ಚೀನಾ ಗೆ ಗಾಲ್ವಾನ್ ಘಟನೆ ನಂತರ ಮೊದಲ ಗುದ್ದು ! ಆಟ ಆರಂಭಿಸಿದ ಮೋದಿ-ಶಾ ಜೋಡಿ ! ಏನು ಗೊತ್ತಾ?

ಚೀನಾ ಗೆ ಗಾಲ್ವಾನ್ ಘಟನೆ ನಂತರ ಮೊದಲ ಗುದ್ದು ! ಆಟ ಆರಂಭಿಸಿದ ಮೋದಿ-ಶಾ ಜೋಡಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಅಂದು ಹೇಳಿದ್ದೇವೆ, ಇಂದು ಹೇಳುತ್ತಿದ್ದೇವೆ, ಮುಂದೇನು ಹೇಳುತ್ತಲೇ ಇರುತ್ತೇವೆ. ಇದೀಗ ಗೆಲ್ಲಬೇಕಾಗಿರುವುದು, ಯಾವುದೇ ರಾಜಕೀಯ ನಾಯಕನಲ್ಲ, ಯಾವುದೇ ವಿಪಕ್ಷ ನಾಯಕನಲ್ಲ ಬದಲಾಗಿ ದೇಶ ಅದುವೇ ಸ್ವದೇಶೀ ಭಾರತ. ಅದುವೇ ನಮ್ಮ ನಿಮ್ಮೆಲ್ಲರ ಗುರಿಯಾಗಿರಲಿ.

ಸ್ನೇಹಿತರೇ, ಇದೀಗ ನಿಮಗೆ ತಿಳಿದಿರುವಂತೆ ಭಾರತ ಗಡಿಯಲ್ಲಿ ಅಭಿವೃದ್ಧಿ ಕೆಲಸಗಳು, ಆತ್ಮ ನಿರ್ಧಾರ ಭಾರತ ಹಾಗೂ ಇತರ ದೇಶಗಳ ಜೊತೆ ಮಿಲಿಟರಿ ಲಾಜಿಸ್ಟಿಕ್ಸ್ ಒಪ್ಪಂದ ಮಾಡಿಕೊಂಡು ಚೀನಾ ದೇಶವನ್ನು ಸುತ್ತುವರೆಯುವ ಮೋದಿಯವರ ನಿರ್ಧಾರದಿಂದ ಚೀನಾ ದೇಶ ಕಂಗಾಲಾಗಿದೆ. ಅದೇ ಕಾರಣಕ್ಕೆ ಗಡಿಯಲ್ಲಿ ಖ್ಯಾತೆ ತೆಗೆಯಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸುದ್ದಿಯನ್ನು ಚೀನಾ ದೇಶ ದಲ್ಲಿನ ಮಾಧ್ಯಮಗಳೇ ಬಹಿರಂಗ ಗೊಳಿಸಿವೆ.

ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲಿ ಮೂಡುತ್ತಿರುವ ಪ್ರಶ್ನೆ ಏನೇಂದರೆ ನೇರವಾಗಿ ಕೇಂದ್ರವೇ ಯಾಕೆ ಚೀನಾ ವಸ್ತುಗಳನ್ನು ಆಮದು ನಿಲ್ಲಿಸಬಾರದು?. ಆದರೆ ಕೇಂದ್ರ ಸರ್ಕಾರ ಏಕಾಏಕಿ ಯಾವುದೇ ಒಂದು ದೇಶದ ಜೊತೆ ಕಿಂಚಿತ್ತೂ ವ್ಯಾಪಾರ ಮಾಡುವುದಿಲ್ಲ ಎಂದು ಆದೇಶ ಹೊರಡಿಸಲು ಸಾಧ್ಯವಿಲ್ಲ, ಯಾಕೆಂದರೆ ಹಾಗೇ ಮಾಡಿದರೇ ಎರಡು ದೇಶಗಳ ನಡುವಿನ ರಾಜತಾಂತ್ರಿಕತೆ ಸಂಪೂರ್ಣ ಕಡಿತಕೊಳ್ಳುತ್ತದೆ, ಇದು ಸಾಮಾನ್ಯವಾಗಿ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೇ, ಬಹುತೇಕ ಕಚ್ಚಾ ವಸ್ತುಗಳು ಹಾಗೂ ಬಹಳ ಅತ್ಯಗತ್ಯವಾಗಿರುವ ವಸ್ತುಗಳು ಚೀನಾ ದೇಶದಿಂದ ಆಮದು ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿಯಲ್ಲಿ ಭಾರತ ಇದೆ.

ಆದರೆ ಖಂಡಿತವಾಗಲೂ ನಾವು ಒಮ್ಮೆಲೆ ನಿಲ್ಲಿಸದೇ ಇದ್ದರೂ ಕೂಡ ಪ್ರತಿದಿನವೂ ಒಂದೊಂದು ವಸ್ತುಗಳನ್ನು ಭಾರತದಲ್ಲಿಯೇ ತಯಾರಿಸುತ್ತಾ, ಚೀನಾ ದೇಶದ ವಸ್ತುಗಳನ್ನು ಒಂದು ದಿನ ಬಹಳ ಸುಲಭವಾಗಿ ನಿಲ್ಲಿಸಬಹುದು. ಖಂಡಿತ ಅದಕ್ಕೆ ಕಾಲಾವಕಾಶ ಬೇಕು, ಆದರೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಕೂಡ ಅತ್ಯಗತ್ಯ. ಹೀಗಿರುವಾಗ ಕೇಂದ್ರವು ರಾಜತಾಂತ್ರಿಕ ಒಪ್ಪಂದಗಳನ್ನು ಪಕ್ಕಕ್ಕಿಟ್ಟು ಮೊದಲ ಅಧಿಕೃತ ಘೋಷಣೆ ಮಾಡಿದೆ.

ಹೌದು ಸ್ನೇಹಿತರೇ, ಇದೀಗ ಗಡಿಗಳಲ್ಲಿ ನಡೆಯುತ್ತಿರುವ ಘಟನೆಗಳಿಂದ ಕೇಂದ್ರ ಸರ್ಕಾರ ಕಠಿಣ ನಿಲುವನ್ನು ತೆಗೆದುಕೊಳ್ಳುವ ಸಂದರ್ಭ ಎದುರಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡು, ಕೇಂದ್ರದ ಅಧೀನದಲ್ಲಿರುವ ಬಿಎಸ್ಸೆನ್ನೆಲ್ ಸಂಸ್ಥೆ, ನಿಮಗೆಲ್ಲರಿಗೂ ತಿಳಿದಿರುವಂತೆ 4G ಸೇವೆಯನ್ನು ಆರಂಭಿಸುವ ನಿಟ್ಟಿನಲ್ಲಿ ಕಾರ್ಯ ನಿರತವಾಗಿದೆ. ಇದಕ್ಕಾಗಿ ಕೋಟ್ಯಾಂತರ ರೂ ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಪ್ರತಿಯೊಂದು ವಸ್ತುಗಳು ಭಾರತದಲ್ಲಿ ತಯಾರಿರಬೇಕು ಎಂಬ ಆದೇಶವನ್ನು ಕೇಂದ್ರ ಹೊರಡಿಸಿದೆ. ಇದು ಕೇಂದ್ರ ಸರಕಾರದಿಂದ ಅಧಿಕೃತವಾಗಿ ಘೋಷಣೆಯಾದ ಮೊದಲ ಆದೇಶವಾಗಿದೆ. ಈಗಾಗಲೇ ವಿದೇಶಿ ಕಂಪನಿ ಗಳ ಜೊತೆ ನಡೆದಿರುವ ಟೆಂಡರ್ ಗಳನ್ನೂ ಕೂಡ ವಾಪಸ್ಸು ತೆಗೆದುಕೊಳ್ಳುವಂತೆ ಸೂಚಿಸಿದೆ.