶರ್ಮರವರು ವಿಫಲರಾಗಿದ್ದರು. ಯಾವುದೇ ಕಾರಣಕ್ಕೂ ನಕ್ಷೆ ಬದಲಾಯಿಸಲು ಒಪ್ಪುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಎರಡನೇ ಬಾರಿ ಸರ್ವ ಪಕ್ಷಗಳ ಸಭೆ ಕರೆದು ಎಲ್ಲ ನಾಯಕರ ಮನವೊಲಿಸಿ ರಾಜ್ಯಸಭಾ ಹಾಗೂ ಲೋಕಸಭಾ ಗಳಲ್ಲಿ ಹೊಸ ನಕ್ಷೆಯ ಅಂಗೀಕಾರ ಪಡೆದು ಕೊಂಡಿದ್ದರು. ಇದನ್ನು ಕಂಡ ಭಾರತ ದೇಶವು ಗುಪ್ತಚರ ಇಲಾಖೆಯು ನೇಪಾಳದ ಈ ಪ್ರತಿಯೊಂದು ನಡೆಗಳ ಹಿಂದೆ ಚೀನಾ ದೇಶದ ರಾಯಭಾರಿ ಹೂ ಯಾಂಕಿ ರವರ ಕೈವಾಡವಿದೆ ಎಂದು ಅಧಿಕೃತ ಮಾಹಿತಿ ಬಿಡುಗಡೆ ಮಾಡಿತ್ತು.

ಈ ಎಲ್ಲಾ ವಿದ್ಯಮಾನಗಳ ಬಳಿಕ ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಯಾವ ರೀತಿಯ ಘಟನೆ ಉಂಟಾಯಿತು ಹಾಗೂ ಗಡಿಯಲ್ಲಿ ಯಾವ ರೀತಿ ಉದ್ವಿಗ್ನ ಪರಿಸ್ಥಿತಿ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಇದನ್ನು ಗಮನಿಸಿದರೂ ಕೂಡ ನೇಪಾಳ ದೇಶವು ಚೀನಾ ದೇಶದ ಕಮ್ಯುನಿಸ್ಟ್ ಪಕ್ಷದ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿತು. ಈ ಒಂದು ಸಭೆ ನೇಪಾಳದ ಪ್ರಧಾನ ಮಂತ್ರಿ ರವರ ಕುರ್ಚಿಯನ್ನು ಅಲುಗಾಡಿಸಿದೆ. ಹೌದು ಸ್ನೇಹಿತರೇ ಕೇವಲ ಒಂದು ಸಭೆ ನೇಪಾಳದ ಕೆಪಿ ಶರ್ಮರವರ ಕುರ್ಚಿಯನ್ನೇ ಅಲುಗಾಡಿಸುತ್ತಿದೆ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಹೇಗೆ ಅಂತೀರಾ? ಇಲ್ಲಿದೆ ಸಂಪೂರ್ಣ ವರದಿ.

ಹೌದು ಸ್ನೇಹಿತರೇ, ಮೊದಲಿಗೆ ನೇಪಾಳದ ಪಕ್ಷದ ಅಂತರ್ರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಮಾಧವ ಕುಮಾರ್ ಮತ್ತು ಜ್ಞಾಲಾನಾತ್ ಕನಾಲ್ ರವರು ಈ ಸಭೆಯಿಂದ ಹೊರಗುಳಿದಿದ್ದಾರೆ. ಇಷ್ಟೇ ಅಲ್ಲದೇ ಪಕ್ಷದ ಹಿರಿಯ ನಾಯಕರೊಬ್ಬರೂ ಭಾರತ ಹಾಗೂ ನೇಪಾಳದ ಸಂಬಂಧಗಳು ಈಗ ಅತ್ಯಂತ ಹದಗೆಟ್ಟಿವೆ. ಭಾರತ ಹಾಗೂ ಚೀನಾ ನಡುವೆ ಗಡಿಯಲ್ಲಿ ಕಾವು ಏರುತ್ತಿದೆ. ಇಂತಹ ಸಂದರ್ಭದಲ್ಲಿ ನೇಪಾಳ ದೇಶದ ಪ್ರಧಾನಿ ಕೆಪಿ ಶರ್ಮರವರು ಈ ರೀತಿಯ ಸಭೆಗಳನ್ನು ಚೀನಾ ದೇಶದ ಜೊತೆ ನಡೆಸುವುದು ಬೆಂಬಲಿಸುವ ನಡೆಯಲ್ಲ, ಇದನ್ನು ನಾವು ಖಂಡಿಸುತ್ತೇವೆ. ಕೇವಲ ಭಾರತದ ಜೊತೆ ಗಡಿಯಲ್ಲಿ ವಾದಗಳು ಇವೆಯೆಂದು ಚೀನಾ ದೇಶದ ಜೊತೆ ಕೈಜೋಡಿಸುವುದು ಸೂಕ್ತವಲ್ಲ ಎಂದು ತನ್ನದೇ ಪಕ್ಷದ ಪ್ರಧಾನಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇನ್ನು ಮಾಜಿ ಉಪ ಪ್ರಧಾನಿ ಮತ್ತು ನೇಪಾಳದ ವಿದೇಶಾಂಗ ಸಚಿವ ನಾರಾಯಣ ಕಾಜಿ ಶ್ರೇಷ್ಠಾ ರವರು ಮಾತನಾಡಿ ಈ ಸಭೆಯ ಕುರಿತು ಯಾರಿಗೂ ತಿಳಿದಿಲ್ಲ. ಈ ರೀತಿಯ ರಹಸ್ಯ ಸಭೆಗಳನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದಿದ್ದಾರೆ. ಕೆಪಿ ಶರ್ಮರವರ ನಡೆಗಳಿಂದ ಕಮ್ಯುನಿಸ್ಟ್ ಪಕ್ಷದ ಹಲವಾರು ನಾಯಕರು ಮುನಿಸಿಕೊಂಡಿದ್ದು ಕೆಪಿ ಶರ್ಮರವರ ಕುರ್ಚಿಯನ್ನು ಅಲುಗಾಡಿಸಲು ತಂತ್ರ ರೂಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇವೆಲ್ಲದರ ಜೊತೆಗೆ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಅಧ್ಯಕ್ಷ ಹಾಗೂ ನೇಪಾಳದ ಮಾಜಿ ಉಪ ಪ್ರಧಾನ ಮಂತ್ರಿ ಕಮಲ್ ತಾಪ ರವರು ಮಾತನಾಡಿ ಈ ರೀತಿಯ ಕೆಲಸಗಳು ಕೆಪಿ ಶರ್ಮಾ ರವರಿಗೆ ಶೋಭೆ ತರುವುದಿಲ್ಲ. ಅವರು ನೇಪಾಳದ ಪ್ರಧಾನಿಯಾಗಿ ಇರಬೇಕು, ನೇಪಾಳದ ಪ್ರಧಾನಿ ಭಾರತದ ವಿರುದ್ಧ ಕ್ಯಾತೆ ತೆಗೆದಾಗ ಆರಂಭದಲ್ಲಿ ಹಲವಾರು ಸವಾಲುಗಳನ್ನು ತನ್ನದೇ ಆದ ಪಕ್ಷದ ನಾಯಕರಿಂದ ಎದುರಿಸಿದರು ಎಂದು ಹೇಳಿಕೆ ನೀಡಿದ್ದಾರೆ.

ಈ ಎಲ್ಲಾ ವಿದ್ಯಮಾನಗಳಿಂದ ಕಮ್ಯುನಿಸ್ಟ್ ಪಕ್ಷದಲ್ಲಿ ಬಿರುಕು ಮೂಡಿದ್ದು, ಇದೀಗ ಕೆಪಿ ಶರ್ಮಾರವರು ತಮ್ಮ ಕುರ್ಚಿ ಉಳಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿರಬೇಕಾದ ಸಂದರ್ಭ ಎದುರಾಗಿದೆ ಹಾಗೂ ಎಂದಿನಂತೆ ಚೀನಾದ ರಾಯಭಾರಿ ಹೂ ಯಾಂಕಿ ರವರ ಸಹಾಯವನ್ನು ಕೇಳಿ ಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.