ಬಾಲಕಾರ್ಮಿಕ ಪದ್ಧತಿಯನ್ನು ತಡೆಯಲು ಹೊಸ ರೀತಿಯ ಆಲೋಚನೆ ನಡೆಸಿ ಐತಿಹಾಸಿಕ ನಿರ್ಧಾರ ಘೋಷಿಸಿದ ಯೋಗಿ ! ಏನು ಗೊತ್ತಾ?

ಬಾಲಕಾರ್ಮಿಕ ಪದ್ಧತಿಯನ್ನು ತಡೆಯಲು ಹೊಸ ರೀತಿಯ ಆಲೋಚನೆ ನಡೆಸಿ ಐತಿಹಾಸಿಕ ನಿರ್ಧಾರ ಘೋಷಿಸಿದ ಯೋಗಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇಡೀ ವಿಶ್ವದಾದ್ಯಂತ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿಯೊಂದು ದೇಶಗಳು ತನ್ನದೇ ಆದ ಕಾರ್ಯಪ್ರವೃತ್ತಿ ಯಲ್ಲಿ ತೊಡಗಿಕೊಂಡಿವೆ. ಭಾರತದಲ್ಲಿಯೂ ಕೂಡ ಬಾಲ ಕಾರ್ಮಿಕ ಪದ್ಧತಿ ಹಲವಾರು ವರ್ಷಗಳಿಂದ ಬಗೆಹರಿಸಲಾಗದ ಸಮಸ್ಯೆಯಾಗಿದೆ.

ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಳಾಗಿರುವ ಯೋಗಿ ಆದಿತ್ಯನಾಥ್ ಅವರು, ಯಾರು ಆಲೋಚನೆ ಮಾಡದ ರೀತಿಯಲ್ಲಿ ಹೊಸ ಆಲೋಚನೆ ನಡೆಸಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪಣತೊಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲ ರಾಜ್ಯಗಳು ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯಲು, ಕಾನೂನು ಬಿಗಿ ಗೊಳಿಸುವುದು ಶಿಕ್ಷೆ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತವೆ. ಆದರೆ ಬಾಲ ಕಾರ್ಮಿಕರ ಪೋಷಕರು ಹೇಳುವುದು ಒಂದೇ ಮಾತು, ನಾವು ನಮ್ಮ ಮನೆಯಲ್ಲಿನ ಆರ್ಥಿಕ ಸಮಸ್ಯೆಯನ್ನು ನಿವಾರಿಸಿ ಕೊಳ್ಳಲು ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದೇವೆ. ಅವರು ಕೆಲಸಕ್ಕೆ ಹೋಗದೆ ಇದ್ದರೆ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎನ್ನುತ್ತಾರೆ.

ಸಾಮಾನ್ಯವಾಗಿ ಪೋಷಕರೊಬ್ಬರು ಇಹಲೋಕ ತ್ಯಜಿಸಿದ್ದರೇ, ಅಥವಾ ಅಂಗವಿಕಲರಾಗಿದ್ದರೇ, ಅಥವಾ ಮನೆಯ ಆಧಾರಸ್ತಂಭ ಆಗಿದ್ದವರು ಅನಾರೋಗ್ಯದಿಂದ ಬಳಲುತ್ತಿದ್ದರೇ, ಜಮೀನು ಇಲ್ಲದೆ ಇರುವವರು ಹಾಗೂ ಮಹಿಳೆಯೊಬ್ಬರು ಕುಟುಂಬವನ್ನು ಮುನ್ನಡೆಸುತ್ತಿರುವ ಕುಟುಂಬದ ಮಗುವನ್ನು ಕೆಲಸಕ್ಕೆ ಕಳುಹಿಸಲಾಗುತ್ತದೆ. ಆದಕಾರಣ ಅಂತವರಿಗೆ ಆರ್ಥಿಕ ನೆರವು ಅತ್ಯಗತ್ಯ, ಇದನ್ನು 57 ಜಿಲ್ಲೆಗಳಲ್ಲಿ ಸರ್ವೆ ಮಾಡುವ ಮೂಲಕ ತಿಳಿದುಕೊಂಡ ಯೋಗಿ ಆದಿತ್ಯನಾಥ ರವರು ಪ್ರತಿ ತಿಂಗಳು ಬಾಲಕರಿಗೆ ಸಾವಿರ ರೂ ಹಾಗೂ ಬಾಲಕಿಯರಿಗೆ 1200 ರೂ ಸಹಾಯಧನ ನೀಡಿ, ಅವರು 8, 9, 10 ತರಗತಿಗಳನ್ನು ಉತ್ತೀರ್ಣರಾದ ತಕ್ಷಣ, ಮುಂದಿನ ತರಗತಿಗೆ ಹೋಗಲು ಉತ್ಸಾಹ ನೀಡಲು ಹೆಚ್ಚುವರಿ ಆರು ಸಾವಿರ ರೂಪಾಯಿಗಳನ್ನು ನೀಡಲು ನಿರ್ಧಾರ ಮಾಡಿ ಆದೇಶ ಹೊರಡಿಸಿದ್ದಾರೆ. ಯೋಗಿ ರವರ ಈ ಆದೇಶದಿಂದ ಟೀ ಸ್ಟಾಲ್, ಹೋಟೆಲ್ ಗಳಲ್ಲಿ ಕೆಲಸ ಮಾಡುವ ಅದೆಷ್ಟೋ ಮಕ್ಕಳ್ಳು ಶಾಲೆ ಹೋಗಬಹುದಾಗಿದೆ.