ನಡೆಯಿತು ಮಹತ್ವದ ವಿದ್ಯಮಾನ ! ಮತ್ತೊಂದು ದೃಢ ನಿರ್ಧಾರ ತೆಗೆದುಕೊಂಡ ಭಾರತೀಯ ಸೇನೆ ! ಚೀನಾಗೆ ಗುನ್ನಾ ನೀಡಲು ಮುಂದಾಯಿತೇ?

ನಡೆಯಿತು ಮಹತ್ವದ ವಿದ್ಯಮಾನ ! ಮತ್ತೊಂದು ದೃಢ ನಿರ್ಧಾರ ತೆಗೆದುಕೊಂಡ ಭಾರತೀಯ ಸೇನೆ ! ಚೀನಾಗೆ ಗುನ್ನಾ ನೀಡಲು ಮುಂದಾಯಿತೇ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಹಾಗೂ ಚೀನಾ ಗಡಿಯಲ್ಲಿ ಕ್ಷಣಕ್ಷಣಕ್ಕೂ ಕಾವು ಏರತೊಡಗಿದೆ. ಜಾಗತಿಕ ಮಟ್ಟದಲ್ಲಿ ಎರಡು ದೇಶಗಳ ನಡುವಿನಲ್ಲಿ ನಡೆದ ಘಟನೆ ಭಾರಿ ಸದ್ದು ಮಾಡಿದೆ.

ಒಂದೆಡೆ ಶಾಂತಿಯ ಮಾತುಗಳನ್ನಾಡುವ ಚೀನಾ ದೇಶವು ಮತ್ತೊಂದೆಡೆ ಗಡಿಯಲ್ಲಿ ಬಾರಿ ಸೇನೆ ಜಮಾವಣೆ ಮಾಡುತ್ತಿದೆ. ಭಾರತ ಕೂಡ ಅಲರ್ಟ್ ಘೋಷಣೆ ಮಾಡಿ ಗಡಿಯಲ್ಲಿ ಶಸ್ತ್ರಾಸ್ತ್ರ ಸೇರಿದಂತೆ ಸೈನಿಕರ ಜಮಾವಣೆ ಮಾಡುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಚೈನಿ ಸೈನಿಕರ ಸಂಖ್ಯೆ ಹಾಗೂ ಹೆಲಿಕ್ಯಾಫ್ಟರುಗಳು ಬಾರಿ ಶಸ್ತ್ರಾಸ್ತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಮಾಡಿದ ಕಾರಣ ಕೂಡಲೇ ಎಚ್ಚೆತ್ತುಕೊಂಡ ಭಾರತೀಯ ಸೇನೆ ಮತ್ತೊಂದು ಮಹತ್ವದ ಹೆಜ್ಜೆ ತೆಗೆದುಕೊಂಡಿದೆ.

ಹೌದು ಸ್ನೇಹಿತರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ರಾತ್ರೋ ರಾತ್ರಿ ಗಡಿಭಾಗಕ್ಕೆ 15,000 ಯೋಧರನ್ನು ಒಮ್ಮೆಲೆ ಭಾರತೀಯ ಸೇನೆ ರವಾನಿಸಿದೆ. ಯಾವುದೇ ಸವಾಲನ್ನು ಎದುರಿಸಲು ಕೇಂದ್ರ ಸರ್ಕಾರ ಸೂಚನೆ ಮಾಡಿದ್ದು, ಯಾವುದೇ ಕಾರಣಕ್ಕೂ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಬಂದರೆ ಹಿಂದೆ ಮುಂದೆ ನೋಡಬೇಡಿ ಎಂದು ಸಂಪೂರ್ಣ ಸ್ವಾತಂತ್ರ್ಯ ನೀಡಿ ಸೈನಿಕರನ್ನು ಗಡಿಯಲ್ಲಿ ಜಮಾವಣೆ ಮಾಡಿದೆ. ಮತ್ತೊಂದೆಡೆ ಭಾರತೀಯ ನೌಕಾಪಡೆಯು ಕೂಡ ಸಮುದ್ರಕ್ಕೆ ಇಳಿದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಹಾಗೂ ಮಹತ್ವದ ಚೆಕ್ಪಾಯಿಂಟ್ ಗಳಲ್ಲಿ ಗಸ್ತು ತಿರುಗಿ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗುತ್ತಿದೆ.