ಸರ್ಕಾರವೇ ಚೀನಾ ಪ್ರಾಡಕ್ಟ್ ಬ್ಯಾನ್ ಮಾಡಬಹುದಲ್ಲವೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ ! ಯಾಕೆ ಮಾಡಲು ಸಾಧ್ಯವಿಲ್ಲ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ದೇಶದೆಲ್ಲೆಡೆ ಚೀನಾ ವಸ್ತುಗಳನ್ನು ಖರೀದಿ ಮಾಡಬೇಡಿ ಎಂಬ ಅಭಿಯಾನ ಆರಂಭವಾಗಿದೆ. ಹಲವಾರು ವರ್ಷಗಳಿಂದ ಈ ಕೂಗು ಕೇಳಿ ಬರುತ್ತಿದೆಯಾದರೂ, ಇಷ್ಟರ ಮಟ್ಟಿಗೆ ಎಂದು ಕೇಳಿ ಬಂದಿರಲಿಲ್ಲ. ಆದರೆ ನಮ್ಮ ಭಾರತೀಯರು ಸೈನಿಕರಿಗೆ ತೊಂದರೆಯಾದ ತಕ್ಷಣ ಕೂಡಲೇ ಎಚ್ಚೆತ್ತುಕೊಂಡು ಚೀನಾ ದೇಶದ ವಸ್ತುಗಳನ್ನು ಖರೀದಿ ಮಾಡುವುದಿಲ್ಲ ಎಂದು ಅಭಿಯಾನ ಆರಂಭಿಸಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳನ್ನು ಬಳಸಿ ಎನ್ನುತ್ತಾರೆ. ಹೇಗಿದ್ದರೂ ಅಧಿಕಾರ ಅವರ ಕೈಯಲ್ಲೇ ಇದೆ ಯಾಕೆ ನೇರವಾಗಿ ಚೀನಾ ದೇಶದಿಂದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ಆದೇಶ ಹೊರಡಿಸಬಾರದು ಎಂಬ ಪ್ರಶ್ನೆಗಳು ಎಲ್ಲರಲ್ಲಿಯೂ ಮೂಡಿರುತ್ತದೆ. ಇದರಲ್ಲಿ ಹಲವಾರು ಜನರಿಗೆ ಕಾರಣ ಕೂಡ ತಿಳಿದಿರಬಹುದು. ಅದುವೇ ವಿಶ್ವ ವ್ಯಾಪಾರ ಸಂಸ್ಥೆಯ ಜೊತೆ ಭಾರತ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ಮಾಡಿಕೊಂಡಿರುವ ಒಪ್ಪಂದ.

ಯಾವುದೇ ರಾಷ್ಟ್ರದ ಜೊತೆ ಸೂಕ್ತ ಕಾರಣಗಳಿಲ್ಲದೇ ನೇರವಾಗಿ ಆಮದಿನ ಮೇಲೆ ನಿಷೇಧ ಹೇರುವುದಿಲ್ಲ ಎಂದು ಒಪ್ಪಂದಕ್ಕೆ ಸಹಿ ಮಾಡಿರುತ್ತವೆ. ಒಂದು ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಕೇಂದ್ರ ಸರ್ಕಾರ ಈ ರೀತಿಯ ನಿರ್ಧಾರ ಕೈಗೊಂಡಲ್ಲಿ ಚೀನಾ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ವಾದ ಮಂಡಿಸಿ ಬಹಳ ಸುಲಭವಾಗಿ ಗೆಲುವು ಸಾಧಿಸಬಹುದು. ಹಾಗಿದ್ದರೇ ಚೀನಾ ವಸ್ತುಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲವೇ? ಖಂಡಿತ ಸಾಧ್ಯವಿದೆ.

ದೇಶದ ಪ್ರತಿಯೊಬ್ಬರೂ ಈ ರೀತಿ ಅಭಿಯಾನಗಳಲ್ಲಿ ರಾಜಕೀಯ ಹುಡುಕದೇ, ಇಂತಹ ಪರಿಸ್ಥಿತಿಯಲ್ಲಿ ಗೆಲ್ಲ ಬೇಕಾಗಿರುವುದು ಯಾವುದೇ ರಾಜಕೀಯ ನಾಯಕನಲ್ಲ, ಯಾವುದೇ ವಿಪಕ್ಷ ನಾಯಕನಲ್ಲ, ಬದಲಾಗಿ ದೇಶ ಎಂದು ಅರ್ಥ ಮಾಡಿಕೊಂಡು ಸ್ವದೇಶಿ ಭಾರತ ನಿರ್ಮಿಸುವತ್ತ ಹೆಜ್ಜೆ ಇಡಬೇಕು. ಆಗ ಮಾತ್ರ ನಮಗೆ ಗೆಲುವು ಸಾಧ್ಯ. ಇದು ಒಂದು ಎರಡು ದಿನದ ಅಭಿಯಾನವಲ್ಲ, ಹತ್ತಾರು ವರ್ಷಗಳು ಕಷ್ಟಪಟ್ಟು ಒಂದೊಂದೇ ವಸ್ತುಗಳನ್ನು ಇಲ್ಲಿಯೇ ತಯಾರಿಸಿ ಬಳಸಬೇಕು.

Post Author: Ravi Yadav