ಚೀನಾಗೆ ಬಿಗ್ ಶಾಕ್ ! ತೈವಾನ್, ಭಾರತ, ಅಮೆರಿಕ ಜೊತೆ ಅಖಾಡಕ್ಕೆ ಮತ್ತೊಂದು ಬಲಾಡ್ಯ ದೇಶ ! ಮಂಡಿಯೂರಲಿದೆಯೇ ಚೀನಾ?

ಚೀನಾಗೆ ಬಿಗ್ ಶಾಕ್ ! ತೈವಾನ್, ಭಾರತ, ಅಮೆರಿಕ ಜೊತೆ ಅಖಾಡಕ್ಕೆ ಮತ್ತೊಂದು ಬಲಾಡ್ಯ ದೇಶ ! ಮಂಡಿಯೂರಲಿದೆಯೇ ಚೀನಾ?

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ದೇಶ ಕೇವಲ ಭಾರತದ ಜೊತೆ ಗಡಿ ಖ್ಯಾತೆ ತೆಗೆಯುತ್ತಿಲ್ಲ ಬದಲಾಗಿ ತೈವಾನ್, ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಮುಂದಾಗುತ್ತಿದೆ. ದಕ್ಷಿಣ ಚೀನಾ ಸಮುದ್ರ ದಲ್ಲಿ ಚೀನಾ ದೇಶ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದ್ದವು ಕಂಡ ಅಮೆರಿಕಾ ದೇಶವು ಹಲವಾರು ತಿಂಗಳುಗಳಿಂದ ನಿರಂತರವಾಗಿ ಹಿಂದೆ ಸರಿಯುವಂತೆ ಹೇಳಿತಿತ್ತು.

ಇಡೀ ತೈವಾನ್ ದೇಶವೇ ನನ್ನದು ಎಂಬಂತೆ ಹೇಳಿಕೆಗಳನ್ನು ನೀಡುತ್ತಿರುವ ಚೀನಾ ದೇಶವು ತೈವಾನ್ ದೇಶದ ಮೇಲೆ ಯಾವುದೇ ಸಮಯದಲ್ಲಿ ಬೇಕಾದರೂ ಯುದ್ಧ ಘೋಷಿಸುವ ಸಾಧ್ಯತೆಗಳು ಇದೆ ಎಂಬುದನ್ನು ಅರಿತ ತಕ್ಷಣ ಸಂದೇಶವು ಕೂಡ ಯುದ್ಧಕ್ಕೆ ಸಿದ್ದರಿದ್ದೇವೆ ಎಂಬ ಸಂದೇಶ ಸಾರಿತ್ತು. ಇಷ್ಟು ಸಾಲದು ಎಂಬಂತೆ ಭಾರತದ ಜೊತೆ ಕೂಡ ಇದೀಗ ಗಡಿ ಖ್ಯಾತೆ ತೆಗೆದಿದೆ. ಇದನ್ನು ಕಂಡ ಅಮೇರಿಕಾ ದೇಶವು ನನ್ನ ಮಿತ್ರರಿಗೆ ಸಹಾಯ ಮಾಡಲು ಎಂದು ಹೇಳಿಕೆ ನೀಡಿ ಇಂಡೋ ಪೆಸಿಫಿಕ್ ಸಾಗರದಲ್ಲಿ ಮೂರು ಅಣ್ವಸ್ತ್ರ ಯುದ್ಧ ನೌಕೆಗಳನ್ನು ನಿಯೋಜಿಸಿ ಚೀನಾ ದೇಶಕ್ಕೆ ಶಾಕ್ ನೀಡಿದ್ದು ನಿಮಗೆಲ್ಲರಿಗೂ ತಿಳಿದಿದೆ.

ಈ ಎಲ್ಲಾ ವಿದ್ಯಮಾನಗಳ ಬೆನ್ನಲ್ಲೇ, ಚೀನಾ ದೇಶ ಭಾರತದ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಸೈನಿಕರನ್ನು ನಿಯೋಜನೆ ಮಾಡಿತ್ತು. ಇದನ್ನು ಕಂಡ ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಒಂದು ಹೆಜ್ಜೆ ಕೂಡ ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಭೂಸೇನೆಯನ್ನು ಗಡಿಯಲ್ಲಿ ನಿಯೋಜಿಸಿ ಹದಿನೈದು ಸಾವಿರ ಸೈನಿಕರನ್ನು ಗಡಿಯಲ್ಲಿ ಸಶಸ್ತ್ರಾಗಿರಲು ಸೂಚನೆ ನೀಡಿ, ವಾಯುಪಡೆಯ ಯುದ್ಧ ವಿಮಾನಗಳನ್ನು ಹಾರಿಸುವುದು, ಅಷ್ಟೇ ಅಲ್ಲದೇ ನೌಕಾಪಡೆಯನ್ನು ಭಾರತದ ಸಮುದ್ರದ ಗಡಿಗಳಲ್ಲಿ ನಿಯೋಜನೆ ಮಾಡಿತ್ತು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡ ಚೀನಾ ದೇಶಕ್ಕೆ ಬುದ್ಧಿ ಬಂದಿರಲಿಲ್ಲ, ದಕ್ಷಿಣ ಚೀನಾ ಸಮುದ್ರ ದಲ್ಲಿ ಸುಖಾ ಸುಮ್ಮನೆ ಖ್ಯಾತೆ ತೆಗೆದು ಜಪಾನ್ ದೇಶದ ಕೆಲವು ಪ್ರದೇಶಗಳನ್ನು ತನ್ನದು ಎಂದು ವಾದ ಮಾಡಲು ಹೋಗಿ ಅಲ್ಲಿಯು ಗಡಿ ಖ್ಯಾತೆ ತೆಗೆದಿದೆ. ಸ್ನೇಹಿತರೇ ಜಪಾನ್ ದೇಶದ ಕುರಿತು ನಿಮಗೆಲ್ಲರಿಗೂ ತಿಳಿದೇ ಇದೆ, ವಿಶ್ವದ ಬಲಾಡ್ಯ ರಾಷ್ಟ್ರಗಳಲ್ಲಿ ಜಪಾನ್ ದೇಶ ಕೂಡ ಒಂದು. ಚೀನಾ ದೇಶದ ನಡೆಯನ್ನು ಕಂಡ ಜಪಾನ್ ದೇಶವು ಒಮ್ಮೆಲೆ ಅಖಾಡಕ್ಕಿಳಿದು ರಾತ್ರೋರಾತ್ರಿ ತನ್ನ ಹವಾ ಏನು ಎಂಬುದನ್ನು ತೋರಿಸಿದೆ.

ಚೀನಾ ತನ್ನ ಬುದ್ಧಿ ಪ್ರದರ್ಶಿಸಿದ ಕೆಲವೇ ಕೆಲವು ಗಂಟೆಗಳಲ್ಲಿ ಗಡಿಗಳಲ್ಲಿ ಹಲವಾರು ಕ್ಷಿಪಣಿಗಳನ್ನು ನಿಯೋಜಿಸಿ, ಯುದ್ಧ ವಿಮಾನಗಳನ್ನು ಹಾರಾಟ ಆರಂಭವು ಆದೇಶಿಸಿದೆ. ವಿಶ್ವದಲ್ಲಿಯೇ ಬಲಾಢ್ಯ ಕ್ಷಿಪಣಿ ಟಿಪ್ಪಣಿಗಳಲ್ಲಿ ಒಂದಾಗಿರುವ ಪೇಟ್ರಿಯಾಟಿಕ್ ಪ್ಯಾಕ್-3 ಎಂ ಎಸ್ ಇ ಏರ್ ಡಿಫೆನ್ಸ್ ಕ್ಷಿಪಣಿ ವ್ಯವಸ್ಥೆಯನ್ನು ಗಡಿಯಲ್ಲಿ ನಿಯೋಜನೆ ಮಾಡಿದೆ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಚೀನಾ ವಾಯು ಪಡೆಯನ್ನು ನಿಯಂತ್ರಣದಲ್ಲಿಡಲು ಇನ್ನು ಅತ್ಯಾಧುನಿಕ ಏರ್ ಡಿಫೆನ್ಸ್ ಸಿಸ್ಟಮ್ ಕ್ಷಿಪಣಿಗಳನ್ನು ಗಡಿಯಲ್ಲಿ ನಿಯೋಜಿಸಿದೆ. ವಿಶ್ವದ ಮೂರು ಬಲಾಢ್ಯ ರಾಷ್ಟ್ರಗಳು ಹಾಗೂ ತೈವಾನ್ ದೇಶ ಇದೀಗ ಚೀನಾ ದೇಶದ ನಡೆಗಳಿಂದ ಬೇಸತ್ತಿವೆ. ಈಗಲಾದರೂ ಚೀನಾ ದೇಶ ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಮುಂದೇನಾಗುತ್ತದೆ ಎಂಬುದನ್ನು ನಾವು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ.