ಚೀನಾಗೆ ಮರ್ಮಾಘಾತ ನೀಡಲು ಸಿದ್ಧವಾಯಿತು ಮಾಸ್ಟರ್ ಪ್ಲಾನ್ ! ಐತಿಹಾಸಿಕ ನಿರ್ಧಾರದತ್ತ ಭಾರತದ ಚಿತ್ತ ! ಏನು ಗೊತ್ತಾ?

ಚೀನಾಗೆ ಮರ್ಮಾಘಾತ ನೀಡಲು ಸಿದ್ಧವಾಯಿತು ಮಾಸ್ಟರ್ ಪ್ಲಾನ್ ! ಐತಿಹಾಸಿಕ ನಿರ್ಧಾರದತ್ತ ಭಾರತದ ಚಿತ್ತ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಗಡಿಯಲ್ಲಿ ಒಂದೆಡೆ ಕ್ಷಣಕ್ಷಣಕ್ಕೂ ಕಾವು ಏರತೊಡಗಿದೆ, ಇಂದು ಗಡಿಯಲ್ಲಿ ಭಾರತೀಯ ಯುದ್ಧ ವಿಮಾನಗಳು ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿವೆ. ಖುದ್ದು ವಾಯುಸೇನೆಯ ಮುಖ್ಯಸ್ಥರು ಇಂದು ಗಡಿಗೆ ಭೇಟಿ ನೀಡಿ ಸಕಲ ವ್ಯವಸ್ಥೆಗಳನ್ನು ಪರಿಶೀಲಿಸಿ ವಾಪಸಾಗಿದ್ದಾರೆ. ಇದೇ ಸಮಯದಲ್ಲಿ ಮತ್ತೊಂದು ಮಹತ್ವದ ಸುದ್ದಿ ಕೇಳಿ ಬಂದಿದೆ.

ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ನರೇಂದ್ರ ಮೋದಿ ಅವರು ಹೇಳಿದಂತೆ ಅದೇ ಹಾದಿಯಲ್ಲಿ ನಡೆಯುವಂತೆ ಕಾಣುತ್ತಿದೆ, ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶವು ಚೀನಾ ದೇಶದಿಂದ ವರ್ಷಕ್ಕೆ ಕನಿಷ್ಠ 50 ಬಿಲಿಯನ್ ಡಾಲರ್ ಗಳಷ್ಟು ಬೆಲೆ ಬಾಳುವ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ ಬರೋಬ್ಬರಿ 62 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿತ್ತು. ಆದರೆ ರಫ್ತು ಕೇವಲ 16 ಬಿಲಿಯನ್ ಡಾಲರ್.

ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಭಾರತೀಯ ಕೇಂದ್ರ ಸರ್ಕಾರವು, ಚೀನಾ ದೇಶದ ಪ್ರಮುಖ ವಸ್ತುಗಳಾದ ಆಟಿಕೆ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಇನ್ನಿತರ 371 ವಸ್ತುಗಳ ಆಮದಿನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲು ನಿರ್ಧಾರ ಮಾಡಿದೆ. ಸುಂಕ ಹೆಚ್ಚು ಮಾಡುವುದಷ್ಟೇ ಅಲ್ಲದೇ (ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಸಂಪೂರ್ಣವಾಗಿ ನಿಷೇಧ ಮಾಡಲು ಸಾಧ್ಯವಿಲ್ಲ), ಕೆಲವು ವಸ್ತುಗಳಿಗೆ ಸಂಪೂರ್ಣ ನಿರ್ಬಂಧ ಹೇರಿ,‌ ಪ್ರತಿಯೊಂದು ವಸ್ತುಗಳನ್ನು ಯಾವ ಕಾರಣಕ್ಕೆ ಕಡಿಮೆ ಬೆಲೆಗೆ ಚೀನಾ ರಫ್ತು ಮಾಡುತ್ತದೆ ಎಂಬುದನ್ನು ಅರಿತುಕೊಳ್ಳಲು, ಅದರ ಕ್ವಾಲಿಟಿ ಚೆಕ್ ಮಾಡಿ ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿದೆ.

ನಾವು ಮೇಲೆ ಹೇಳಿದಂತೆ ಕಳೆದ ವರ್ಷ ಆಮದು ಮಾಡಿಕೊಂಡ 62 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳಲ್ಲಿ ಈ 371 ವಸ್ತುಗಳು ಬರೋಬ್ಬರಿ 40 ಬಿಲಿಯನ್ ಡಾಲರ್ ಮೌಲ್ಯದ್ದಾಗಿವೆ. ಅಷ್ಟೇ ಅಲ್ಲದೇ ಈ ವಸ್ತುಗಳಿಗೆ ಕೊರತೆಯಾಗದಂತೆ ಭಾರತದಲ್ಲಿಯೇ ತಯಾರಿಸಲು ಯೋಜನೆಗಳನ್ನು ಸಿದ್ಧಪಡಿಸಿ, ಬಹಳ ಅತ್ಯಗತ್ಯವಾಗಿರುವ ವಸ್ತುಗಳನ್ನು ತಕ್ಷಣದ ಮಟ್ಟಿಗೆ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ.