ಚೀನಾಗೆ ಮರ್ಮಘಾತ ! ಸೈನಿಕರ ರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟ ಮೋದಿ ! ಅಖಾಡಕ್ಕೆ ಟ್ರಂಪ್ ನೌಕಾ ಪಡೆ ! ನಡೆಯುತ್ತಿರುವುದು ಏನು ಗೊತ್ತಾ?

ಚೀನಾಗೆ ಮರ್ಮಘಾತ ! ಸೈನಿಕರ ರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟ ಮೋದಿ ! ಅಖಾಡಕ್ಕೆ ಟ್ರಂಪ್ ನೌಕಾ ಪಡೆ ! ನಡೆಯುತ್ತಿರುವುದು ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಹಾಗೂ ಚೀನಾ ಗಡಿಯಲ್ಲಿ ಪರಿಸ್ಥಿತಿಯ ಕಾವು ಏರತೊಡಗಿದೆ. ಯಾವುದೇ ಕಾರಣಕ್ಕೂ ಒಂದು ಹೆಜ್ಜೆ ಕೂಡ ಹಿಂದೆ ಸರಿಯುವುದಿಲ್ಲ ಎಂದು ಭಾರತೀಯ ಸೇನೆ ಸಿದ್ಧವಾಗಿ ನಿಂತಿದೆ. ಇನ್ನು ಚೀನಾ ದೇಶಕ್ಕೆ ಇದು ಪ್ರತಿಷ್ಠೆಯ ಕಣವಾಗಿ ಇರುವುದು ಸುಳ್ಳಲ್ಲ.

ಇದೇ ಕಾರಣಕ್ಕಾಗಿ ಒಂದು ಕಡೆ ಚೀನಾ ದೇಶವು ಗಡಿಯಲ್ಲಿ ಸುಖಾ ಸುಮ್ಮನೆ ಟ್ರಕ್ಗಳ ಮೂಲಕ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸುತ್ತದೆ, ಭಾರತ ಕೂಡ ಹಿಂದೆ ಸರಿಯುವುದಿಲ್ಲ ಎಂಬ ಗಟ್ಟಿತನದಿಂದ ತಾನು ಕೂಡ ಸೈನಿಕರ ಜಮಾವಣೆ ಯಲ್ಲಿ ನಿರತರಾಗಿದೆ. ಹೀಗಿರುವಾಗ ನರೇಂದ್ರ ಮೋದಿರವರು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ, ಚೀನಾ ಸೈನಿಕರು ರಾಡ್ ಹಾಗೂ ಕಲ್ಲು ಬಳಸುತ್ತಿರುವ ಕಾರಣ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳಿಂದ ಯಾವುದೇ ಲಾಭ ವಾಗಿರಲಿಲ್ಲ. ಇದನ್ನು ಗಮನಿಸಿರುವ ನರೇಂದ್ರ ಮೋದಿರವರು ವಿಶೇಷ ರಕ್ಷಣಾ ಕವಚವನ್ನು ಇದೀಗ ಗಡಿಯಲ್ಲಿನ ಸೈನಿಕರಿಗೆ ರವಾನಿಸಿದ್ದಾರೆ.

ಭಾರತದ ಈ ನಡೆಯ ಮಧ್ಯೆ ಇಂಡೋ ಪೆಸಿಫಿಕ್ ಸಾಗರದಲ್ಲಿ ಟ್ರಂಪ್ ರವರ ಹೆಜ್ಜೆ ಭಾರಿ ಕುತೂಹಲ ಕೆರಳಿಸಿದೆ. ಇದು ಚೀನಾ ದೇಶಕ್ಕೆ ಬಿಗ್ ಶಾಕ್ ನೀಡಿರುವುದು ಸುಳ್ಳಲ್ಲ. ತನ್ನ ಹನ್ನೊಂದು ಅಣ್ವಸ್ತ್ರ ನೌಕೆಗಳ ಪೈಕಿ ಮೂರು ಹಡಗನ್ನು ಅಮೆರಿಕ ನೌಕಾಪಡೆ ಇಂಡೋ ಪೆಸಿಫಿಕ್ ಸಾಗರದಲ್ಲಿ ನಿಯೋಜನೆ ಮಾಡಿದೆ.

ಕಾರಣ ಕೇಳಿದರೆ ಅಧ್ಯಕ್ಷ ಟ್ರಂಪ್ ರವರು ಮಿತ್ರರಿಗೆ ಸಹಾಯ ಸೂಚಿಸಲು ಎಂಬ ಕಾರಣ ಮಾತ್ರ ಹೇಳಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಆದರೆ ಭಾರತಕ್ಕಾಗಿಯೇ ಅಥವಾ ತೈವನ್ ಗಾಗಿಯೇ ಎಂಬ ಸೂಚನೆ ಬಿಟ್ಟುಕೊಟ್ಟಿಲ್ಲ. ಮತ್ತೊಂದೆಡೆ ನಿನ್ನೆ ತೈವಾನ್ ದೇಶವು ಕೂಡ ಭಾರತದ ಪರವಾಗಿ ಧ್ವನಿಯೆತ್ತಿದ್ದನ್ನು ನಾವು ಇಲ್ಲಿ ನೋಡಬಹುದು, ಈ ಪರಿಸ್ಥಿತಿಯಲ್ಲಿ ಚೀನಾ ದೇಶಕ್ಕೆ ಸವಾಲಿನ ಮೇಲೆ ಸವಾಲುಗಳು ಎದುರಾಗುತ್ತಿದ್ದು ಭಾರತ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂಬ ಮಾತನ್ನು ಪುನರುಚ್ಚರಿಸಿ ಗಡಿಯಲ್ಲಿ ಮೂರು ಪಡೆಗಳನ್ನು ಪ್ರತಿಯೊಂದು ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವಂತೆ ಆದೇಶ ನೀಡಿದೆ.