ಇದೀಗ ರೈಲ್ವೆ ಇಲಾಖೆಯ ಸರದಿ ! ಚೀನಾ ಕಂಪನಿಗೆ ಮತ್ತೊಂದು ಶಾಕ್ ನೀಡಿದ ರೈಲ್ವೆ ಇಲಾಖೆ ! ಏನು ಗೊತ್ತಾ?

ಇದೀಗ ರೈಲ್ವೆ ಇಲಾಖೆಯ ಸರದಿ ! ಚೀನಾ ಕಂಪನಿಗೆ ಮತ್ತೊಂದು ಶಾಕ್ ನೀಡಿದ ರೈಲ್ವೆ ಇಲಾಖೆ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಹಾಗೂ ಚೀನಾ ಗಡಿ ಕ್ಷಣಕ್ಷಣಕ್ಕೂ ಕಾವೇರುತ್ತಿದೆ. ಎರಡು ಸಶಸ್ತ್ರ ಪಡೆಗಳು ಗಡಿಯಲ್ಲಿ ಜಮಾವಣೆಗೊಳುತ್ತಿವೆ. ಹೀಗಿರುವಾಗ ಭಾರತದಲ್ಲಿ ಮತ್ತೊಮ್ಮೆ ಸ್ವದೇಶಿ ವಸ್ತುಗಳನ್ನು ಬಳಸುವ ಕೂಗು ಬಾರಿ ಜೋರಾಗಿ ಕೇಳಿಬರುತ್ತಿದೆ.

ಚೀನಾ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿ ಎಂದು ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ, ಹಾಗಿದ್ದರೆ ಸರ್ಕಾರವೇ ಮಾಡಬಹುದಲ್ಲ ಎಂಬ ಪ್ರಶ್ನೆಗಳು ಕೂಡ ಕೇಳಿಬರುತ್ತಿವೆ. ಇಂತಹ ಸಂದರ್ಭದಲ್ಲಿ ಈಗಾಗಲೇ ಬೆಳ್ಳಂಬೆಳಗ್ಗೆ ಭಾರತೀಯ ಟೆಲಿಕಾಂ ಕಂಪನಿಗಳಿಗೆ ಚೀನಾ ದೇಶದ ಕಂಪನಿಗಳ ಜೊತೆ ನಡೆದ ಒಪ್ಪಂದವನ್ನು ರದ್ದುಗೊಳಿಸಿ, ದೇಶಿಯ ವಸ್ತುಗಳನ್ನು ಬಳಸಿಕೊಂಡು ಎಲ್ಲಾ ನೆಟ್ವರ್ಕ್ ರೂಪಾಂತರ ಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಇದರ ಬೆನ್ನಲ್ಲೇ ರೈಲ್ವೆ ಇಲಾಖೆ ಕೂಡ ಇದೇ ರೀತಿಯ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದು, ಮಹತ್ವದ ಆದೇಶ ಹೊರಡಿಸಿದೆ.

ಹೌದು ಸ್ನೇಹಿತರೇ, ಕಳೆದ 2016ರಲ್ಲಿ ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಅಂಡ್ ಡಿಸೈನ್ ಇನ್ಸ್ಟಿಟ್ಯೂಟ್ ಆಫ್ ಸಿಗ್ನಲ್ ಅಂಡ್ ಕಮ್ಯುನಿಕೇಶನ್ ಗ್ರೂಪ್ ಕಂಪನಿಯ ಜೊತೆ ಭಾರತೀಯ ರೈಲ್ವೆ 471 ಕೋಟಿ ರೂ ಮೌಲ್ಯದ ಒಪ್ಪಂದದ ಮಾಡಿಕೊಂಡಿತ್ತು. ಇದೀಗ ಕಂಪನಿಯು ನಿಧಾನವಾಗಿ ಕೆಲಸ ಮುಗಿಸಿ ಕೊಡುತ್ತಿದೆ, ಒಪ್ಪಂದದ ಪ್ರಕಾರ ಅವಧಿಗಳಲ್ಲಿ ಕೆಲಸ ಮುಗಿಸಲು ಚೀನಾ ಕಂಪನಿ ವಿಫಲವಾಗಿದೆ ಎಂದು ಕಂಪನಿಯ ಜೊತೆ ಯಾವುದೇ ಮಾತುಕತೆ ನಡೆಸದೇ ಭಾರತೀಯ ರೈಲ್ವೆ ಅಧಿಸೂಚನೆ ಹೊರಡಿಸಿ ಒಪ್ಪಂದವನ್ನು ರದ್ದುಗೊಳಿಸಿದೆ. ಕ್ಷಣಕ್ಷಣಕ್ಕೂ ಸ್ವದೇಶಿ ಭಾರತದ ಕೂಗು ಹೆಚ್ಚಾಗುತ್ತಿದ್ದು, ಎಲ್ಲರೂ ಸ್ವದೇಶಿ ವಸ್ತುಗಳತ್ತ ಗಮನ ಹರಿಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.