ಎಕ್ಲ್ಯೂಸಿವ್: ಕೇವಲ 2 ದಿನಗಳಲ್ಲಿ ಕೆಲಸ ಮಾಡಿ ಮುಗಿಸಿದ ಭಾರತ ! ಚೀನಾಕ್ಕೆ ಇನ್ನು ಮುಂದಿದೆ ಮಾರಿಹಬ್ಬ !

ಎಕ್ಲ್ಯೂಸಿವ್: ಕೇವಲ 2 ದಿನಗಳಲ್ಲಿ ಕೆಲಸ ಮಾಡಿ ಮುಗಿಸಿದ ಭಾರತ ! ಚೀನಾಕ್ಕೆ ಇನ್ನು ಮುಂದಿದೆ ಮಾರಿಹಬ್ಬ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶವು ಗಡಿಭಾಗದಲ್ಲಿನ ರಸ್ತೆ ಹಾಗೂ ಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಅದರಲ್ಲಿಯೂ ಗಾಲ್ವಾನ್ ಪ್ರದೇಶದಲ್ಲಿ 60 ಮೀಟರ್ ಸೇತುವೆ ಯನ್ನು ನಿರ್ಮಾಣ ಮಾಡಲು ಹೊರಟಾಗ ಚೀನಾ ದೇಶ ಅಡ್ಡಹಾಕಿ ಇನ್ನಿಲ್ಲದ ಕ್ಯಾತೆ ತೆಗೆದು ಯಾವ ರೀತಿಯ ಪರಿಸ್ಥಿತಿಯನ್ನು ಉಂಟುಮಾಡಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.

ಹೌದು ಸ್ನೇಹಿತರೇ, ಚೀನಾ ದೇಶವು ಭಾರತೀಯರು ಗಸ್ತು ತಿರುಗುವ ಪಾಯಿಂಟ್ ಹದಿನಾಲ್ಕರ ಸಮೀಪ 60 ಮೀಟರ್ ಸೇತುವೆ ನಿರ್ಮಾಣ ಮಾಡುತ್ತಿರುವ ಸಮಯದಲ್ಲಿ ಅಡ್ಡಗಾಲು ಹಾಕಿತ್ತು. ಹಲವು ದಿನಗಳ ಹಿಂದೆಯೇ ಈ ಕಾರ್ಯ ಆರಂಭವಾಗಿತ್ತು ಎನ್ನಲಾಗಿದೆ. ಆದರೆ ಇದ್ದಕ್ಕಿದ್ದ ಹಾಗೆ ಚೀನಾ ದೇಶದ ಸೈನಿಕರು ಭಾರತದ ಗಡಿ ಪ್ರವೇಶಿಸಿ ಈ ರೀತಿಯ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರವು ಇದೀಗ ಎರಡು ದಿನಗಳಲ್ಲಿ ಪಾಯಿಂಟ್ 14 ರಲ್ಲಿ ಸೇತುವೆ ನಿರ್ಮಾಣವನ್ನು ಮಾಡಿ ಮುಗಿಸಿದೆ.

ಇದು ಭಾರತೀಯ ಸೇನೆಗೆ ನದಿಗೆ ಅಡ್ಡಲಾಗಿ ಚಲಿಸಲು ಅವಕಾಶ ನೀಡುವ ಮೂಲಕ ಸೂಕ್ಷ್ಮ ವಲಯದಲ್ಲಿ ಭಾರತದ ಹಿಡಿತವನ್ನು ಬಲಪಡಿಸುತ್ತದೆ ಮತ್ತು ಡಾರ್‌ಬುಕ್‌ನಿಂದ ದೌಲತ್ ಬೇಗ್ ಓಲ್ಡಿವರೆಗಿನ 255 ಕಿ.ಮೀ. ಕಾರಕೋರಂ ಪಾಸ್‌ನ ದಕ್ಷಿಣಕ್ಕೆ ಕೊನೆಯ ಮಿಲಿಟರಿ ಪೋಸ್ಟ್ ಇದಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಎಂಟು ಸೇತುವೆಗಳು ಸೇರಿದಂತೆ 255 ಕಿಲೋಮೀಟರ್ ಉದ್ದದ ಕಾರ್ಯತಂತ್ರ ರಸ್ತೆ ಕಾಮಗಾರಿ ನಡೆಯುತ್ತಿದ್ದು ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಭಾರತ ದೇಶ ನಿರ್ಧಾರ ಮಾಡಿದೆ, ಇದರಲ್ಲಿ ವಿವಿಧ ಗಾತ್ರದ 8 ಸೇತುವೆಗಳು ಮತ್ತು ವಿಸ್ತಾರವಾದ ರಸ್ತೆ ಸೇರಿದೆ.