ಭಾರತ ತಂಡ ಬಲಿಷ್ಠವಾದರೂ ಕೂಡ ಇದರ ಕೊರತೆ ಎದ್ದುಕಾಣುತ್ತಿದೆ ಎಂದ ಗೌತಮ್ ಗಂಭೀರ್ ! ಏನು ಗೊತ್ತಾ?

ಭಾರತ ತಂಡ ಬಲಿಷ್ಠವಾದರೂ ಕೂಡ ಇದರ ಕೊರತೆ ಎದ್ದುಕಾಣುತ್ತಿದೆ ಎಂದ ಗೌತಮ್ ಗಂಭೀರ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಹಲವಾರು ವರ್ಷಗಳಿಂದ ಭಾರತ ತಂಡವು ವಿಶ್ವದಲ್ಲಿಯೇ ಬಲಾಡ್ಯ ತಂಡಗಳಲ್ಲಿ ಸಾಲಿನಲ್ಲಿ ನಿಲ್ಲುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತ ತಂಡವು ಯಾವುದೇ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ.

ಲೀಗ್ ಹಂತಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿ ಕೊನೆಯ ನಾಕ್ಔಟ್ ಪಂದ್ಯಗಳಲ್ಲಿ ಅಂದರೆ ಕ್ವಾಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಸೋಲು ಕಂಡು ನಿರಾಸೆಯಿಂದ ಹಿಂತಿರುಗುತ್ತಿದೆ. ವಿದೇಶಗಳಲ್ಲಿ ಹಲವಾರು ಸರಣಿ ಗೆದ್ದರೂ ಕೂಡ ಐಸಿಸಿ ಟ್ರೋಫಿ ಗೆಲ್ಲುವುದು ಒಂದು ಹೆಮ್ಮೆಯ ಸಂಗತಿ ಎಂದು ಕ್ರಿಕೆಟ್ ಲೋಕ ಅಂದುಕೊಂಡಿದೆ. ಆದಕಾರಣ ಪ್ರತಿಯೊಂದು ತಂಡಗಳು ಐಸಿಸಿ ಟೂರ್ನಮೆಂಟ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಕಾತರರಾಗಿರುತ್ತಾರೆ.

ಇದೀಗ ಇದರ ಕುರಿತು ಮಾತನಾಡಿರುವ ಭಾರತೀಯ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರು ಪ್ರಸ್ತುತ ಭಾರತ ತಂಡವು ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಆದರೆ ನಾಕ್ಔಟ್ ಪಂದ್ಯಗಳಲ್ಲಿ ಬಹಳ ಅತ್ಯಗತ್ಯವಾಗಿರುವ ಆತ್ಮವಿಶ್ವಾಸ ವನ್ನು ತಂಡದ ಆಟಗಾರರು ಹೊಂದಿಲ್ಲ. ಒತ್ತಡವನ್ನು ನಿಭಾಯಿಸುವಲ್ಲಿ ಆಟಗಾರರು ಎಡವುತ್ತಿದ್ದಾರೆ, ಲೀಗ್ ಹಂತಗಳಲ್ಲಿ ಟಾಪ್ ಟೀಮ್ ಆಗಿ ಹೊರಹೊಮ್ಮುವ ತಂಡ ಎಷ್ಟೇ ಟಾಪ್ ಆದರೂ ಕೂಡ ಒತ್ತಡವನ್ನು ನಿಭಾಯಿಸದೇ ಚಾಂಪಿಯನ್ ಹಾಗಲೂ ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಗೌತಮ್ ಗಂಭೀರ್ ಅವರ ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು, ಇದರ ಕುರಿತು ಅಭಿಪ್ರಾಯಗಳನ್ನು ನಿಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.