ಭೀಷ್ಮ ನೀತಿ: ಮಹಿಳೆಯರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಪಾಲಿಸಬೇಕಾದ ಭೀಷ್ಮ ನೀತಿಯ ವಿವರಣೆ !

ಭೀಷ್ಮ ನೀತಿ: ಮಹಿಳೆಯರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಪಾಲಿಸಬೇಕಾದ ಭೀಷ್ಮ ನೀತಿಯ ವಿವರಣೆ !

ನಮಸ್ಕಾರ ಸ್ನೇಹಿತರೇ, ಮಹಾ ಭಾರತದ ಭೀಷ್ಮ ಪಿತಾಮಹರು ಯಾವ ರೀತಿಯ ಪರಾಕ್ರಮಿ ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ತತ್ವಜ್ಞಾನಿಯಾಗಿ ಹಾಗೂ ನುರಿತ ತಜ್ಞರು ಆಗಿದ್ದ ಭೀಷ್ಮರು ಬಹಳ ದೊಡ್ಡ ದೃಷ್ಟಿಯನ್ನು ಹೊಂದಿದ್ದರು. ಇನ್ನು ಮಹಾಭಾರತ ಯುದ್ಧದಲ್ಲಿಯು ಕೂಡ ತನಗೆ ವಯಸ್ಸಾಗಿದೆ ಎಂಬುದು ಕೇವಲ ಸಂಖ್ಯೆ ನೋಡಿ ಹೇಳಲಾಗುತ್ತಿದೆ ಎಂಬಂತೆ ಪರಾಕ್ರಮ ಮೆರೆದಿದ್ದರು.

ಆದರೆ ಕೊನೆಯಲ್ಲಿ ಧರ್ಮ ಹಾಗೂ ಅಧರ್ಮಗಳ ನಡುವಿನ ಯುದ್ಧದಲ್ಲಿ ಭೀಷ್ಮರವರು ಸೋತಿದ್ದರು. ಹೀಗೆ ಸೋತು ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಸಂದರ್ಭದಲ್ಲಿ ಅವರು ಯುಧಿಷ್ಠಿರನಿಗೆ ಹಲವಾರು ನೀತಿಗಳನ್ನು ತಿಳಿಸುತ್ತಾರೆ. ಈ ನೀತಿಗಳು ಭೀಷ್ಮ ನೀತಿಗಳು ಎಂದೇ ಪ್ರಸಿದ್ಧಿ ಪಡೆದುಕೊಂಡಿವೆ. ಇದೇ ಸಂದರ್ಭದಲ್ಲಿ ಭೀಷ್ಮ ರವರು ಮಹಿಳೆಯರ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ. ಅವರ ಮಾತುಗಳು ಕೇಳಿದರೇ ಖಂಡಿತ ಜೀವನಕ್ಕೊಂದು ಪಾಠ ಸಿಗುವುದು ಖಚಿತ.

ಮೊದಲನೇಯದಾಗಿ ಮಹಿಳೆಯರ ಸಬಲೀಕರಣ ಅತ್ಯಂತ ಮುಖ್ಯವಾದದ್ದು, ಮಹಿಳೆಯರಿಗೆ ಗೌರವ ಹಾಗೂ ಸಮಾಜದಲ್ಲಿ ಸಮಾನತೆಯ ಕುರಿತು ಧ್ವನಿಯೆತ್ತಬೇಕು ಹಾಗೂ ಪ್ರತಿಯೊಬ್ಬರೂ ಇದನ್ನು ಪಾಲಿಸಲೇಬೇಕು. ಮಹಾಭಾರತ ಯುದ್ಧಕ್ಕೆ ಪ್ರಮುಖ ಕಾರಣವೇನೆಂದರೆ ಅದು ಒಂದು ಮಹಿಳೆಯನ್ನು ಸಭೆಯಲ್ಲಿ ಅವಮಾನಿಸುವುದು ಎಂಬುದು ನಿಮಗೂ ನನಗೂ ಕೂಡ ತಿಳಿದಿದೆ ಎಂದರು.

ಇನ್ನು ಎರಡನೇ ವಿಷಯದಲ್ಲಿ ಮಹಿಳೆ ಎಲ್ಲಿ ಸಂತೋಷವಾಗಿರುತ್ತಾಳೋ ಖಂಡಿತ ಆ ಮನೆ ಹಾಗೂ ಆ ಸಾಮ್ರಾಜ್ಯ ಸಂತೋಷದಿಂದ ಕೂಡಿರುತ್ತದೆ. ಮಹಿಳೆ ಎಂದರೆ ಲಕ್ಷ್ಮಿಯ ರೂಪ, ಮಹಿಳೆ ತೃಪ್ತಿ ಹೊಂದಿದ ಮನೆಯಲ್ಲಿ ಮಹಿಳೆಯನ್ನು ಗೌರವಿಸಲಾಗುವುದಿಲ್ಲ. ಆದ್ದರಿಂದ ಅಲ್ಲಿ ಲಕ್ಷ್ಮಿಯಾಗಲಿ ಅಥವಾ ಇತರ ದೇವತೆ ಗಳಾಗಲಿ ನೆಲೆಸುವುದಿಲ್ಲ. ಅಂತಹ ಸ್ಥಳದಲ್ಲಿ ವಿವಾದ, ವ್ಯಂಗ್ಯ, ದುಃಖದ ಪ್ರಾಬಲ್ಯ ಗಳು ಎದ್ದುಕಾಣುತ್ತವೆ.

ಇನ್ನು ಮೂರನೆಯದಾಗಿ ಭೀಷ್ಮ ರವರ ನೀತಿಯ ಪ್ರಕಾರ ಮಗಳು, ಸೊಸೆ ತಾಯಿ ಮತ್ತು ಸಹೋದರಿ ಅಥವಾ ಇನ್ಯಾವುದೇ ಮಹಿಳೆಯರನ್ನಾಗಲಿ ಗೌರವಿಸಲೇಬೇಕು. ಅವರ ಹಕ್ಕುಗಳನ್ನು ಯಾರು ಉಲ್ಲಂಘನೆ ಮಾಡಬಾರದು, ಯಾಕೆಂದರೆ ಎಲ್ಲಿ ಮಹಿಳೆಯರನ್ನು ಗೌರವಿಸಲಾಗಿಸುತ್ತದೆಯೋ ಅಲ್ಲಿ ಅವರು ಬಲಶಾಲಿಯಾಗಿ ಇರುತ್ತಾರೆ. ಅಲ್ಲಿ ಎಲ್ಲಾ ದೇವತೆಗಳು ವಾಸಿಸಲು ಇಷ್ಟಪಡುತ್ತಾರೆ. ಮಹಿಳೆಯನ್ನು ಅವಮಾನಿಸುವ ಯಾವುದೇ ಕೆಲಸ ಪುರುಷರು ಮಾಡಬಾರದು, ಯಾಕೆಂದರೆ ಅವರ ಸಂಕಟವು ವಿನಾಶವನ್ನು ತರುತ್ತದೆ. ಇನ್ನು ಮಹಿಳೆ, ಮಗು, ಹುಡುಗಿ, ಹಸು, ಅಸಹಾಯಕ, ಬಾಯಾರಿದ, ಹಸಿದ, ರೋಗಿಯ, ತಪಸ್ವಿ ಮತ್ತು ಕೊನೆಯ ಕ್ಷಣಗಳನ್ನು ಎಣಿಸುತ್ತಿರುವ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಕಿರುಕುಳ ನೀಡಬಾರದು. ಅವರು ಶಪಿಸಿದರೇ ಎಂತಹ ಸಾಮ್ರಾಜ್ಯ ವಾಗಿರಲಿ ಅಂತ್ಯಗೊಳ್ಳುವುದು ಖಚಿತ ಎಂದು ಭೀಷ್ಮ ನೀತಿಯಲ್ಲಿ ತಿಳಿಸಿದ್ದಾರೆ.