ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಲು ತಯಾರಿ ನಡೆಸಿದ್ದೇವೆ ಎಂದ ನಿತಿನ್ ಗಡ್ಕರಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಸದಾ ಭಾರತದ ವಿರುದ್ಧ ಸುಖ ಸುಮ್ಮನೆ ಖ್ಯಾತೆ ತೆಗೆದು ಇನ್ನಿಲ್ಲದ ತಕರಾರು ಮಾಡುವ ಪಾಕಿಸ್ತಾನವು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಬಳಿಕವಂತೂ ಭಾರತವನ್ನು ಏನೂ ಮಾಡಲಾಗದೆ ತನ್ನನ್ನು ತಾನೇ ಪರಚಿ ಕೊಳ್ಳುತ್ತಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಎಷ್ಟೇ ಸಭೆಗಳು ನಡೆಸಿ ಇತರ ದೇಶಗಳ ಬೆಂಬಲ ಕೋರಿದರೂ ಕೂಡ ಬೆರಳೆಣಿಕೆಯ ದೇಶಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ದೇಶಗಳು ಭಾರತದ ಪರ ನಿಂತು ಈಗಾಗಲೇ ಆಗಿ ಪಾಕಿಸ್ತಾನಕ್ಕೆ ಶಾಕ್ ನೀಡಿವೆ. ಹೀಗಿರುವಾಗ ಕಳೆದ ಕೆಲವು ತಿಂಗಳುಗಳ ಹಿಂದೆ ಮೋದಿ ಸರ್ಕಾರವು ಪಾಕಿಸ್ತಾನಕ್ಕೆ ಮತ್ತೊಂದು ಭಾರತದ ಒಂದು ನದಿಯ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ತಡೆಯುವ ಕಾರ್ಯದಲ್ಲಿ ನಿರತವಾಗಿದೆ ಎಂಬುದು ತಿಳಿದುಬಂದಿತ್ತು.

ಆದರೆ ಇದೀಗ ಒಂದಲ್ಲ ಒಟ್ಟಾಗಿ ಮೂರು ನದಿಗಳನ್ನು ಭಾರತದಿಂದ ಪಾಕಿಸ್ತಾನಕ್ಕೆ ಹರಿಯದಂತೆ ತಡೆದು ಈ ನೀರನ್ನು ದೆಹಲಿ, ಉತ್ತರಕಾಂಡ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಗಳಿಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ನಿತಿನ್ ಗಡ್ಕರಿ ರವರು ಇಂದು ತಿಳಿಸಿದ್ದಾರೆ. ಈಗಾಗಲೇ ಈ ಮೂರು ನದಿಗಳ ನೀರನ್ನು ತಡೆಯಲು ಕೇಂದ್ರ ಸರ್ಕಾರ ಕೆಲಸ ಆರಂಭ ಮಾಡಿದ್ದು ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಮೂರು ನದಿಗಳ ನೀರನ್ನು ತಡೆದು ನಿಲ್ಲಿಸಲಾಗುವುದು ಹಾಗೂ ಭಾರತದ ರಾಜ್ಯಗಳಿಗೆ ಹರಿಸಲಾಗುವುದು ಎಂದು ನಿತಿನ್ ಗಡ್ಕರಿ ರವರು ಇಂದು ತಿಳಿಸಿದ್ದಾರೆ.