ಮೋದಿ 2.0 ಮುಂದಿನ ಟಾರ್ಗೆಟ್ ಅನ್ನು ಪರೋಕ್ಷವಾಗಿ ತಿಳಿಸಿದರೇ ರಕ್ಷಣಾ ಸಚಿವರು?? ತಲ್ಲಣ ಸೃಷ್ಟಿಸಿದ ರಾಜನಾಥ್ ಸಿಂಗ್ ಹೇಳಿಕೆ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನರೇಂದ್ರ ಮೋದಿರವರು ಎರಡನೇ ಬಾರಿ ಅಧಿಕಾರಕ್ಕೆ ಏರಿದ ಮೇಲೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ವಿವಾದಿತ ಸಮಸ್ಯೆಗಳನ್ನು ಬಗೆಹರಿಸುತ್ತಾ ಭಾರಿ ವೇಗದಲ್ಲಿ ಮುನ್ನುಗ್ಗುತ್ತಿದ್ದ ಮೋದಿ ನೇತೃತ್ವದ ಸರ್ಕಾರ ಕೋರೋನ ಪರಿಣಾಮದಿಂದ ಇತ್ತೀಚಿಗೆ ಯಾವುದೇ ಹೊಸ ಮಸೂದೆಯನ್ನು ಮಂಡಿಸಿಲ್ಲ.

ಆದರೆ ಕೋರೋನ ಪರಿಸ್ಥಿತಿಗೂ ಮುನ್ನ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಮೂಲೆಮೂಲೆಯಲ್ಲೂ ಚರ್ಚೆ ನಡೆಯುವಂತೆ ಮಾಡಿದ ಮೋದಿ ಸರ್ಕಾರದ ಮುಂದಿನ ಟಾರ್ಗೆಟ್ ಬಗ್ಗೆ ದೇಶದ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ರವರು ಸುಳಿವು ನೀಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಇಂದು ಅವರ ಮಾತುಗಳನ್ನು ಕೇಳಿದರೆ ಹಾಗೆ ಅನಿಸುತ್ತಿದೆ.

ಹೌದು ಸ್ನೇಹಿತರೇ ಇಂದು ಜಮ್ಮು ಜನರ ಜೊತೆ ವರ್ಚುವಲ್ ಸಂವಾದ ನಡೆಸಿರುವ ರಾಜನಾಥ್ ಸಿಂಗ್ ಅವರು ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು. ಇದೇ ಸಮಯದಲ್ಲಿ ಮಾತನಾಡುವಾಗ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಮಾತನಾಡಿರುವ ರಾಜನಾಥ್ ಸಿಂಗ್ ಅವರು ಇನ್ನು ಕೆಲವೇ ಕೆಲವು ದಿನಗಳಲ್ಲಿ ಪಿಓಕೆ ಜನರು ಹಾಗೂ ಆ ಪ್ರದೇಶವು ಪಾಕಿಸ್ತಾನದ ಜೊತೆ ಅಲ್ಲ ಬದಲಾಗಿ ಭಾರತದ ಜೊತೆ ಬದುಕಬೇಕಾಗುತ್ತದೆ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ ಎಂದು ಹೇಳಿದರು. ರಾಜನಾಥ್ ಸಿಂಗ್ ರವರ ಹೇಳಿಕೆ ಬಾರಿ ಮಹತ್ವವನ್ನು ಪಡೆದುಕೊಂಡಿದ್ದು ದೇಶದ ರಕ್ಷಣಾ ಸಚಿವರು ಮೋದಿ ಸರ್ಕಾರದ ಮುಂದಿನ ಟಾರ್ಗೆಟ್ ಯಾವುದು ಎಂಬುದರ ಕುರಿತು ಸುಳಿವು ಬಿಟ್ಟುಕೊಟ್ಟಿದ್ದಾರೆಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿ ಇದೆ.