ಪ್ರಸ್ತುತ ಕ್ರಿಕೆಟ್ ಲೋಕದ ಶ್ರೇಷ್ಠ ಏಕದಿನ ತಂಡವನ್ನು ಘೋಷಣೆ ಮಾಡಿದ ಬ್ರಾಡ್ ಹಾಗ್ ! ಪಾರುಪತ್ಯ ಮೆರೆದ ಭಾರತೀಯರು ! ಆಯ್ಕೆಯಾದವರು ಯಾರು ಗೊತ್ತಾ?

ಪ್ರಸ್ತುತ ಕ್ರಿಕೆಟ್ ಲೋಕದ ಶ್ರೇಷ್ಠ ಏಕದಿನ ತಂಡವನ್ನು ಘೋಷಣೆ ಮಾಡಿದ ಬ್ರಾಡ್ ಹಾಗ್ ! ಪಾರುಪತ್ಯ ಮೆರೆದ ಭಾರತೀಯರು ! ಆಯ್ಕೆಯಾದವರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯ ತಂಡದ ಮಾಜಿ ಖ್ಯಾತ ಬೌಲರ್ ಆಗಿರುವ ಬ್ರಾಡ್ ಹಾಗ್ ರವರು, ಪ್ರಸ್ತುತ ಏಕದಿನ ತಂಡಗಳನ್ನು ಗಣನೆಗೆ ತೆಗೆದು ಕೊಂಡು ಶ್ರೇಷ್ಠ ಏಕದಿನ ತಂಡವನ್ನು ರಚಿಸಿದ್ದಾರೆ. ಈ ತಂಡದಲ್ಲಿ ಭಾರತೀಯರು ಪಾರುಪತ್ಯ ಮೆರೆದರೇ, ಕೆಲವು ಅಚ್ಚರಿಯಾಗಿ ತಂಡಕ್ಕೆ ಆಯ್ಕೆಯಾಗಿಲ್ಲ. ವಿವರ ಈ ಕೆಳದಿನಂತಿದೆ.

ವಿಶ್ವದ ಎಲ್ಲಾ ತಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಶ್ರೇಷ್ಠ ತಂಡವನ್ನು ರಚಿಸುತ್ತಿರುವುದಾಗಿ ಹೇಳಿರುವ ಬ್ರಾಡ್ ಹಾಗ್ ರವರ ತಂಡದಲ್ಲಿ ಭಾರತೀಯರು ಪಾರುಪತ್ಯ ಮೆರೆದಿದ್ದಾರೆ. ಬರೋಬ್ಬರಿ 11 ಆಟಗಾರರಲ್ಲಿ ಐದು ಆಟಗಾರರು ಭಾರತೀಯರಾಗಿದ್ದಾರೆ. ಅಷ್ಟೇ ಅಷ್ಟೇ ಅಲ್ಲದೆ ಕ್ಯಾಪ್ಟನ್ ಕೂಡ ಒಬ್ಬ ಭಾರತೀಯ ಆಟಗಾರ.

ಅಚ್ಚರಿಯೆಂಬಂತೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ರವರು ತಂಡಕ್ಕೆ ಆಯ್ಕೆಯಾಗಿಲ್ಲ, ಇದಕ್ಕೆ ಕಾರಣ ಕೇಳಿದರೇ ಪ್ರಸ್ತುತ ಕ್ರಿಕೆಟ್ನಲ್ಲಿ ಇಬ್ಬರು ಆಟಗಾರರಿಗೆ ಅದೃಷ್ಟ ಚೆನ್ನಾಗಿಲ್ಲ. ಮೊದಲಿಗೆ ಆರೊನ್ ಫಿಂಚ್ ರವರು, ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ಕೂಡ ರೋಹಿತ್ ಶರ್ಮ ರವರ ಕನ್ವರ್ಷನ್ ರೇಟ್ ತಲುಪಲು ಸಾಧ್ಯವಾಗಿಲ್ಲ. ಇನ್ನೂ ಕೇನ್ ವಿಲಿಯಮ್ಸನ್ ರವರು ಕೂಡ ಇದೇ ರೀತಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕೊಹ್ಲಿ ರವರ ಸ್ಟ್ರೈಕ್ ರೇಟ್ ಹಾಗೂ ಸರಾಸರಿ ಯನ್ನು ತಲುಪಲು ಸಾಧ್ಯವಾಗಿಲ್ಲ. ಅದೇ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಒಟ್ಟಾಗಿ ಪ್ರಸ್ತುತ ಆಟಗಾರರನ್ನು ಗಣನೆಗೆ ತೆಗೆದುಕೊಂಡು ರಚಿಸಿರುವ ಶ್ರೇಷ್ಠ ತಂಡ ಈ ಕೆಳಗಿನಂತೆ ಇದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಬ್ರಾಡ್ ಹಾಗ್ ರವರ ಪ್ರಸ್ತುತ ಆಟಗಾರರ ಶ್ರೇಷ್ಠ ಏಕದಿನ ತಂಡ: ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ (ನಾಯಕ), ಬಾಬರ್ ಅಜಮ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (WK), ರವೀಂದ್ರ ಜಡೇಜಾ, ಮಿಚೆಲ್ ಸ್ಟಾರ್ಕ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ ಮತ್ತು ಯುಜ್ವೇಂದ್ರ ಚಾಹಲ್.