ವಾಯುಸೇನೆ ಹಾಗೂ ಭೂಸೇನೆ ಗಳಿಗೆ ಆನೆ ಬಲ ತುಂಬಲು ಮುಂದಾದ ಭಾರತ ! ನಡೆಯುತ್ತಿವೆ 2 ಮಹತ್ವದ ಒಪ್ಪಂದಗಳು !

ನಮಸ್ಕಾರ ಸ್ನೇಹಿತರೇ, ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವಿನ ಕಾವು ಏರತೊಡಗಿದಂತೆ ಭಾರತ ದೇಶವು ಮುಂದಿನ ದಿನಗಳಿಗಾಗಿ ಭರ್ಜರಿ ಸಿದ್ದತೆ ನಡೆಸಿದೆ. ಈ ಒಪ್ಪಂದದ ಫಲಿತಾಂಶ ಈಗ ಕಾಣಿಸುವುದಿಲ್ಲವಾದರೂ ಮುಂದಿನ ಕೆಲವು ವರ್ಷಗಳಲ್ಲಿ ಖಂಡಿತ ಭಾರಿ ಪರಿಣಾಮ ಬೀರಿಲಿದೆ ಎಂಬುದು ಸುಳ್ಳಲ್ಲ.

ಹೌದು ಸ್ನೇಹಿತರೇ ಇದೀಗ ರಷ್ಯಾ ಮಾಧ್ಯಮಗಳ ವರದಿಯ ಪ್ರಕಾರ ಭಾರತ ದೇಶವು ವಿಶ್ವದಲ್ಲಿಯೇ ಅತ್ಯಂತ ಬಲಶಾಲಿ ಟ್ಯಾಂಕರ್ ಗಳಲ್ಲಿ ಒಂದಾಗಿರುವ ರಷ್ಯಾ ದೇಶದ ಟಿ-90 ಎಸ್ ಟ್ಯಾಂಕರ್ ಗಳನ್ನು ಖರೀದಿಸಲು ಮುಂದಾಗಿದ್ದು ಬರೋಬ್ಬರಿ 400 ಟ್ಯಾಂಕರ್ ಗಳಿಗಾಗಿ ಬೇಡಿಕೆ ಇಟ್ಟಿದೆ. ಈ ಯುದ್ಧ ಟ್ಯಾಂಕರ್ ಗಳು ಹೆಚ್ಚಿನ ವರ್ಷ ಬದುಕುಳಿಯುವ ಸಾಮರ್ಥ್ಯ, ಕಡಿಮೆ ಕಾರ್ಯಾಚರಣೆಯ ವೆಚ್ಚ ಮತ್ತು ಕ್ಷಣಮಾತ್ರ ಗಳಲ್ಲಿ ಟಾರ್ಗೆಟ್ ಅನ್ನು ಮುಗಿಸಿ ಬಿಡುವುದರಲ್ಲಿ ಪ್ರಸಿದ್ಧವಾಗಿದೆ. ಇಷ್ಟೇ ಅಲ್ಲದೆ ಭಾರತ ದೇಶವು ವಾಯುಪಡೆಗೆ ಬಲತುಂಬಲು ಮುಂದಾಗಿದ್ದು ವಾಯುಸೇನೆ ಹೊಸ ಪ್ರಸ್ತಾಪ ಮಂಡಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಸ್ವದೇಶಿ ಭಾರತಕ್ಕೆ ಬೆಂಬಲ ನೀಡಬೇಕು ಎಂಬ ಕಾರಣದಿಂದ ಹಲವಾರು ಒಪ್ಪಂದಗಳನ್ನು ರದ್ದು ಮಾಡಿದ್ದ ವಾಯುಪಡೆಯು ಇದೀಗ ಸಂಕಷ್ಟದ ಪರಿಸ್ಥಿತಿಯಲ್ಲಿ ಇತರ ದೇಶಗಳಿಂದ ಆಮದು ಮಾಡಿ ಕೊಳ್ಳಲೇಬೇಕು ಎಂದು ಆಲೋಚನೆ ಮಾಡಿ 21 ಮಿಗ್-29 ಯುದ್ಧ ವಿಮಾನಗಳು ಸೇರಿದಂತೆ 12 ಸುಖೋಯ್ ಯುದ್ಧ ವಿಮಾನಗಳನ್ನು ರಷ್ಯಾ ದೇಶದಿಂದ ಆಮದು ಮಾಡಿಕೊಳ್ಳಲು ವಾಯುಸೇನೆಯು ಬಿಪಿನ್ ರಾವತ್ ರವರ ಬಳಿ ಪ್ರಸ್ತಾವ ಮಂಡಿಸಿದೆ. ಇನ್ನು ಈ ಒಪ್ಪಂದಕ್ಕೆ ಕೇಂದ್ರ ಹಲವಾರು ತಿಂಗಳುಗಳ ಹಿಂದೆಯೇ ಒಪ್ಪಿಗೆ ನೀಡಿತ್ತು, ಆದರೆ ವಾಯುಸೇನೆಯೇ ಸ್ವದೇಶೀ ಭಾರತಕ್ಕೆ ನಮ್ಮ ಕೊಡುಗೆ ಇರಲಿ ಎಂದು ಬೇಡ ಎಂದಿತ್ತು. ಇದೀಗ ವಾಯುಪಡೆಯೇ ಮುಂದೆ ಬಂದಿರುವ ಕಾರಣ ಖಂಡಿತ ಒಪ್ಪಂದಕ್ಕೆ ಹಸಿರು ನಿಶಾನೆ ತೋರುವುದು ಖಚಿತವಾಗಿದ್ದು ವಾಯುಪಡೆ ಮತ್ತಷ್ಟು ಬಲಿಷ್ಠವಾಗಲಿದೆ.

Post Author: Ravi Yadav