ಬೆಳ್ಳಂ ಬೆಳಗ್ಗೆ ಭಾರತಕ್ಕೆ ಭರ್ಜರಿ ಸಿಹಿಸುದ್ದಿ ! ವಿಶ್ವಸಂಸ್ಥೆಯಲ್ಲಿ ಬಾರಿ ಗೆಲುವು !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐದು ಖಾಯಂ ಸದಸ್ಯರು ಮತ್ತು 10 ತಾತ್ಕಾಲಿಕ ಸದಸ್ಯರು ಇರುತ್ತಾರೆ. ಪ್ರತಿ ವರ್ಷವೂ ಮತದಾನ ಮಾಡುವ ಮೂಲಕ ತಾತ್ಕಾಲಿಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಏಷ್ಯಾ – ಪೆಸಿಫಿಕ್ ವಿಭಾಗದಿಂದ ಭಾರತ ದೇಶವು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಇದೀಗ ನಡೆದ ಚುನಾವಣೆಯಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರಾಗಲು ಭಾರತಕ್ಕೆ 192 ಮತಗಳಲ್ಲಿ 128 ಮತಗಳ ಅವಶ್ಯಕತೆ ಇತ್ತು, ಆದರೆ 184 ದೇಶಗಳು ಭಾರತದ ಪರವಾಗಿ ಮತ ಚಲಾಯಿಸುವ ಮೂಲಕ ಭಾರತ ಗೆದ್ದು ಬೀಗಿದೆ. ಇನ್ನು ಒಂದು ವರ್ಷಗಳ ಕಾಲ ಭಾರತ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಗಲಿದೆ. ಈ ಬಾರಿ ಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ ಭಾರತ ಎಂಟನೇ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗಿ ಹೊರಹೊಮ್ಮಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಭಾರತ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಾಗ ಆಫ್ಘಾನಿಸ್ತಾನ ಭಾರತದ ವಿರುದ್ಧ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹಿಂದೆ ಸರಿದು ಭಾರತಕ್ಕೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ಇದೇ ಸಮಯದಲ್ಲಿ ಮಾತನಾಡಿದ ಭಾರತೀಯ ರಾಯಭಾರಿ ತಿರುಮೂರ್ತಿ ರವರು, ಇನ್ನೂ ಒಂದು ವರ್ಷ ಭಾರತ ದೇಶವು ಐದು ಖಾಯಂ ಸದಸ್ಯರು ಹಾಗೂ ಅದು ತಾತ್ಕಾಲಿಕ ಸದಸ್ಯರ ಜೊತೆ ವಿಶ್ವದ ಪ್ರತಿಯೊಂದು ಸವಾಲುಗಳು ಹಾಗೂ ಮುಂದಿನ ಭವಿಷ್ಯದ ಬಗ್ಗೆ ಧ್ವನಿಯೆತ್ತುವುದಾಗಿ ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದ ಸದಸ್ಯತ್ವಕ್ಕಾಗಿ ಈ ಚುನಾವಣೆ ನಡೆದಿದ್ದು, ಭಾರತ ದೇಶವು ಮುಂದಿನ ಜನವರಿ ತಿಂಗಳಲ್ಲಿ ದಶಕಗಳ ಬಳಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಕಾಲಿಡಲಿದೆ.

Post Author: Ravi Yadav