ಬಿಗ್ ಬ್ರೇಕಿಂಗ್: ಭಾರತ-ಚೀನಾ ಗಡಿಯ ಕಾವು ಏರಿರುವಾಗ ಪಾಕ್ ಹುಚ್ಚಾಟಕ್ಕೆ ಕೈ ಹಾಕಲಿದೆಯೇ? ನಡೆಯುತ್ತಿರುವುದಾದರೂ ಏನು ಗೊತ್ತಾ?

ಬಿಗ್ ಬ್ರೇಕಿಂಗ್: ಭಾರತ-ಚೀನಾ ಗಡಿಯ ಕಾವು ಏರಿರುವಾಗ ಪಾಕ್ ಹುಚ್ಚಾಟಕ್ಕೆ ಕೈ ಹಾಕಲಿದೆಯೇ? ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ಚೀನಾ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಆಗಿದೆ. ಒಂದೆಡೆ ಚೀನಾ ದೇಶವು ಸೇನಾ ಜಮಾವಣೆ ಹೆಚ್ಚು ಮಾಡಿದರೇ ಭಾರತ ದೇಶ ಕೂಡ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೆಲಿಕ್ಯಾಫ್ಟರುಗಳು, ಫೈಟರ್ ಜೆಟ್ ಗಳು ಸೇರಿದಂತೆ ಭೂಸೇನೆಯನ್ನು ಭಾರಿ ಸಂಖ್ಯೆಯಲ್ಲಿ ಜಮಾವಣೆ ಮಾಡುತ್ತಿದೆ.

ಚೀನಾ ವಿದೇಶಾಂಗ ಸಚಿವಾಲಯದ ಜೊತೆ ಮಾತುಕತೆ ಕೂಡ ನಡೆದಿದ್ದು ಸಭೆಯಿಂದ ಯಾವುದೇ ಲಾಭವಾಗಿಲ್ಲ, ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರು ಸಭೆಯಲ್ಲಿ ಚೀನಾ ದೇಶ ಪೂರ್ವ ನಿಯೋಜಿತವಾಗಿ ಈ ಪ್ಲಾನ್ ಮಾಡಿದೆ, ಯಾವುದಕ್ಕೂ ಈ ರೀತಿಯ ನಡವಳಿಕೆಗಳನ್ನು ಭಾರತ ಸಹಿಸಿಕೊಳ್ಳುವುದಿಲ್ಲ. ಇದರಿಂದ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ. ಆದರೆ ಭಾರತದ ಮಾತುಗಳನ್ನು ಚೀನಾ ದೇಶ ಒಪ್ಪಲು ಸಿದ್ಧವಾಗಿರದ ಕಾರಣ ಸಭೆಯಿಂದ ಯಾವುದೇ ಲಾಭವಾಗಿಲ್ಲ. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಬಾಲ ಬಿಚ್ಚುವ ಸೂಚನೆ ನೀಡಿದೆ.

ಹೌದು, ಇದೀಗ ಬಂದ ಅಧಿಕೃತ ಮಾಹಿತಿಗಳ ಪ್ರಕಾರ ಪಾಕಿಸ್ತಾನದ ಸೇನೆಯ ಚಟುವಟಿಕೆಯು ಬಾರಿ ತೀವ್ರಗೊಂಡಿದೆ. ಪಾಕಿಸ್ತಾನದ ಐಎಸ್ಐ ಕೇಂದ್ರ ಕಚೇರಿಯಲ್ಲಿ ಪಾಕ್ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಮೇಜರ್ ಜನರಲ್ ಬೆಜ್ವ ರವರು ಹಾಜರಾಗಿದ್ದು, ಸಾಮಾನ್ಯವಾಗಿ ಈ ರೀತಿಯ ಸಭೆಗಳು ಪಾಕಿಸ್ತಾನದಲ್ಲಿ ಐಎಸ್ಐ ಕೇಂದ್ರ ಕಚೇರಿಯಲ್ಲಿ ನಡೆಯುವುದಿಲ್ಲ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಲಷ್ಕರ್ ನಾಯಕರು ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದನ್ನು ಕಂಡ ಪಾಕ್ ಮಾಧ್ಯಮಗಳು ಮಹತ್ವದ ಕಾರ್ಯಾಚರಣೆ ನಡೆಯುತ್ತದೆ ಎಂದು ಸುದ್ದಿ ಪ್ರಸಾರ ಮಾಡಿವೆ.