ಚೀನಾ ಸವಾಲುಗಳನ್ನು ಮೆಟ್ಟಿ ನಿಲ್ಲಲು ಮತ್ತೊಂದು ಆದೇಶ ಹೊರಡಿಸಿದ ಸೇನೆ ! ಯುದ್ಧಕ್ಕೆ ಸನ್ನದ್ಧವಾಗುತ್ತಿದೆಯೇ ಭಾರತ?

ಚೀನಾ ಸವಾಲುಗಳನ್ನು ಮೆಟ್ಟಿ ನಿಲ್ಲಲು ಮತ್ತೊಂದು ಆದೇಶ ಹೊರಡಿಸಿದ ಸೇನೆ ! ಯುದ್ಧಕ್ಕೆ ಸನ್ನದ್ಧವಾಗುತ್ತಿದೆಯೇ ಭಾರತ?

ನಮಸ್ಕಾರ ಸ್ನೇಹಿತರೇ, ಭಾರತ ದೇಶವು ಇದೀಗ ಚೀನಾ ಗಡಿಯಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿ ನಿಂತಿದೆ. ಶಸ್ತ್ರಾಸ್ತ್ರ ಸಂಖ್ಯಾ ಬಲದಲ್ಲಿ ಚೀನಾ ದೇಶ ಮುಂದಿದ್ದರೂ ಕೂಡ ಖಂಡಿತ ಭಾರತೀಯ ಸೇನೆಯ ಸೈನಿಕರ ಅನುಭವ ಹಾಗೂ ಪರ್ವತ ಶ್ರೇಣಿಗಳ ನಡುವೆ ಭಾರತೀಯ ಸೈನಿಕರನ್ನು ಎದುರಿಸುವುದು ಸಾಧ್ಯವೇ ಇಲ್ಲ. ಇದನ್ನು ಚೀನಾ ದೇಶವೇ ಒಪ್ಪಿಕೊಂಡು ಭಾರತೀಯ ಸೇನೆಯು ಅತ್ಯಂತ ಶ್ರೇಷ್ಠ ಪರ್ವತ ಪಡೆಯನ್ನು ಹೊಂದಿದೆ ಎಂದಿದೆ.

ಹೀಗಿದ್ದರೂ ಕೂಡ ಒಂದು ಕಡೆ ಚೀನಾ ದೇಶ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ಜಮಾವಣೆ ಮಾಡಿ ಯುದ್ಧ ವಿಮಾನಗಳನ್ನು ಹಾರಾಟ ನಡೆಸಿದೆ, ಭಾರತ ದೇಶ ಕೂಡ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ ಹಲವಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಇದೀಗ ಬಂದಿರುವ ಅಧಿಕೃತ ಮಾಹಿತಿಯ ಪ್ರಕಾರ ದೇಶದ ಇತರ ಕಡೆ ಕೆಲಸ ಮಾಡುತ್ತಿರುವ 2000 ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ರಿಗೆ ಹೊಸ ಆದೇಶ ಹೊರಡಿಸಿದೆ.

ಹೌದು ಸ್ನೇಹಿತರೇ, ಇದೀಗ ಭಾರತೀಯ ಸೇನೆಯು ಈ ಕೂಡಲೇ 2000 ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಭಾರತದ 180 ಬಾರ್ಡರ್ ಚೆಕ್ಪೋಸ್ಟ್ ಗಳಲ್ಲಿ ಭಾರತೀಯ ಸೈನಿಕರ ಜೊತೆ ಕೂಡಿಕೊಂಡು 3488 ಕಿಲೋ ಮೀಟರ್ ಉದ್ದವಿರುವ ಲೈನ್ ಆಫ್ ಅಕ್ಚುಯಲ್ ಕಂಟ್ರೋಲ್ ಗಡಿ ರೇಖೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಕೂಡಲೇ ಇವರೆಲ್ಲರನ್ನು ಗಡಿಗೆ ತಲುಪಿಸುವುದಾಗಿ ಭಾರತೀಯ ಸೇನೆ ಘೋಷಿಸಿದೆ. ಒಟ್ಟಿನಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ.