ಅಮಿತ್ ಶಾ ಆಟ ಈಗ ಶುರು ! ಮಸೂದೆಗಳ ಮೇಲೆ ಮಸೂದೆ ಮಂಡಿಸಲು ತುದಿಗಾಲಲ್ಲಿ ಕಾದು ಕುಳಿತಿರುವ ಬಿಜೆಪಿ ಪಕ್ಷಕ್ಕೆ ಭರ್ಜರಿ ಗುಡ್ ನ್ಯೂಸ್ !

ಅಮಿತ್ ಶಾ ಆಟ ಈಗ ಶುರು ! ಮಸೂದೆಗಳ ಮೇಲೆ ಮಸೂದೆ ಮಂಡಿಸಲು ತುದಿಗಾಲಲ್ಲಿ ಕಾದು ಕುಳಿತಿರುವ ಬಿಜೆಪಿ ಪಕ್ಷಕ್ಕೆ ಭರ್ಜರಿ ಗುಡ್ ನ್ಯೂಸ್ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಿಜೆಪಿ ಪಕ್ಷ ಎರಡನೇ ಬಾರಿ ಅಧಿಕಾರಕ್ಕೆ ಏರಿದ ಮೇಲೆ ಬಾರಿ ವೇಗವಾಗಿ ತನ್ನ ಭರವಸೆಗಳನ್ನು ಈಡೇರಿಸುತ್ತಿದೆ. ಪ್ರಣಾಳಿಕೆಯಲ್ಲಿ ನಮೂದಿಸಿರುವ ಪ್ರತಿಯೊಂದು ಭರವಸೆಗಳನ್ನು ಈಡೇರಿಸುತ್ತಾ ಮುಂದೆ ಸಾಗುತ್ತಿದ್ದ ಬಿಜೆಪಿ ಓಟಕ್ಕೆ ಕೊರೋನ ಪರಿಣಾಮದಿಂದ ಸ್ವಲ್ಪ ಬ್ರೇಕ್ ಬಿದ್ದಿದೆ, ಆದರೆ ಕಂಡಿತ ಕೋರೋನ ಮುಗಿದಮೇಲೆ ಬಿಜೆಪಿ ಪಕ್ಷ ತನ್ನ ವೇಗದ ಓಟವನ್ನು ಮತ್ತೊಮ್ಮೆ ಆರಂಭಿಸುವುದರ ಲ್ಲಿ ಯಾವುದೇ ಅನುಮಾನವಿಲ್ಲ.

ಈಗಾಗಲೇ ಹಲವಾರು ಮಹತ್ವದ ಮಸೂದೆಗಳನ್ನು ಮಂಡಿಸಿರುವ ಬಿಜೆಪಿ ಪಕ್ಷವು ಇನ್ನು ತನ್ನ ತೆಕ್ಕೆಯಲ್ಲಿ ಹಲವಾರು ಪ್ರಮುಖ ಮಸೂದೆಗಳನ್ನು ಇಟ್ಟುಕೊಂಡಿದೆ. ಖಂಡಿತವಾಗಲೂ ಈ ಮಸೂದೆಗಳು ದೇಶದ ಮೂಲೆ ಮೂಲೆಯಲ್ಲಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಈ ಮಸೂದೆಗಳಿಗೆ ಇಷ್ಟು ದಿವಸ ಅಡ್ಡಗಲಾಗಿದ್ದು ರಾಜ್ಯಸಭೆ. ಹೌದು ಲೋಕಸಭೆಯಲ್ಲಿ ಬಹುಮತ ಹೊಂದಿದ್ದರೂ ಕೂಡ ರಾಜ್ಯಸಭೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ಇರಲಿಲ್ಲ.

ಆದರೆ ಇದೀಗ ದೇಶದ ಎಲ್ಲೆಡೆ ರಾಜ್ಯ ಸಭಾ ಚುನಾವಣೆಗಳು ನಡೆದಿದ್ದು 55 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 18 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಹೊರಬಿದ್ದಿದೆ. ಈ ಫಲಿತಾಂಶದ ಮೂಲಕ ಬಿಜೆಪಿ ಮೊದಲ ಬಾರಿಗೆ ನೂರರ ಗಡಿ ದಾಟಿದ್ದು, ಒಟ್ಟಾಗಿ 101 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಇತರ ಎನ್ಡಿಎ ಪಕ್ಷಗಳಿಂದ 22 ಸ್ಥಾನಗಳು ಸಿಗುತ್ತವೆ. ಆದ ಕಾರಣದಿಂದ ಬಿಜೆಪಿ ಪಕ್ಷ ರಾಜ್ಯಸಭೆಯಲ್ಲಿ ಪ್ರತಿಬಾರಿಯೂ ಬಹುಮತ ಗಳಿಸುವುದು ಖಚಿತವಾಗಿದೆ. ಈ ಮೂಲಕ ಯಾವುದೇ ಮಸೂದೆಯನ್ನು ಮಂಡಿಸಿ ಗೆಲುವು ಸಾಧಿಸುವುದು ಪಕ್ಕಾ ಆಗಿದೆ.